ಜೈಲಿನಲ್ಲಿ ಸಲ್ಮಾನ್​​ ಖಾನ್​ ಮೇಲೆ ಹಲ್ಲೆ ಮಾಡಿದ ರೌಡಿಗಳು…

ಜೈಲಿನಲ್ಲಿ ಸಲ್ಮಾನ್​​ ಖಾನ್​ ಮೇಲೆ ಹಲ್ಲೆ ಮಾಡಿದ ರೌಡಿಗಳು…

ಶಿವಮೊಗ್ಗ: ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಸಲ್ಮಾನ್​​ ಖಾನ್​ ಎನ್ನಲಾದ ವ್ಯಕ್ತಿ ಮೇಲೆ ಹಲ್ಲೆಯಾಗಿದೆ. ಸಲ್ಮಾನ್ ಖಾನ್ ಅಂದರೆ ಬಾಲಿವುಡ್​​​​ ನಟರಲ್ಲ, ಬದಲಿಗೆ ಇತ್ತೀಚೆಗೆ ಜೈಲು ಸೇರಿದ್ದ ರೌಡಿ. ಈ ರೌಡಿಯ ಮೇಲೆ ಗುಂಪು ಹಲ್ಲೆ ನಡೆದಿದೆ.

ವಿವಿಧ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ತುಂಗಾ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸಲ್ಮಾನ್​​ ಖಾನ್. ಹಳೇ ದ್ವೇಷದ ಹಿನ್ನಲೆಯಲ್ಲಿ ಸಲ್ಮಾನ್‌ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ, ಸಲ್ಮಾನ್​ ಖಾನ್​ ಪರಿಸ್ಥಿತಿ ಗಂಭೀರವಾಗಿದ್ದು, ಹಲ್ಲೆ ನಡೆದಿರುವ ವಿಷಯ ತಿಳಿದು ಕಾರಾಗೃಹದ ಮುಂದೆ ಸಲ್ಮಾನ್ ಖಾನ್ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

The post ಜೈಲಿನಲ್ಲಿ ಸಲ್ಮಾನ್​​ ಖಾನ್​ ಮೇಲೆ ಹಲ್ಲೆ ಮಾಡಿದ ರೌಡಿಗಳು… appeared first on News First Kannada.

Source: newsfirstlive.com

Source link