ಅಕ್ರಮ ಸಂಬಂಧ- ಪ್ರೀಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಪತಿಯನ್ನು ಪತ್ನಿ ಬಲಿ ಪಡೆದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾಳೆ. ಕೊಲೆ ಮಾಡಿ ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದು, ಬಳಿಕ ಪೊಲೀಸರು ಕೊಲೆಗಾರ್ತಿ ಹಾಗೂ ಪ್ರಿಯಕರ ಇಬ್ಬರನ್ನೂ ಬಂಧಿಸಿದ್ದಾರೆ.

ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಘಟನೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮ ಸಾಕ್ಷಿಯಾಗಿದೆ. ವಡ್ನಾಳ್ ಬನ್ನಿಹಟ್ಟಿ ಗ್ರಾಮದ ನಿವಾಸಿ ಲೋಕೇಶಪ್ಪ (38) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಕುಸುಮ (30), ಪ್ರಿಯಕರ ಪ್ರಭು ಲಿಂಗಪ್ಪ (35) ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ. ಮಹಿಳೆಯ ಪ್ರಿಯಕರ ಪ್ರಭು ಲಿಂಗಪ್ಪ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನು. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಇಬ್ಬರೂ ಸೇರಿ ಕತ್ತು ಹಿಸುಕಿ ಕಳೆದ 27ರ ತಡರಾತ್ರಿ ಮನೆಯಲ್ಲೇ ಕೊಲೆ ಮಾಡಿದ್ದರು.

ಕೊಲೆ ಬಳಿಕ ಕುಸುಮ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಕುಸುಮ ಹಾಗೂ ಪ್ರಭು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿದೆ. ಇದೀಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೆಯಾಗಿದ್ದ ದಂಪತಿ
ಮೃತ ಲೋಕೇಶಪ್ಪ ಹಾಗೂ ಆರೋಪಿ ಪತ್ನಿ ಕುಸುಮ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆಯಾಗಿ ಬೇರೆ ಇದ್ದರಂತೆ. ಗ್ರಾಮಸ್ಥರು ಕೂಡ ರಾಜೀಪಂಚಾಯಿತಿ ಮಾಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ. ಆದರೆ ಕುಸುಮ ಪ್ರಿಯಕರ ಫ್ರಭು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಕತ್ತು ಹಿಸುಕಿ ಪತ್ನಿ ಕೊಲೆಗೈದಿದ್ದಾಳೆ.

The post ಅಕ್ರಮ ಸಂಬಂಧ- ಪ್ರೀಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ appeared first on Public TV.

Source: publictv.in

Source link