ಟಿ20 ಅಂತಿಮ ಹಣಾಹಣಿ: ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಭಾರತ ಬ್ಯಾಟಿಂಗ್

ಟಿ20 ಅಂತಿಮ ಹಣಾಹಣಿ: ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಭಾರತ ಬ್ಯಾಟಿಂಗ್

ಟೀಮ್​​ ಇಂಡಿಯಾ ಮತ್ತು ಶ್ರೀಲಂಕಾ ಎದುರಿನ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ನಾಯಕ ಶಿಖರ್ ಧವನ್​ ಟಾಸ್​​ ಗೆದ್ದು ಬ್ಯಾಟಿಂಗ್​​​ ಆಯ್ದುಕೊಂಡಿದ್ದಾರೆ. ಸದ್ಯ ಈ ಪಂದ್ಯ ಕುತೂಹಲ ಘಟ್ಟ ತಲುಪಿದ್ದು, ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ತಮ್ಮ ಚಿತ್ತ ನೆಟ್ಟಿವೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆದ್ದು ಬೀಗಿದ್ದು, ಈ ಪಂದ್ಯ ಫೈನಲ್​ ಸ್ವರೂಪ ಪಡೆದುಕೊಂಡಿದೆ. ಇದೀಗ ವೇಗಿ ನವದೀಪ್​ ಸೈನಿ ಕೂಡ ಇಂಜುರಿಗೆ ಒಳಗಾಗಿದ್ದು, ನೆಟ್​ ಬೌಲರ್ ಸಂದೀಪ್​ ವಾರಿಯರ್​​​​​, ಸೈನಿ ಜಾಗಕ್ಕೆ​​​ ಕಣಕ್ಕಿಳಿಯುತ್ತಿದ್ದಾರೆ.

ಇನ್ನು ಏಕದಿನ ಸರಣಿ ಸೋತಿರುವ ಶ್ರೀಲಂಕಾ ತಂಡ ಟಿ20 ಸರಣಿಯನ್ನಾದರೂ ತನ್ನ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ರೆ, ಕೊರೊನಾಘಾತದಿಂದ ಹಿನ್ನಡೆ ಅನುಭವಿರುವ ಟೀಮ್ ಇಂಡಿಯಾ ಪುಟಿದೇಳುವ ಆತ್ಮವಿಶ್ವಾಸದಲ್ಲಿದೆ.

ನಿನ್ನೆಯ ಪಂದ್ಯದಲ್ಲಿ ಪ್ರಮುಖ ಆಟಗಾರರು ಐಸೋಲೆಷನ್​ಗೆ ಒಳಗಾದ ಪರಿಣಾಮ ಧವನ್​ ಪಡೆ, ಕೇವಲ ಐವರು ಬ್ಯಾಟ್ಸ್​ಮನ್​ಗಳೊಂದಿಗೆ ಕಣಕ್ಕಿಳಿದಿತ್ತು.

ಶ್ರೀಲಂಕಾ ತಂಡ: ಅವಿಷ್ಕಾ ಫರ್ನಾಂಡೊ, ಮಿನೋದ್​​ ಭಾನುಕ (ಕೀಪರ್​​), ಧನಂಜಯ ಡಿ ಸಿಲ್ವಾ, ಸದೀರಾ ಸಮರವಿಕ್ರಮ, ದಸುನ್ ಶನಕ (ನಾಯಕ), ರಮೇಶ್ ಮೆಂಡಿಸ್, ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಪಾತುಮ್ ನಿಶಾಂಕ, ಅಕಿಲಾ ಧನಂಜಯ.

ಭಾರತ ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯ​ಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ಕೀಪರ್​), ನಿತಿಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹರ್, ಚೇತನ್ ಸಕಾರಿಯಾ, ಸಂದೀಪ್​ ವಾರಿಯರ್​​.

The post ಟಿ20 ಅಂತಿಮ ಹಣಾಹಣಿ: ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ appeared first on News First Kannada.

Source: newsfirstlive.com

Source link