2 ವರ್ಷದ ನಂತರ ಮನೆ ಊಟ ಸವಿದ ಒಲಿಂಪಿಕ್ ಮೆಡಲ್ ವಿನ್ನರ್; ಡೆಡಿಕೇಷನ್ ಅಂದ್ರೆ ಸುಮ್ನೆನಾ?

2 ವರ್ಷದ ನಂತರ ಮನೆ ಊಟ ಸವಿದ ಒಲಿಂಪಿಕ್ ಮೆಡಲ್ ವಿನ್ನರ್; ಡೆಡಿಕೇಷನ್ ಅಂದ್ರೆ ಸುಮ್ನೆನಾ?

ಭಾರತದ ತಾರಾ ವೈಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ಧಾರೆ. 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು ಒಟ್ಟು 202 ವೇಟ್‌ಲಿಫ್ಟ್‌ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಅಲ್ಲದೇ, ಮಣಿಪುರ ರಾಜ್ಯದ ಪೊಲೀಸ್​ ಅಧೀಕ್ಷಕರಾಗಿ ನೇಮಕವೂ ಆಗಿದ್ರು. ಆದ್ರೆ ಅವರ ಈ ಸಾಧನೆ ಹಿಂದೆ ಅಪ್ರತಿಮ ಪರಿಶ್ರಮ.. ತ್ಯಾಗ ಇದ್ದಿದ್ದು ಬಹುತೇಕರಿಗೆ ಇರಲಿಲ್ಲ. ಇನ್​ ಫ್ಯಾಕ್ಟ್ ಅವರು ಮನೆಯಲ್ಲ ಊಟ ಮಾಡಿ.. ಮನೆ ಊಟ ಮಾಡಿ ಬರೋಬ್ಬರಿ ಎರಡು ವರ್ಷ ಕಳೆದಿತ್ತು. ಅತ್ಯಂತ ಕಠಿಣ ಡಯಟ್ ಅನ್ನ ಅವರು ಪಾಲಿಸಬೇಕಿತ್ತು. ಇದೇ ಕಾರಣದಿಂದಾಗಿ ನೆಚ್ಚಿನ ಪಿಜ್ಜಾವನ್ನ ಅವರು ಟಚ್ ಕೂಡ ಮಾಡಿರಲಿಲ್ಲ. ಮನೆಯಲ್ಲಿ ಊಟವನ್ನೂ ಮಾಡಿರಲಿಲ್ಲ. ಆದ್ರೆ ಇದೀಗ,  ಒಲಿಂಪಿಕ್ ಮೆಡಲ್ ಪಡೆದ ನಂತರ ಮೀರಾಬಾಯಿ ಇದೀಗ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ತಿದ್ದಾರೆ.

ಎರಡು ವರ್ಷ ಬರೀ ಅಭ್ಯಾಸದಲ್ಲಿ ತೊಡಗಿದ್ದ ಮೀರಾಬಾಯಿ ಟೋಕಿಯೋದಲ್ಲಿ ಬೆಳ್ಳಿ ಪದಕ ಗೆದ್ದು, ಭಾರತಕ್ಕೆ ಮರಳಿದ್ದರು. ಇದಾದ ನಂತರ, ಇವತ್ತು ತಾವು ತಮ್ಮ ಮನೆಗೆ ಹೋಗಿದ್ದು, ಮನೆ ಊಟವನ್ನ ಸವಿದಿದ್ದಾರೆ. ಅಲ್ಲದೇ, ಅದನ್ನ ತಾವು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ‘‘2 ವರ್ಷದ ನಂತರ ಮನೆಯ ಊಟ ತಿನ್ನೋ ಖುಷಿ ತುಂಬಾಯಿದೆ’’ ಅಂತ ಬರೆದುಕೊಂಡಿದ್ದಾರೆ. ಅಂದಹಾಗೆ ಮೊನ್ನೆ ತಾನೆ ಅವರು ಪಿಜ್ಜಾವನ್ನ ಕೂಡ ಸವಿದಿದ್ದರು.

 

The post 2 ವರ್ಷದ ನಂತರ ಮನೆ ಊಟ ಸವಿದ ಒಲಿಂಪಿಕ್ ಮೆಡಲ್ ವಿನ್ನರ್; ಡೆಡಿಕೇಷನ್ ಅಂದ್ರೆ ಸುಮ್ನೆನಾ? appeared first on News First Kannada.

Source: newsfirstlive.com

Source link