ಚಾಮರಾಜನಗರಕ್ಕೆ MSY ಬರ್ಲಿಲ್ಲ, ನೀವಾದ್ರೂ ಬನ್ನಿ; ಬೊಮ್ಮಾಯಿಗೆ ಸವಾಲು​ ಎಸೆದಿದ್ದು ಯಾರು?​​​

ಚಾಮರಾಜನಗರಕ್ಕೆ MSY ಬರ್ಲಿಲ್ಲ, ನೀವಾದ್ರೂ ಬನ್ನಿ; ಬೊಮ್ಮಾಯಿಗೆ ಸವಾಲು​ ಎಸೆದಿದ್ದು ಯಾರು?​​​

ಚಾಮರಾಜನಗರ: ಬಿ.ಎಸ್​​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷ ಅಧಿಕಾರದಲ್ಲಿದ್ದರೂ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕುಟುಕಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಧ್ರುವನಾರಾಯಣ್, ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗಲೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇಲ್ಲಿಯವರೆಗೂ ಜಿಲ್ಲೆಗೆ ಅನುದಾನವಾಗಲೀ, ಯಾವುದೇ ಯೋಜನೆಯಾಗಲೀ ಮಂಜೂರು ಮಾಡಲಿಲ್ಲ ಎಂದು ಕಿಡಿಕಾರಿದರು.

ಇನ್ನು, ತಮ್ಮ ಮೌಢ್ಯತೆಯಿಂದಲೇ ಯಡಿಯೂರಪ್ಪ ನಮ್ಮ ಜಿಲ್ಲೆಗೆ ಆಗಮಿಸಲಿಲ್ಲ. ಹೀಗಿದ್ದರೂ ತನ್ನ ಅಧಿಕಾರ ಕಳೆದುಕೊಂಡರು. ಸಿದ್ದರಾಮಯ್ಯ ಚಾಮರಾಜನಗರಕ್ಕೆ 12 ಬಾರಿ ಭೇಟಿ ನೀಡಿದರೂ ಐಷು ವರ್ಷ ತನ್ನ ಸಣಪೂರ್ಣ ಅಧಿಕಾರ ಪೂರ್ಣಗೊಳಿಸಿದರು ಎಂದರು.

blank

ಸಿದ್ದರಾಮಯ್ಯ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನ ನಿರ್ಮೂಲನೆ ಮಾಡಿದ್ದರು. ತಾವು ಮಾತ್ರ ಮೂಢನಂಬಿಕೆಗೆ ಜೋತು ಬಿದ್ದು ಭೇಟಿ ಕೊಡಲಿಲ್ಲ. ಸತ್ತವರ ಕುಟುಂಬಗಳಿಗೆ ತಾವು ಸಾಂತ್ವಾನವೂ ಹೇಳಲಿಲ್ಲ ಎಂದು ಬಿಎಸ್​ವೈ ವಿರುದ್ಧ ಕೆಂಡಕಾರಿದರು.

ನೀವಾದ್ರೂ ಬನ್ನಿ

ರಾಜ್ಯದ ನೂತನ ಸಿಎಂ ಬಸವರಾಜ್​​ ಬೊಮ್ಮಾಯಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಬೇಕು. ಆ್ಯಕ್ಸಿಜನ್​​ ದುರಂತದಲ್ಲಿ ಸಾವನಪ್ಪಿದ ಕುಟುಂಬಗಳನ್ನ ಭೇಟಿ ಮಾಡಿ ಸಾಂತ್ವಾನ ಹೇಳಬೇಕು. ಹಾಗೆಯೇ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

The post ಚಾಮರಾಜನಗರಕ್ಕೆ MSY ಬರ್ಲಿಲ್ಲ, ನೀವಾದ್ರೂ ಬನ್ನಿ; ಬೊಮ್ಮಾಯಿಗೆ ಸವಾಲು​ ಎಸೆದಿದ್ದು ಯಾರು?​​​ appeared first on News First Kannada.

Source: newsfirstlive.com

Source link