ಮೋದಿ ಜೊತೆಗೆ ಬೊಮ್ಮಾಯಿ ಸಿಎಂ ಆಗಿ ಫಸ್ಟ್​ಟೈಂ ಸಭೆ; ಪ್ರಧಾನಿಗೆ ನೀಡಿದ ಮಾಹಿತಿ ಏನು..?

ಮೋದಿ ಜೊತೆಗೆ ಬೊಮ್ಮಾಯಿ ಸಿಎಂ ಆಗಿ ಫಸ್ಟ್​ಟೈಂ ಸಭೆ; ಪ್ರಧಾನಿಗೆ ನೀಡಿದ ಮಾಹಿತಿ ಏನು..?

ಉತ್ತರ ಕನ್ನಡ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯಲ್ಲಿ ಫಸ್ಟ್​ಟೈಂ ಭಾಗಿಯಾಗಿದರು.

ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಬೊಮ್ಮಾಯಿ ಅವರು.. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪ್ರವಾಹದ ಪರಿಸ್ಥಿತಿಯನ್ನ ಅವಲೋಕಿಸಿಕೊಂಡು ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ನಂತರ ಅಂಕೋಲಾ ತಾಲೂಕು ಕಚೇರಿಯಲ್ಲಿ ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಛರೆನ್ಸ್​ನಲ್ಲಿ ಭಾಗಿಯಾದರು.

ಈ ವೇಳೆ ರಾಜ್ಯದಲ್ಲಿ ಎದುರಾಗಿರುವ ಪ್ರವಾಹದ ಪರಿಸ್ಥಿತಿ ಕುರಿತು ಪ್ರಧಾನಿಗೆ ಸಿಎಂ ಮಾಹಿತಿ ನೀಡಿದರು. ಇನ್ನು ಈ ಸಭೆಯಲ್ಲಿ ಶಾಸಕರಾದ ಶಿವರಾಮ್ ಹೆಬ್ಬಾರ್, ರೂಪಾಲಿ ನಾಯ್ಕ್, ಸುನಿಲ್ ನಾಯ್ಕ್, ದಿನಕರ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.

The post ಮೋದಿ ಜೊತೆಗೆ ಬೊಮ್ಮಾಯಿ ಸಿಎಂ ಆಗಿ ಫಸ್ಟ್​ಟೈಂ ಸಭೆ; ಪ್ರಧಾನಿಗೆ ನೀಡಿದ ಮಾಹಿತಿ ಏನು..? appeared first on News First Kannada.

Source: newsfirstlive.com

Source link