ಸೆ.15ರೊಳಗೆ 2ಎ ಮೀಸಲಾತಿ ಸಿಗಬೇಕು -ಬೊಮ್ಮಾಯಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಸೆ.15ರೊಳಗೆ 2ಎ ಮೀಸಲಾತಿ ಸಿಗಬೇಕು -ಬೊಮ್ಮಾಯಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು: ಸರ್ಕಾರ ಕೊಟ್ಟಿರುವ ಭರವಸೆಯನ್ನ ಸೆಪ್ಟೆಂಬರ್ 15ರೊಳಗೆ ಈಡೇರಿಸದಿದ್ರೆ ಮತ್ತೆ ಹೋರಾಟ ಮಾಡ್ತೀವಿ ಅಂತಾ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆಯನ್ನ ನೀಡಿದ್ದಾರೆ.

ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.. ಪಂಚಮಸಾಲಿಗೆ 2ಎ ಮೀಸಲಾತಿಯನ್ನ ಸೆಪ್ಟೆಂಬರ್ 15 ರೊಳಗೆ ನೀಡುವುದಾಗಿ ಸರ್ಕಾರ ಹೇಳಿತ್ತು. ಅಂದಿನ ಕಾನೂನು ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ‌ ಹಾಗೂ ಇಂದಿನ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರು ಸೆಪ್ಟೆಂಬರ್‌15ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಆಗಸ್ಟ್ 15ರಿಂದ ಸೆಪ್ಟೆಂಬರ್ 30ರವರೆಗೂ ರಾಜ್ಯಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ತೀರ್ಮಾನ ಮಾಡಲಾಗಿದೆ ಎಂದರು.

ಪಾದಯಾತ್ರೆಗೆ ನಿರ್ಧಾರ
ಮೀಸಲಾತಿ ಬಗ್ಗೆ ಸರ್ಕಾರಕ್ಕೆ ನೆನಪು ಮಾಡಲು ಮಲೈಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಮಾಡಲಾಗುತ್ತದೆ. ರಾಜ್ಯದ ಪ್ರತಿ ತಾಲೂಕಿನಲ್ಲೂ ಜಾಗೃತಿ ಪಾದಯಾತ್ರೆ ಮಾಡಲಾಗುತ್ತದೆ. ಸರ್ಕಾರ ಭರವಸೆ ಈಡೇರಿಸದಿದ್ದರೆ ಅಕ್ಟೋಬರ್ 1ರಂದು ಧರಣಿ ನಡೆಸಲಾಗುತ್ತದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆಯನ್ನ ನೀಡಿದ್ದಾರೆ.

ಈಗಾಗಲೇ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗ್ತಿದೆ. ಉತ್ತರ ಕರ್ನಾಟಕದವರು ಸಿಎಂ ಆಗಿದ್ದಾರೆ. ಪ್ರವಾಹ ತಡೆಯಲು ಶಾಸ್ವತ ಪರಿಹಾರ ಕೊಡಬೇಕು. ಬಸವರಾಜ್ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು, ಹೀಗಾಗಿ ಪ್ರವಾಹಕ್ಕೆ ತುತ್ತಾಗಂತೆ ನೋಡಿಕೊಳ್ಳಬೇಕು ಎಂದರು.

The post ಸೆ.15ರೊಳಗೆ 2ಎ ಮೀಸಲಾತಿ ಸಿಗಬೇಕು -ಬೊಮ್ಮಾಯಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ appeared first on News First Kannada.

Source: newsfirstlive.com

Source link