ಬಿಜೆಪಿ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ; ಕಾಂಗ್ರೆಸ್​ನಿಂದ BSY ಆಡಳಿತ ವೈಫಲ್ಯಗಳ ಬಗ್ಗೆ ಪುಸ್ತಕ ರಿಲೀಸ್

ಬಿಜೆಪಿ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ; ಕಾಂಗ್ರೆಸ್​ನಿಂದ BSY ಆಡಳಿತ ವೈಫಲ್ಯಗಳ ಬಗ್ಗೆ ಪುಸ್ತಕ ರಿಲೀಸ್

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ನಡೆಸಿದ 2 ವರ್ಷಗಳ ಆಡಳಿತ ವೈಫಲ್ಯ ಕುರಿತ ಪುಸ್ತಕವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ.. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2 ವರ್ಷ ಪೂರೈಸಿ, ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದ್ರು. ಸಂಕಷ್ಟದ ಸಮಯದಲ್ಲಿ ರಾಜ್ಯವನ್ನು ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿದ್ದೀವಿ ಅಂದ್ರು. ಯಡಿಯೂರಪ್ಪ ನಿರ್ಗಮಿಸಿದ್ದಾರೆ, ಬಸವರಾಜು ಬೊಮ್ಮಾಯಿಗೆ  ಅಭಿನಂದಿಸಿ, ಶುಭವಾಗಲಿ ಎಂದು ಹಾರೈಸುವೆ.

ಶಶಿಕಲಾ ಜೊಲ್ಲೆಯವರ ರಾಜೀನಾಮೆ ಪಡೆಯಲಿಲ್ಲ
ಈ ಸರ್ಕಾರ ಹೇಗೆ ಬಂತೆಂದು ತಮಗೆಲ್ಲ ಗೊತ್ತು. ಆಪರೇಷನ್ ಕಮಲ ಮಾಡಿ, ಅಧಿಕಾರಕ್ಕೆ ಬಂದ್ರು. 2018ರಲ್ಲಿ ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಯಡಿಯೂರಪ್ಪಗೆ ರಾಜ್ಯಪಾಲರು ಸರ್ಕಾರ ಮಾಡಲು ಅವಕಾಶ ಮಾಡಿಕೊಟ್ರು. ಆದರೆ ಯಡಿಯೂರಪ್ಪಗೆ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ರಾಜೀನಾಮೆ ಕೊಟ್ರು. ಶಾಸಕರನ್ನು ಖರೀದಿಸಿ, ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ್ರು.

ಕಳೆದ 2 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನ ಮಾಡ್ಲೇ ಇಲ್ಲ. ಯಡಿಯೂರಪ್ಪರ ಸಾಧನೆ ಏನೂ ಇಲ್ಲ. ಸಂಕಷ್ಟಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಏಂತಾರೆ. ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ದುಡ್ಡು ಹೊಡೆದಿದ್ದಾರೆ. ಶಶಿಕಲಾ ಜೊಲ್ಲೆಯವರ ರಾಜೀನಾಮೆ ಪಡೆಯಲಿಲ್ಲ, ಯಡಿಯೂರಪ್ಪ ಈ ವಿಚಾರವಾಗಿ ಏನೂ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸೋಮಣ್ಣ ಇದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು, ಅದಿವೇಶನ ಕರೆಯಿರಿ ಎಂದು ಆಗ್ರಹಿಸಿರುವೆ. ಭ್ರಷ್ಟಾಚಾರದ ಬಗ್ಗೆ ನಾನು ಹೇಳುವ ಬದಲು ಯತ್ನಾಳ್ ಕೇಳಿ. ಜೊಲ್ಲೆ ಸ್ಟಿಂಗ್ ಆಪರೇಷನ್ ಸುಳ್ಳಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

The post ಬಿಜೆಪಿ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ; ಕಾಂಗ್ರೆಸ್​ನಿಂದ BSY ಆಡಳಿತ ವೈಫಲ್ಯಗಳ ಬಗ್ಗೆ ಪುಸ್ತಕ ರಿಲೀಸ್ appeared first on News First Kannada.

Source: newsfirstlive.com

Source link