ಪ್ರಧಾನಿಗಳನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ

ಬೆಂಗಳೂರು: ಸಂಪುಟದ ಹಗ್ಗಜಗ್ಗಾಟದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಳೆ ಬೆಳಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಮೊದಲ ಭೇಟಿಯಲ್ಲೇ ಸಂಪುಟ ರಚನೆಗೆ ಒಪ್ಪಿಗೆ ನೀಡೋ ಸಾಧ್ಯತೆ ಕಡಿಮೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರೋ ಸಿಎಂ ಬೊಮ್ಮಾಯಿ, 2-3 ದಿನ ಆದ ಬಳಿಕ ಮತ್ತೆ ದೆಹಲಿಗೆ ಹೋಗ್ತೇನೆ. ಆಗ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ

ನಾಳೆ ಮಧ್ಯಾಹ್ನ 1 ಗಂಟೆಗೆ ರಾಜ್ಯದ ಸಂಸದರು, ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟು, ಸಂಪುಟ ವಿಸರ್ಜನೆ ಆಗಿ 3 ದಿನವಾದರೂ ಸಚಿವರು ಮಾತ್ರ ಮುಂದುವರಿದಿದ್ದಾರಾ..? ಅನ್ನೋದು ಈಗ ಚರ್ಚೆ. ಯಾಕಂದ್ರೆ, ಬಿಎಸ್‍ವೈ ಸರ್ಕಾರದಲ್ಲಿ ಸಚಿವರಾಗಿದ್ದ ಬಹುತೇಕ ಸಚಿವರು ಈಗಲೂ ಮಂತ್ರಿಗಿರಿ ಗುಂಗಿನಲ್ಲೇ ಇದ್ದಾರೆ. ಟ್ವಿಟರ್ ಖಾತೆಗಳ ಪ್ರೊಫೈಲ್‍ನಲ್ಲಿ ಈಗಲೂ ‘ಸಚಿವ’ ಅಂತಲೇ ಇದೆ. ಸಚಿವರಾಗಿದ್ದವರಿಗೆ ಮಾಜಿಗಳು ಅನ್ನಿಸಿಕೊಳ್ಳೋಕೆ ಇಷ್ಟ ಇಲ್ಲದಂತೆ ಕಂಡಿದೆ.

The post ಪ್ರಧಾನಿಗಳನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ appeared first on Public TV.

Source: publictv.in

Source link