15 ಅಡಿ ಕಂದಕಕ್ಕೆ ಬಿದ್ದ ಕಾರ್ – ಮಕ್ಕಳು ಸೇರಿ ಹತ್ತು ಜನ ಪಾರು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸುಮಾರು 15 ಅಡಿ ಆಳದ ಕಂದಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ವಾಟುಕುಡಿಗೆ ಎಂಬ ಗ್ರಾಮದಲ್ಲಿ ನಡೆದಿದೆ.

ಕಾರಿನಲ್ಲಿ ಐವರು ಮಕ್ಕಳು ಸೇರಿದಂತೆ ಒಟ್ಟು ಹತ್ತು ಜನ ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ದೊಡ್ಡ ಮಟ್ಟದ ಅನಾಹುತವಾಗಿಲ್ಲ. ಆನೇಕಲ್ ನಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಾಳೆಹೊನ್ನೂರು ಸಮೀಪದ ವಾಟುಕುಡಿಗೆ ಗ್ರಾಮದ ಸೇತುವೆಗೆ ಡಿಕ್ಕಿ ಹೊಡೆದು ಕಾರು ಸುಮಾರು 15 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

ಕಾರು ಕೆಳಕ್ಕೆ ಬೀಳುವಾಗ ಕಾರಿನ ಮುಂಭಾಗ ತಲೆಕೆಳಗಾಗಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಯಾರಿಗೂ ಯಾವುದೇ ಗಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರಿನಲ್ಲಿ ಒಟ್ಟು 10 ಜನ ಪ್ರಯಾಣ ಮಾಡುತ್ತಿದ್ದರು. ಐವರು ಮಕ್ಕಳು, ಮೂರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ

The post 15 ಅಡಿ ಕಂದಕಕ್ಕೆ ಬಿದ್ದ ಕಾರ್ – ಮಕ್ಕಳು ಸೇರಿ ಹತ್ತು ಜನ ಪಾರು appeared first on Public TV.

Source: publictv.in

Source link