ಬೆಂಗಳೂರಲ್ಲಿ ಮತ್ತೆ ಕೊರೊನಾ ಸ್ಫೋಟದ ಆತಂಕ ವ್ಯಕ್ತಪಡಿಸಿದ ಬಿಬಿಎಂಪಿ ಆಯುಕ್ತ ಗುಪ್ತಾ..

ಬೆಂಗಳೂರಲ್ಲಿ ಮತ್ತೆ ಕೊರೊನಾ ಸ್ಫೋಟದ ಆತಂಕ ವ್ಯಕ್ತಪಡಿಸಿದ ಬಿಬಿಎಂಪಿ ಆಯುಕ್ತ ಗುಪ್ತಾ..

ಬೆಂಗಳೂರು: ಮೂರನೇ ಅಲೆಯ ಎಂಟ್ರಿಗೂ ಮುನ್ನವೇ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದಿನದಿಂದ ದಿನಕ್ಕೆ ನಿಧಾನವಾಗಿ ಏರಿಕೆಯಾಗ್ತಾನೆ ಇದೆ ಸೋಂಕಿನ‌ ಸಂಖ್ಯೆ. ಹತ್ತೇ ಹತ್ತು ದಿನಗಳಲ್ಲಿ, ಹತ್ತು ವಾರ್ಡ್​ಗಳಲ್ಲಿ ಕೊರೊನಾ ಸ್ಫೋಟಗೊಂಡಿದೆ.

ಹೌದು 4ನೇ ಹಂತದ ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೆ ಬೆಂಗಳೂರಿಗೆ ಕೊರೊನಾ ಆತಂಕ ಎದುರಾಗಿದೆ. ಲಾಕ್​ಡೌನ್​ ಸಡಿಲಿಕೆ ನಂತರ ಸೋಂಕಿನ ಪ್ರಮಾಣ ನೀರಿಕ್ಷೆಗೂ ಮೀರಿ ಹೆಚ್ಚಾಗ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕಳವಳ ವ್ಯಕ್ತಪಡಿಸಿದ್ದಾರೆ.

blank

ಅನ್ ಲಾಕ್ ಬೆನ್ನಲ್ಲೇ ಕೋವಿಡ್ ನಿಯಮ ಪಾಲನೆ ಆಗದೆ ಇರೋದು ಬೆಳಕಿಗೆ ಬಂದಿದ್ದು, ಸಿಲಿಕಾನ್​ ಸಿಟಿ ಮಂದಿ ಬೇಕಾ ಬಿಟ್ಟಿ ಓಡಾಡುತ್ತಿದ್ದಾರೆ. ಮದುವೆ, ಬರ್ತ್ ಡೇ ಪಾರ್ಟಿ, ಇತರೆ ಪಾರ್ಟಿಗಳು ಆಯೋಜಿಸಿ ನಿಯಮ‌ ಉಲ್ಲಂಘಿಸುತ್ತಿರೊ ಜನರಿಂದ ಮತ್ತೇ ನಗರಕ್ಕೆ ಕೊರೊನಾ ಚಾಯೆ ಆವರಿಸುವ ಲಕ್ಷಣಗಳು ಕಾಣ್ತಿವೆ ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಹೇಳಿದ್ದಾರೆ.

ಇನ್ನೂ ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಈ ಹಿಂದೆ ಹತ್ತು ಕೇಸ್ ಒಂದೇ ಕಡೆ ಪತ್ತೆಯಾದ್ರೆ ಮೈಕ್ರೋ ಕಂಟೈನ್ಮೆಟ್ ಝೋನ್ ಮಾಡ್ತಿತ್ತು ಅದರ ಬದಲಾಗಿ ಈಗ ಮೂರು ಕೇಸ್ ಗಳು‌ ಒಂದೇ ಕಡೆ ಪತ್ತೆಯಾದ್ರೆ ಮೈಕ್ರೋ‌ ಕಂಟೈನ್ಮೆಟ್ ಝೋನ್ ಆಗಿ ಘೋಷಣೆ ಮಾಡ್ತಿದೆ.

ಅಪಾರ್ಟ್‌ಮೆಂಟ್​ ಗಳಲ್ಲಿ ಮತ್ತೆ ಕೊರನಾ ಪ್ರಕರಣಗಳಿ ಏರಿಕೆ ಕಾಣ್ತಿವೆ. ಇವರೆಗೆ ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಶತಕ ದಾಟಿದ್ದು, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಕಂಟೈನ್ಮೆಂಟ್ ಪ್ರದೇಶಗಳನ್ನು, ಗುರುತು ಮಾಡಲಾಗಿದೆ.

ಯಾವ ವಲಯದಲ್ಲಿ ಎಷ್ಟು ಕಂಟೈನ್ಮೆಂಟ್ ಪ್ರದೇಶಗಳು?

ಮಹಾದೇವಪುರ 29, ಬೊಮ್ಮನಹಳ್ಳಿ 27, ಬೆಂಗಳೂರು ಪೂರ್ವ 19, ರಾಜರಾಜೇಶ್ವರಿ ನಗರ 8, ಯಲಹಂಕ 6, ಬೆಂಗಳೂರು ಪಶ್ಚಿಮ 3, ಬೆಂಗಳೂರು ದಕ್ಷಿಣ 4, ದಾಸರಹಳ್ಳಿ 5.

ಜನರನ್ನ ನಂಬಿದ್ರೆ ಸೋಂಕು ಹರಡುವಿಕೆಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ ಅನ್ನೋದನ್ನ ಅರಿತ ಪಾಲಿಕೆ ಕೆಲವು ಟಫ್ ರೂಲ್ಸ್ ಗಳನ್ನ ಜಾರಿ ಮಾಡಲು ಪಾಲಿಕೆ‌ ಚಿಂತನೆ ನಡೆಸಿದೆ ಎನ್ನಲಾಗಿದೆ. ಇನ್ನು ನಗರದಲ್ಲಿ ವ್ಯಾಕ್ಸಿನ್ ಕೊರತೆ ಇದ್ದು ನಿರೀಕ್ಷಿಸಿದಷ್ಟು ವ್ಯಾಕ್ಸಿನ್ ನಮಗೆ ಸಿಗ್ತಿಲ್ಲ, ಹೀಗಾಗಿ ಶೇ.70ರಷ್ಟು ರೀಚ್​ ಆಗಬೇಕಿದ್ದ ವ್ಯಾಕ್ಸಿನೇಶನ್ ಶೇ.60 ರಿಂದ ಶೇ.65ರ ವರೆಗೆ ಮಾತ್ರ ರೀಚ್​ ಆಗ್ತಿದೆ. ಬೇಗ ಬೇಗ ವ್ಯಾಕ್ಸಿನ್​ ಬಂದರೆ ಆದಷ್ಟು ಬೇಗ ರೀಚ್​ ಆಗ್ತೆವೆ ಎಂದು ಗೌರವ ಗುಪ್ತಾ ಹೇಳಿದ್ದಾರೆ.

The post ಬೆಂಗಳೂರಲ್ಲಿ ಮತ್ತೆ ಕೊರೊನಾ ಸ್ಫೋಟದ ಆತಂಕ ವ್ಯಕ್ತಪಡಿಸಿದ ಬಿಬಿಎಂಪಿ ಆಯುಕ್ತ ಗುಪ್ತಾ.. appeared first on News First Kannada.

Source: newsfirstlive.com

Source link