ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದ ರಸ್ತೆಗಳಿಗೆ ಭಾರೀ ಹಾನಿ; ₹100 ಕೋಟಿ ಬಿಡುಗಡೆಗೆ CM ಸೂಚನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದ ರಸ್ತೆಗಳಿಗೆ ಭಾರೀ ಹಾನಿ; ₹100 ಕೋಟಿ ಬಿಡುಗಡೆಗೆ CM ಸೂಚನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ ಮಾಡಿ ಅಂತಾ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

blank

ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಗ್ರಾಮೀಣ ಭಾಗದಲ್ಲಿ ಮತ್ತೆ ರಸ್ತೆಗಳ ದುರಸ್ತಿಕಾರ್ಯ ಮಾಡುವ ಅಗತ್ಯ ಇದೆ. ಹೀಗಾಗಿ ಕೂಡಲೇ ನೂರು ಕೋಟಿ ಹಣವನ್ನ ಪಿಡಬ್ಲ್ಯೂಡಿ ರಸ್ತೆಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಲು ಕ್ರಮತೆಗೆದುಕೊಳ್ಳಿ ಎಂದು ಸೂಚನೆ ನೀಡಿದರು.

ನೆರೆಯಿಂದ ಜಿಲ್ಲೆಯ ಹಲವೆಡೆ ರಸ್ತೆಗಳು ಹಾನಿಯಾಗಿವೆ. ಈ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಪುನರ್ ನಿರ್ಮಾಣಕ್ಕೆ ನೂರು ಕೋಟಿ ರೂಪಾಯಿ ಹಣ ಬಿಡುಗಡೆ ಆಗಲಿದೆ.

blank

ಇನ್ನು ಪ್ರವಾಹ ವೀಕ್ಷಣೆ ವೇಳೆ ಮುಖ್ಯಂತ್ರಿಗಳು ಯಲ್ಲಾಪುರ ತಾಲೂಕಿನ ಅರಬೈಲು ಘಟ್ಟದಲ್ಲಿ ಗುಡ್ಡ ಕುಸಿತದಿಂದ ಉಂಟಾಗಿರುವ ಹಾನಿಯನ್ನ ವೀಕ್ಷಣೆ ಮಾಡಿದರು. ಇಲ್ಲಿ 10 ಅಧಿಕ ಗುಡ್ಡಗಳು ಕುಸಿದಿದ್ದವು. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುಡ್ಡ ಕುಸಿತಗೊಂಡಿತ್ತು. ಹೀಗಾಗಿ ಶಾಶ್ವತ ಕಾಮಗಾರಿಗೆ ಸುಮಾರು 70 ಕೋಟಿಗೂ ಅಧಿಕ ಅನುದಾನ ನೀಡುವಂತೆ ಹೆದ್ದಾರಿ ಪ್ರಾಧಿಕಾರ ಬೊಮ್ಮಾಯಿ ಬಳಿ ಮನವಿ ಇಟ್ಟಿತ್ತು.

The post ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದ ರಸ್ತೆಗಳಿಗೆ ಭಾರೀ ಹಾನಿ; ₹100 ಕೋಟಿ ಬಿಡುಗಡೆಗೆ CM ಸೂಚನೆ appeared first on News First Kannada.

Source: newsfirstlive.com

Source link