ಶತಾಯಗತಾಯ ಡಿಸಿಎಂ ಪಟ್ಟ ಪಡೆಯಲು ಪಣ.. ಆರ್​.ಅಶೋಕ್​​ ಡೆಲ್ಲಿ ದಂಡಯಾತ್ರೆ

ಶತಾಯಗತಾಯ ಡಿಸಿಎಂ ಪಟ್ಟ ಪಡೆಯಲು ಪಣ.. ಆರ್​.ಅಶೋಕ್​​ ಡೆಲ್ಲಿ ದಂಡಯಾತ್ರೆ

ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಆರಂಭವಾಗ್ತಿದ್ದಂತೆ ಡಿಸಿಎಂ ಪಟ್ಟಕ್ಕಾಗಿ ಬೆಂಗಳೂರು ಬಿಜೆಪಿಯ ಕಟ್ಟಾಳು ಆರ್​​.ಅಶೋಕ್ ಬಿಗಿ ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ಮಿಸ್ ಆಗಿದ್ದ ಡಿಸಿಎಂ ಸ್ಥಾನವನ್ನ ಈ ಬಾರಿ ಹೇಗಾದ್ರೂ ಮಾಡಿ ಪಡೆಯಲೇ ಬೇಕು ಅಂತ ಅಶೋಕ್ ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ದೆಹಲಿ ದಂಡಯಾತ್ರೆಯನ್ನೂ ಕೈಗೊಂಡಿದ್ದಾರೆ.

ಡಿಸಿಎಂ ಪಟ್ಟಕ್ಕೆ ಡೆಲ್ಲಿ ದಂಡಯಾತ್ರೆ ಕೈಗೊಂಡಿರುವ ಆರ್​ ಅಶೋಕ್
ಅಶೋಕ್​​​​, ಬೆಂಗಳೂರು ಬಿಜೆಪಿಯ ಕಟ್ಟಿದ ಕಟ್ಟಾಳು. ಅನಂತ್​​ಕುಮಾರ್​​ ಜೊತೆ ನೆರಳಾಗಿ ದುಡಿದ ನಾಯಕ. ಈ ದುಡಿತಕ್ಕೆ ಪಕ್ಷವೂ ಕೂಡಾ ಪ್ರತಿಫಲ ನೀಡಿದೆ. ಆದ್ರೆ, ಕಳೆದ ಬಾರಿ ಕಳಚಿದ್ದ ಡಿಸಿಎಂ ಸ್ಥಾನ ಈ ಬಾರಿ ದಕ್ಕಿಸಿಕೊಳ್ಳಲು ಪಣತೊಟ್ಟಿದ್ದಾರೆ. ಬೆಂಗಳೂರಿನ ಮೇಲೆ ಪಾರಮ್ಯ ಸ್ಥಾಪಿಸಲು, ಸಾಮ್ರಾಟ ಪಟ್ಟ ಉಳಿಸಿಕೊಳ್ಳಲು ಡೆಲ್ಲಿ ದಂಡಯಾತ್ರೆ ಕೈಗೊಂಡಿದ್ದಾರೆ.

blank

ಇನ್ನು ಮೊನ್ನೆಯಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಆರ್ ಅಶೋಕ್ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಡಿಸಿಎಂ ಪಟ್ಟಕ್ಕಾಗಿ ಬಿಗಿ ಪಟ್ಟು ಹಿಡಿದಿದ್ದಾರೆ. ಇಂದು ಸಿಎಂ ಬೊಮ್ಮಾಯಿ ಕೂಡ ದೆಹಲಿಗೆ ತೆರಳುತ್ತಿರುವುದರಿಂದ ಪಕ್ಷದ ವರಿಷ್ಠರ ಮೇಲೆ ಒತ್ತಡಹಾಕಲು ಅದೂ ಕೂಡ ಸಹಕಾರಿಯಾಗಲಿದೆ. ಜೊತೆಗೆ ಹಿಂದಿನ ಅನುಭವ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಅನ್ನೋ ಅಸ್ತ್ರಗಳನ್ನು ಮುಂದಿಟ್ಟು ಡಿಸಿಎಂ ಹುದ್ದೆ ಪಡೆಯಲು ಕಸರತ್ತು ನಡೆಸ್ತಿದ್ದಾರೆ.

ಯಡಿಯೂರಪ್ಪರ ವಿಶ್ವಾಸದ ನಾಯಕ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತರು ಆಗಿ ಅಶೋಕ್ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ರಾಜಕೀಯ ಭವಿಷ್ಯ ಗಟ್ಟಿಗೊಳಿಸಿಕೊಳ್ಳಲು ಡಿಸಿಎಂ ಪಟ್ಟ ಅನಿವಾರ್ಯ ಅನ್ನೋದು ಅಶೋಕ್ ಚಿಂತನೆಯಾಗಿದೆ. ಇದರ ಜೊತೆಗೆ ಆರು ಪ್ರಮುಖ ಲೆಕ್ಕಾಚಾರಗಳ ಮೂಲಕ ಡಿಸಿಎಂ ಸ್ಥಾನಕ್ಕೆ ಆರ್ ಅಶೋಕ್ ತಂತ್ರಗಾರಿಕೆ ಹೆಣೆದಿದ್ದಾರೆ. ಆ ತಂತ್ರಗಾರಿಕೆಗಳು ಯಾವುವು ಅಂತ ನೋಡೋದಾದ್ರೆ.

blank

‘ಸಾಮ್ರಾಟ’ ಪಟ್ಟಕ್ಕೆ ತಂತ್ರಗಾರಿಕೆ!
ಆರ್ ಅಶೋಕ್ ಬೆಂಗಳೂರು ನಗರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದು, ಡಿಸಿಎಂ ಆದ್ರೆ ಒಕ್ಕಲಿಗ ಸಮುದಾಯದ ನೇತೃತ್ವ ವಹಿಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರ ಆರ್ ಅಶೋಕ್ ಅವರದ್ದಾಗಿದೆ. ಇದರ ಜೊತೆಗೆ ಈಗ ಡಿಸಿಎಂ ಆಗಿದ್ದರೆ, 2023ರ ಚುನಾವಣೆಯಲ್ಲಿ ವೈಯಕ್ತಿಕವಾಗಿ ಹೆಚ್ಚು ಲಾಭ ಆಗುತ್ತೆ. ಇನ್ನು ಸದ್ಯ ಲಿಂಗಾಯತ ಸಮುದಾಯಕ್ಕೆ ಹೈಕಮಾಂಡ್​​​ ಸಿಎಂ ಸ್ಥಾನ ನೀಡಿದೆ. 2023ರ ನಂತರ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನದ ಸಿಗಬಹುದು. ಸದ್ಯ ಈಗ ಡಿಸಿಎಂ ಸ್ಥಾನ ಸಿಕ್ಕರೆ ಆ ಮೂಲಕ, ವರಿಷ್ಠರಿಗೆ ಮತ್ತಷ್ಟು ಹತ್ತಿರವಾಗಬಹುದು ಅನ್ನೋ ಲೆಕ್ಕಾಚಾರ ಆರ್ ಅಶೋಕ್ ಅವರದ್ದಾಗಿದೆ.

ಒಟ್ಟಿನಲ್ಲಿ ಭವಿಷ್ಯದ ದೃಷ್ಟಿ ಹಾಗೂ ಬೆಂಗಳೂರಿನ ಮೇಲೆ ಪಾರಮ್ಯ ಸ್ಥಾಪಿಸಲು, ಡಿಸಿಎಂ ಪಟ್ಟ ದಕ್ಕಿಸಿಕೊಳ್ಳಲೇಬೇಕು ಅಂತ ಆರ್ ಅಶೋಕ್ ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಡಿಸಿಎಂ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತನ್ನೂ ನಡೆಸ್ತಿದ್ದಾರೆ. ಆದ್ರೆ ಇದಕ್ಕೆ ಹೈಕಮಾಂಡ್ ಮಣೆ ಹಾಕುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಬರಹ: ಶಿವಪ್ರಸಾದ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​

The post ಶತಾಯಗತಾಯ ಡಿಸಿಎಂ ಪಟ್ಟ ಪಡೆಯಲು ಪಣ.. ಆರ್​.ಅಶೋಕ್​​ ಡೆಲ್ಲಿ ದಂಡಯಾತ್ರೆ appeared first on News First Kannada.

Source: newsfirstlive.com

Source link