ರಾಜ್​ಕುಂದ್ರಾ ನೀಲಿ ಚಿತ್ರ ಕೇಸ್​; ನಟಿ ಶೆರ್ಲಿನ್ ಚೋಪ್ರಾಗೆ ಶಾಕ್

ರಾಜ್​ಕುಂದ್ರಾ ನೀಲಿ ಚಿತ್ರ ಕೇಸ್​; ನಟಿ ಶೆರ್ಲಿನ್ ಚೋಪ್ರಾಗೆ ಶಾಕ್

ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ಮೇಲೆ ಕೇಳಿಬಂದಿರುವ ನೀಲಿ ಚಿತ್ರ ತಯಾರಿಕೆ ಆರೋಪ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಬಾಲಿವುಡ್ ನಟಿ ಹಾಗೂ ಮಾಡೆಲ್ ಶೆರ್ಲಿನ್ ಚೋಪ್ರಾಗೆ ಶಾಕ್ ಆಗಿದೆ.

ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್​ ಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ. ಇದರಿಂದ ಶೆರ್ಲಿನ್ ಚೋಪ್ರಾಗೆ ಬಂಧನದ ಭೀತಿ ಮತ್ತಷ್ಟು ಹೆಚ್ಚಾಗಿದೆ. ನೀಲಿ ಚಿತ್ರ ತಯಾರಿಕೆ ವಿಚಾರದಲ್ಲಿ ರಾಜ್​ಕುಂದ್ರಾ ಜೊತೆ ಶೆರ್ಲಿನ್ ಚೋಪ್ರಾರ ಪಾಲು ಕೂಡ ಇದೆ ಅನ್ನೋ ಆರೋಪ ಇದೆ.

ಇದನ್ನೂ ಓದಿ:ಅಶ್ಲೀಲ ಸಿನಿಮಾ ನಿರ್ಮಾಣ; ಇಡಿ ಎಂಟ್ರಿಯಿಂದ ಕುಂದ್ರಾ ಕೋಟೆಯಲ್ಲಿ ಕಂಪನ

ಇದೇ ಕಾರಣಕ್ಕೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಚೋಪ್ರಾಗೆ ಸಮನ್ಸ್​​ ನೀಡಿ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇದೇ ಅಶ್ಲೀಲ ಚಿತ್ರ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರ ನ್ಯಾಯಾಂಗ ಬಂಧನವನ್ನು ಸೆಷನ್ ಕೋರ್ಟ್ 14 ದಿನಗಳ ವಿಸ್ತರಿಸಿದೆ.

ಇದನ್ನೂ ಓದಿ: ನೀಲಿ ಚಿತ್ರದಲ್ಲಿ ನಟಿಸೋದು ತಪ್ಪೇನಲ್ಲ; ಸಲ್ಮಾನ್​​ ಖಾನ್​​ ಮಾಜಿ ಲವರ್..

The post ರಾಜ್​ಕುಂದ್ರಾ ನೀಲಿ ಚಿತ್ರ ಕೇಸ್​; ನಟಿ ಶೆರ್ಲಿನ್ ಚೋಪ್ರಾಗೆ ಶಾಕ್ appeared first on News First Kannada.

Source: newsfirstlive.com

Source link