‘ಬೊಮ್ಮಾಯಿ ಆಡಳಿತದಲ್ಲಿ ಮಧ್ಯಪ್ರವೇಶಿಸಲ್ಲ, ಆದ್ರೆ ಸರ್ಕಾರ ತರಲು ಕಾರಣರಾದವ್ರ ಕೈಬಿಡಲು ಬಿಡಲ್ಲ’

‘ಬೊಮ್ಮಾಯಿ ಆಡಳಿತದಲ್ಲಿ ಮಧ್ಯಪ್ರವೇಶಿಸಲ್ಲ, ಆದ್ರೆ ಸರ್ಕಾರ ತರಲು ಕಾರಣರಾದವ್ರ ಕೈಬಿಡಲು ಬಿಡಲ್ಲ’

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಮಧ್ಯಪ್ರವೇಶಿಸಲ್ಲ ಅಂತಾ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ನಗರದ ಚಾಮರಾಜಪೇಟೆಯ ಆರ್​ಎಸ್​ಎಸ್ ಕಚೇರಿ ಕೇಶವಕೃಪಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಬೊಮ್ಮಾಯಿ ಹೋಗಿ ಬಂದ ಬಳಿಕ ಅವರೇ ತೀರ್ಮಾನಿಸ್ತಾರೆ. ಈಗಾಗಲೇ ನಮ್ಮೆಲ್ಲಾ ಕಾರ್ಯಕರ್ತರಿಗೆ ನನ್ನ ಮೇಲೆ ಒತ್ತಡ ಹಾಕಬೇಡಿ ಎಂದಿದ್ದೇನೆ ಎಂದರು. ನಾನು ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಬೊಮ್ಮಾಯಿ ಯಾರು ಸೂಕ್ತವೆಂದು ಭಾವಿಸುತ್ತಾರೋ ಅವರನ್ನ ಆಯ್ಕೆ ಮಾಡಿಕೊಳ್ತಾರೆ. ಮಂತ್ರಿ, ನಿಗಮ-ಮಂಡಳಿ ಸೇರಿದಂತೆ ಎಲ್ಲದಕ್ಕೂ ಪೂರ್ಣ ಸ್ವಾತಂತ್ರ್ಯ ಬೊಮ್ಮಾಯಿಗಿದೆ ಎಂದು ಬಿಎಸ್​ವೈ ಹೇಳಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ; ರಾಜಕೀಯ ವಲಯದಲ್ಲಿ ಅಚ್ಚರಿ

ಬೊಮ್ಮಾಯಿ ಸರ್ಕಾರದಲ್ಲಿ ಸ್ಥಾನ ಬೇಡ ಎಂದ ಜಗದೀಶ್ ಶೆಟ್ಟರ್ ತೀರ್ಮಾನಕ್ಕೆ ಬಿಎಸ್​​ವೈ ಪ್ರತಿಕ್ರಿಯಿಸಿ.. ನನ್ನ ಜೊತೆ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ. ಯುವಕರಿಗೆ ಅವಕಾಶ ಸಿಗಬೇಕಿದೆ ಎಂದು ಈ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ನಾನು ಮುಂದುವರೆಯುವುದಿಲ್ಲ ಎಂದು ಅವರು ತೀರ್ಮಾನಿಸಿದ್ದಾರೆ ಎಂದರು.

ಇದನ್ನೂ ಓದಿ: ಜಗದೀಶ್​ ಶೆಟ್ಟರ್​​ ನನ್ನ ಸ್ನೇಹಿತ; ಮಾಜಿ ಸಿಎಂ ಮುನಿಸಿಗೆ ತೆರೆ ಎಳೆದ ಬೊಮ್ಮಾಯಿ

ವಲಸೆ ಮಾಜಿ ಸಚಿವರ ಮುಂದಿನ ಸ್ಥಿತಿಗತಿಗಳ ಬಗ್ಗೆ ಪ್ರತಿಕ್ರಿಯಿಸಿ.. ಸಿಎಂ ಬೊಮ್ಮಾಯಿ ಜೊತೆ ಮಾತನಾಡುತ್ತೇನೆ. ಸರ್ಕಾರ ತರುವುದಕ್ಕೆ ಕಾರಣಕರ್ತರಾದರೋ ಅವರಿಗೆ ಸ್ಥಾನಮಾನಗಳ ಬಗ್ಗೆ ಚರ್ಚಿಸುವೆ. ಹೊಸ ಸಚಿವರ ಆಯ್ಕೆ ಬಗ್ಗೆ ಬೊಮ್ಮಾಯಿ ಯೋಚನೆ ಮಾಡುತ್ತಾರೆ. ಇದಕ್ಕೆ ನಾನು ಕೂಡ ಅವರಿಗೆ ಸಲಹೆ ಕೊಡುತ್ತೇನೆ ಎಂದರು.

The post ‘ಬೊಮ್ಮಾಯಿ ಆಡಳಿತದಲ್ಲಿ ಮಧ್ಯಪ್ರವೇಶಿಸಲ್ಲ, ಆದ್ರೆ ಸರ್ಕಾರ ತರಲು ಕಾರಣರಾದವ್ರ ಕೈಬಿಡಲು ಬಿಡಲ್ಲ’ appeared first on News First Kannada.

Source: newsfirstlive.com

Source link