ಮಾಸ್ ಲುಕ್​ನಲ್ಲಿ ಯೋಗಿ ಮಿಂಚಿಂಗ್​​​​.. ಬಾಕ್ಸ್​ ಆಫೀಸ್​ನಲ್ಲಿ ಎದುರಾಳಿಗಳಾಗ್ತಾರ ‘ಮಾವ-ಅಳಿಯ’

ಮಾಸ್ ಲುಕ್​ನಲ್ಲಿ ಯೋಗಿ ಮಿಂಚಿಂಗ್​​​​.. ಬಾಕ್ಸ್​ ಆಫೀಸ್​ನಲ್ಲಿ ಎದುರಾಳಿಗಳಾಗ್ತಾರ ‘ಮಾವ-ಅಳಿಯ’

ನಟ ವಿಜಯ್ ಮತ್ತು ಲೂಸ್ ಮಾದ ಖ್ಯಾತಿಯ ಯೋಗೇಶ್​ಗೆ ಬಣ್ಣದ ಬದುಕು ಕಟ್ಟಿ ಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿ ಮಾವ ವಿಜಯ್ ಅಳಿಯ ಯೋಗಿ ಜೋಡಿ ಮೋಡಿ ಮಾಡಿತ್ತು.. ಅದಾದ ಮೇಲೆ ಈ ಡೆಡ್ಲಿ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಕಾಣಿಸಲೇ ಇಲ್ಲ. ಅದ್ರೆ ಈಗ ಮಾವ ಮತ್ತು ಅಳಿಯ ಬಾಕ್ಸ್ ಆಫೀಸ್ನಲ್ಲಿ ಎದುರಾಳಿಗಳಾಗಿ ನಿಂತಿದ್ದಾರೆ.

ದುನಿಯಾ ಚಿತ್ರ ರಿಲೀಸ್​ ಆಗಿ ಬರೋಬ್ಬರೀ 14 ವರ್ಷಗಳು ಪೂರೈಸಿದೆ. ಈ ಚಿತ್ರದಲ್ಲಿ ಅಮಾಯಕ ಶಿವು ಹಾಗೂ ಡೆಡ್ಲಿ ಲೂಸ್ ಮಾದ ಪಾತ್ರಗಳು ಕನ್ನಡಿಗರ ಹೃದಯ ಗೆದ್ದಿದ್ದವು. ಶಿವು ಪಾತ್ರದಲ್ಲಿ ವಿಜಯ್ ಮನೋಜ್ಞವಾಗಿ ಅಭಿನಯಿಸಿದ್ರು. ಅದೇ ರೀತಿ ನಿರ್ಮಾಪಕ ಟಿ.ಪಿ ಸಿದ್ಧರಾಜು ಪುತ್ರ ಯೋಗೇಶ್ ಲೂಸ್ ಮಾದನ ಪಾತ್ರಧಾರಿಯಾಗಿ ಮಿಂಚಿದ್ರು. ನಂತರ ನಾಯಕ ನಟನಾಗಿ ಬಡ್ತಿನೂ ಪಡೆದು ಕೊಂಡ್ರು. ದುನಿಯಾ ಚಿತ್ರ ನೋಡಿದ ಪ್ರೇಕ್ಷಕ ಪ್ರಭುಗಳು ಮತ್ತೆ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗಿಯನ್ನು ಒಟ್ಟಿಗೆ ಸ್ಕ್ರೀನ್ ಮೇಲೆ ನೋಡುವ ಕಾತರದಲ್ಲಿದ್ರು.ಅದ್ರೆ, ಅಳಿಯ ಮಾವನ ಜೋಡಿಯ ಬಾಕ್ಸ್ ಆಫೀಸ್ ಕಾದಾಟವನ್ನು ನೋಡುವ ಭಾಗ್ಯ ಅಭಿಮಾನಿ ದೇವರುಗಳಿಗೆ ಸಿಗುವ ಸೂಚನೆ ಸಿಕ್ಕಿದೆ.

ಯೆಸ್.. ಲೂಸ್ ಮಾದ ಯೋಗಿ ಅಭಿನಯದ ಔಟ್ ಅಂಡ್ ಔಟ್ ಮಾಸ್ ಚಿತ್ರ ಲಂಕೆ ಹಾಗೂ ಭೂಗತ ಜಗತ್ತಿನ ನೈಜ ಘಟನೆಯ ವಿಜಯ್ ಅಭಿನಯದ ಸಲಗ ಚಿತ್ರ ರಿಲೀಸ್​ಗೆ ರೆಡಿಯಾಗಿವೆ. ವಿಶೇಷ ಅಂದ್ರೆ ಈ ಎರಡು ಮಾಸ್ ಚಿತ್ರಗಳು ವರಮಹಾಲಕ್ಮೀ ಹಬ್ಬದ ದಿನವೇ ತೆರೆ ಮೇಲೆ ಬರಲು ತುದಿಗಾಲಲ್ಲಿ ನಿಂತಿವೆ. ಈಗಾಗಲೇ ಸಲಗ ಚಿತ್ರತಂಡ ಆಗಸ್ಟ್ 20ಕ್ಕೆ ಥಿಯೇಟರ್ಗೆ ಬರೋದಾಗಿ ಅನೌಸ್ ಮಾಡಾಗಿದೆ..ಈ ಹಿನ್ನೆಲೆ ಆಗಸ್ಟ್ 20ಕ್ಕೆ ಅಳಿಯಾ ಯೋಗಿ ಹಾಗೂ ವಿಜಯ್ ಅವ್ರ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಗುದ್ದಾಟಕ್ಕೆ ಸಿದ್ಧವಾಗ್ತಿವೆ.

ಲಂಕೆ ಚಿತ್ರತಂಡ ಕಳೆದ ವಾರವಷ್ಟೇ ಒಂದು ಮಾಸ್​ ಸಾಂಗ್​ ರಿಲಿಸ್​ ಮಾಡಿದ್ರು. ಈ ಹಾಡಿಗೆ ಯಶಸ್ಸು ಸಿಕ್ತಿದೆ. ಕಳೆದ ಬುಧವಾರ ಮೆಲೋಡಿ ಹಾಡನ್ನು ರಿಲೀಸ್ ಮಾಡಿ ಮಾಧ್ಯಮಗಳ ಮುಂದೆ ಬಂದು ಲಂಕೆ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. ಸದ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಭರ್ತಿಗೆ ಅವಕಾಶ ನೀಡಿದೆ. ಅದರೂ ಲಂಕೆ ಚಿತ್ರವನ್ನು ರಿಲೀಸ್​ ಮಾಡಲು ಚಿತ್ರತಂಡ ಧೈರ್ಯವಾಗಿ ಮನಸ್ಸು ಮಾಡಿದ್ದಾರೆ.

blank

ಲಂಕೆ ಹಾಗೂ ಸಲಗ ಚಿತ್ರಗಳ ಬಾಕ್ಸ್​ ಆಫೀಸ್​ ಕಾದಾಟಕ್ಕೆ ನಗುತ್ತಲೆ ಯೋಗಿ ಪ್ರತಿಕ್ರಿಯೆ ನೀಡಿದ್ದು, ನಾವು 50 ಪರ್ಸೆಂಟ್​ ಇದ್ರು ರಿಲೀಸ್​ ಮಾಡ್ತೇವೆ. ಅದರೆ ಸಲಗ ಚಿತ್ರ ಆಗಸ್ಟ್​ನಲ್ಲಿ ಸರ್ಕಾರ 100 ಪರ್ಸೆಂಟ್​ ಭರ್ತಿಗೆ ಅವಕಾಶ ಕೊಟ್ರೆ ಮಾತ್ರ ರಿಲೀಸ್ ಮಾಡ್ತಾರೆ. ಒಂದು ವೇಳೆ 100 ಪರ್ಸೆಂಟ್ ಭರ್ತಿಗೆ ಅವಕಾಶ ಸಿಕ್ರೆ ಲಂಕೆ ಚಿತ್ರವನ್ನು ಒಂದು ವಾರ ಮುಂಚಿತವಾಗಿ ರಿಲೀಸ್​ ಮಾಡ್ತಿವಿ ಅಂತ ಯೋಗಿ ತಿಳಿಸಿದ್ದಾರೆ.

ಅದೇನೆ ಇರಲಿ ಸದ್ಯಕ್ಕೆ ಸಲಗ ಮತ್ತು ಲಂಕೆ ಚಿತ್ರಗಳನ್ನು ಆಗಸ್ಟ್​ 20ಕ್ಕೆ ರಿಲೀಸ್​ ಮಾಡುವುದಾಗಿ ಚಿತ್ರತಂಡಗಳು ಅನೌನ್ಸ್​ ಮಾಡಿವೆ. ವರಮಹಾಲಕ್ಷ್ಮಿ ಹಬ್ಬದ ದಿನ ಸಿನಿಮಾ ರಿಲೀಸ್​ ಆಗುವ ವರ ಯಾವ ಚಿತ್ರಕ್ಕೆ ಸಿಗಲಿದೆ ಕಾದು ನೋಡಬೇಕು.

Image

The post ಮಾಸ್ ಲುಕ್​ನಲ್ಲಿ ಯೋಗಿ ಮಿಂಚಿಂಗ್​​​​.. ಬಾಕ್ಸ್​ ಆಫೀಸ್​ನಲ್ಲಿ ಎದುರಾಳಿಗಳಾಗ್ತಾರ ‘ಮಾವ-ಅಳಿಯ’ appeared first on News First Kannada.

Source: newsfirstlive.com

Source link