5D ಚಿತ್ರದ ಮೂಲಕ ಮತ್ತೆ ಕಮ್​​ ಬ್ಯಾಕ್​​ ಮಾಡುತ್ತಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್…

5D ಚಿತ್ರದ ಮೂಲಕ ಮತ್ತೆ ಕಮ್​​ ಬ್ಯಾಕ್​​ ಮಾಡುತ್ತಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್…

ಎಸ್ ನಾರಾಯಣ್ ಸ್ಯಾಂಡಲ್​​ವುಡ್​​​ನಲ್ಲಿ ಶಿಸ್ತಿಗೆ ಹೆಸರಾಗಿರುವ ನಿರ್ದೇಶಕ ಅಂದ್ರೆ ತಪ್ಪಲ್ಲ.. ಎಸ್ ನಾರಾಯಣ್ ಸಿನಿಮಾ ಮಾಡ್ತಾರೆ ಅಂದ್ರೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗ್ತಿದ್ದ ಕಾಲವು ಇತ್ತು.. ಅದ್ರೆ ಅದ್ಯಾಕೋ ಗೊತ್ತಿಲ್ಲ ಕಳೆದ 4 ವರ್ಷಗಳಿಂದ ಕಲಾ ಸಾಮ್ರಾಟ್ ಸೈಲೆಂಟ್ ಆಗಿ ಬಿಟ್ಟಿದ್ರು. ಇನ್ನು ಇವ್ರ ಕತೆ ಮುಗೀತು ಅನ್ನೋ ಅಷ್ಟರಲ್ಲಿ ಮತ್ತೆ ನಾರಾಯಣ್ ಫಿನೀಕ್ಸ್​ನಂತೆ ಎದ್ದು ನಿಂತು 5D ಚಿತ್ರದ ಮೂಲಕ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಪ್ರಾರಂಭವಾದ 5ಡಿ ನಾರಾಯಣ್ ಅಂದುಕೊಂಡಂತೆ ಚಿತ್ರೀಕರಣ ನಡೆಯಲಿಲ್ಲ. ಸಾಮಾನ್ಯವಾಗಿ ಎಸ್ ನಾರಾಯಣ್ ಸಿನಿಮಾ ಅಂದ್ರೆ ಒಂದೇ ಶೆಡ್ಯೂಲ್​​ನಲ್ಲಿ ಮುಗಿಸುತ್ತಾರೆ ಅನ್ನೋ ಹೆಗ್ಗಳಿಕೆ ಇದೆ. ಯಾವುದೇ ಸಿನಿಮಾ ಆಗಲಿ ಬೇಗ ಮುಗಿಸಿ ಚಿತ್ರ ಪ್ರೇಮಿಗಳಿಗೆ ಅರ್ಪಿಸಿ ಗೆದ್ದಿದ್ದಾರೆ ಎಸ್ ನಾರಾಯಣ್.

blank

ಆದ್ರೆ ಕೊರೋನ ಹಾವಳಿಯಿಂದ 5D- ಚಿತ್ರದಲ್ಲಿ ಎಸ್ ನಾರಾಯಣ್ ಅವರ ಪ್ಲಾನ್ ಸಂಪೂರ್ಣ ಪ್ಲಾಪ್ ಆಗಿತ್ತು. ಇದಕ್ಕೆ ಜಗ್ಗದ ಕಲಾ ಸಾಮ್ರಾಟ್ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ 5D ಚಿತ್ರದ ಪೋಷನ್ ಪೋಸ್ಟರ್ ಲಾಂಚ್ ಮಾಡಿದ್ರು. ಅಲ್ಲದೆ ಜುಲೈ 2ನೇ ವಾರದಲ್ಲಿ ಮತ್ತೆ ಶುಟಿಂಗ್ ಆಖಾಡಕ್ಕೆ ಇಳಿಯುವುದಾಗಿ ಹೇಳಿದ್ರು.

 

ಈಗ ಹೇಳಿದಂತೆಯೇ ಜುಲೈ 2ನೇ ವಾರದಲ್ಲಿ 5D ಚಿತ್ರದ ಲಾಸ್ಟ್ ಶೆಡ್ಯೂಲ್ ಶೂಟಿಂಗ್ ಅನ್ನು ಎಸ್ ನಾರಾಯಣ್ ಆರಂಭಿಸಿದ್ದಾರೆ. ಅಲ್ಲದೆ ಆಗಸ್ಟ್ 6ಕ್ಕೆ ಚಿತ್ರೀಕರಣವನ್ನು ಪೂರ್ಣಗೊಳಿಸಿ ಚಿತ್ರಕ್ಕೆ ಕುಂಬಳಕಾಯಿ ಹೊಡೆಯಲು ಸಿದ್ದರಾಗಿದ್ದಾರೆ.

The post 5D ಚಿತ್ರದ ಮೂಲಕ ಮತ್ತೆ ಕಮ್​​ ಬ್ಯಾಕ್​​ ಮಾಡುತ್ತಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್… appeared first on News First Kannada.

Source: newsfirstlive.com

Source link