ಮತ್ತೊಮ್ಮೆ ಬಾಲಿವುಡ್​ ದಿಗ್ಗಜರ ಮುಂದೆ ಯಕ್ಷಗಾನ ಹಿರಿಮೆ ಸಾರಿದ ಡ್ಯಾನ್ಸರ್ ಕಿಶನ್

ಮತ್ತೊಮ್ಮೆ ಬಾಲಿವುಡ್​ ದಿಗ್ಗಜರ ಮುಂದೆ ಯಕ್ಷಗಾನ ಹಿರಿಮೆ ಸಾರಿದ ಡ್ಯಾನ್ಸರ್ ಕಿಶನ್

ಕನ್ನಡದ ಹುಡುಗ ಬಾಲಿವುಡ್​ ಸ್ಟೇಜ್​ ಮೇಲೆ ಸಖತ್​ ಸದ್ದು ಮಾಡ್ತಿರೋದು ತುಂಬಾ ವಿಷಯ ಆದರೆ.. ಬಾಲಿವುಡ್​ ನೆಲದಲ್ಲಿ ಕರ್ನಾಟಕದ ಕಲೆಯನ್ನು ಎತ್ತಿ ತೋರಿಸುವುದು ಸಾಮಾನ್ಯ ವಿಷಯವಲ್ಲ.. ಆದರೆ ಇದು ಸಾಧ್ಯವಾಗಿದೆ.

ಇದನ್ನೂ ಓದಿ:ಮತ್ತೆ ಶುರುವಾಗ್ತಿದೆ ಕನ್ನಡಿಗರ ಹೃದಯ ಗೆದಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ

blank

ಮಲೆನಾಡಿನ ಚಿಕ್ಕಮಗಳೂರು ಹುಡುಗ ಕಿಶನ್,​ ಈ ಮುಂಚೆ ಬಿಗ್​ಬಾಸ್​ ಸೀಸನ್​ 7ರ ಕಂಟೆಸ್ಟೆಂಟ್​ ಆಗಿ ಸಖತ್​ ಸದ್ದು ಮಾಡಿದ್ರು.. ಕನ್ನಡಕ್ಕೆ ಕಿಶನ್​ ಏನು ಅನ್ನೋದು ಬಿಗ್​ಬಾಸ್​ ವೇದಿಕೆಯಲ್ಲಿ ತಿಳಿಯಿತು.
ಕಿಶನ್​ ಒಬ್ಬ ಸೂಪರ್​ ಡ್ಯಾನ್ಸರ್ ಅನ್ನೋದು ಎಲ್ಲರಿಗೂ ಗೊತ್ತು. ಸಾಕಷ್ಟು ಕಾಂಪಿಟೇಷನ್​ಗಳಲ್ಲಿ ಭಾಗಿಯಾಗಿ ವಿನ್​ ಆಗಿದ್ದಾರೆ.. ಅದರಲ್ಲೂ ಹಿಂದಿಯ ಟಾಪ್​ ಡ್ಯಾನ್ಸ್​ ರಿಯಾಲಿಟಿ ಶೋ ‘ಡ್ಯಾನ್ಸ್​ ದಿವಾನೆ’ ವಿನ್ನರ್​ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡಿದ್ರು.

ಇದನ್ನೂ ಓದಿ:ಭಲೇ ಆಟ..! ಮಂಜು-ಅರವಿಂದ್​ಗೆ ಶುರುವಾಗಿದೆ ಫಿನಾಲೆ ಟೆನ್ಷನ್

blank

ಇದೀಗ ಮತ್ತೆ ಕಿಶನ್​ ಡ್ಯಾನ್ಸ್​ ‘ದಿವಾನೆ ಸೀಸನ್​ 3’ ಮೆಟ್ಟಿಲೇರಿದ್ದಾರೆ. ವಿಶೇಷ ಅಂದ್ರೆ ಕಿಶನ್​ ನಮ್ಮ ಕರ್ನಾಟಕ ಜನ ಮೆಚ್ಚಿದ ಕಲೆ ಯಕ್ಷಗಾನವನ್ನು ಪ್ರದರ್ಶನ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿ ಗಣೇಶ್, ಆಚಾರ್ಯ, ನಟ ಗೋವಿಂದ ಖುಷಿಪಟ್ಟಿದ್ದಾರೆ. ತೀರ್ಪುಗಾರರು ಫಿದಾ ಆದರು. ಕನ್ನಡದ ಕಲೆಯನ್ನು ಬಾಲಿವುಡ್ ಜನಕ್ಕೆ ಮತ್ತೊಮ್ಮೆ ನೊಡುವಂತೆ ಮಾಡಿದಕ್ಕೆ ಕಿಶನ್ ಬಗ್ಗೆ ಕನ್ನಡ ಜನರು ಸಂತಸ ಪಟ್ಟಿದ್ದಾರೆ.

ಇದನ್ನೂ ಓದಿ: ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿ ಬಿಗ್​ ಮನೆಯ ಸದಸ್ಯರು

The post ಮತ್ತೊಮ್ಮೆ ಬಾಲಿವುಡ್​ ದಿಗ್ಗಜರ ಮುಂದೆ ಯಕ್ಷಗಾನ ಹಿರಿಮೆ ಸಾರಿದ ಡ್ಯಾನ್ಸರ್ ಕಿಶನ್ appeared first on News First Kannada.

Source: newsfirstlive.com

Source link