ಸೈಟಿನ ಕನಸು ನುಚ್ಚು ನೂರು; ಮೋಸ ಹೋದ್ರಾ 30ಕ್ಕೂ ಹೆಚ್ಚು ಪೊಲೀಸರು..?

ಸೈಟಿನ ಕನಸು ನುಚ್ಚು ನೂರು; ಮೋಸ ಹೋದ್ರಾ 30ಕ್ಕೂ ಹೆಚ್ಚು ಪೊಲೀಸರು..?

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ರಾಜಾಜಿನಗರದ ಮೂರನೆ ಹಂತದಲ್ಲಿರುವ ಬೃಂದಾವನ ಪ್ರಾಪರ್ಟಿಸ್ ಕಂಪನಿ ನೂರಾರು ಜನರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಐದಾರು ಲಕ್ಷಕ್ಕೆ ಸೈಟ್​​ ನೀಡೋದಾಗಿ ಹಲವರಿಗೆ ವಂಚಿಸಲಾಗಿದೆ ಎನ್ನಲಾಗಿದೆ. 

ಕೇವಲ 5-6 ಲಕ್ಷ ರೂಪಾಯಿಗೆ ಸೈಟ್​ ನೀಡುವುದಾಗಿ ಹೇಳಿ ಬೃಂದಾವನ ಪ್ರಾಪರ್ಟಿಸ್ ಕಂಪನಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿತ್ತು ಎಂಬ ದೂರು ದಾಖಲಾಗಿತ್ತು. ಕಳೆದ ಐದು ವರ್ಷಗಳಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಬೃಂದಾವನ ಪ್ರಾಪರ್ಟಿ ಮಾಲೀಕ ಈಗ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೃಂದಾವನ ಪ್ರಾಪರ್ಟಿ ದಿನೇಶ್​​ ಗೌಡ ಎಂಬಾತ ಹೀಗೆ ನೂರಾನು ಮಂದಿಗೆ ಮೋಸ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಹಣ ಹೂಡಿಕೆ ಮಾಡಿದ ಸಾರ್ವಜನಿಕರು ಬೃಂದಾವನ ಪ್ರಾಪರ್ಟಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ.

ಬಡವರು, ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್​​​ಗಳು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ತಾವರೆಕರೆ, ಹೆಸರಘಟ್ಟ, ನೆಲಮಂಗಲ, ಕಡೆ ಜಾಗ ತೋರಿಸಿರುವ ಆರೋಪಿಗಳು 30ಕ್ಕೂ ಹೆಚ್ಚು ಪೊಲೀಸರಿಂದಲೂ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಸೈಟಿನ ಕನಸು ನುಚ್ಚು ನೂರು; ಮೋಸ ಹೋದ್ರಾ 30ಕ್ಕೂ ಹೆಚ್ಚು ಪೊಲೀಸರು..? appeared first on News First Kannada.

Source: newsfirstlive.com

Source link