13 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಸರಣಿ ಸೋತ ಟೀ ಇಂಡಿಯಾ

13 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಸರಣಿ ಸೋತ ಟೀ ಇಂಡಿಯಾ

ಫೈನಲ್​ ಸ್ವರೂಪ ಪಡೆದುಕೊಂಡಿದ್ದ ಅಂತಿಮ ಹಣಾಹಣಿಯಲ್ಲಿ ನೀರಸ ಪ್ರದರ್ಶನ ತೋರಿದ ಧವನ್ ಬಳಗ 7 ವಿಕೆಟ್​​ಗಳ ಸೋಲು ಕಂಡಿದ್ದು, 3 ಪಂದ್ಯಗಳ ಟಿ20 ಸರಣಿಯನ್ನು 1-2ರಲ್ಲಿ ಸೋಲುಂಡಿದೆ. ಆ ಮೂಲಕ ಬರೋಬ್ಬರಿ 13 ವರ್ಷಗಳ ಬಳಕ ಶ್ರೀಲಂಕಾ ವಿರುದ್ಧ ಎಲ್ಲಾ ಮಾದರಿ ಕ್ರಿಕೆಟ್​​ನ ಅಂತಾರಾಷ್ಟ್ರೀಯ ಸರಣಿಯಲ್ಲಿ ಸೋಲುಂಡಿದೆ. ಮೊದಲು ಬ್ಯಾಟ್​ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ ಕೇವಲ 81 ರನ್ ಗಳಿಸಿತ್ತು. ಶ್ರೀಲಂಕಾ 14.3 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 82 ರನ್​ ಗಳಿಸಿ ಗುರಿಮುಟ್ಟಿತ್ತು.

ಒತ್ತಡಕ್ಕೆ ಒಳಗಾದ್ರಾ ಟೀಮ್​ ಇಂಡಿಯಾ ಬ್ಯಾಟರ್ಸ್​​?
ಟಾಸ್​ ಗೆದ್ದು ಬ್ಯಾಟಿಂಗ್​​​ಗಿಳಿದ ಟೀಮ್​ ಇಂಡಿಯಾ, ಎದುರಾಳಿ ತಂಡಕ್ಕೆ ಸವಾಲಿನ ಗುರಿ ನೀಡುವ ಭರವಸೆ ವ್ಯಕ್ತಪಡಿಸಿತ್ತು. ಆದರೆ ಲಂಕಾ ಬೌಲರ್​ಗಳ ಕರಾರುವಕ್​ ದಾಳಿಗೆ ಧವನ್​ ಪಡೆ, ಪೆವಿಲಿಯನ್​ ಪರೇಡ್​ ನಡೆಸಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್​ ಧವನ್, ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ಶಾಕ್​​ ನೀಡಿದ್ರು.

ಧವನ್ ಬಳಿಕ ಕಣಕ್ಕಿಳಿದ ದೇವದತ್​​ ಪಡಿಕ್ಕಲ್​ ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. 9 ರನ್​ ಗಳಿಸಿದ್ದ ಪಡಿಕ್ಕಲ್, ರಮೇಶ್​​ ಮೆಂಡಿಸ್​ ಬೌಲಿಂಗ್​​ನಲ್ಲಿ LBW ಬಲೆಗೆ ಬಿದ್ದು ನಿರಾಸೆ ಮೂಡಿಸಿದ್ರು.

ಬ್ಯಾಕ್​​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾಕ್ಕೆ ಸಂಜು ಸ್ಯಾಮ್ಸನ್ ಮತ್ತು ಋತುರಾಜ್​ ಗಾಯಕ್ವಾಡ್ ಕೂಡ ಆಸರೆಯಾಗಲಿಲ್ಲ.​ ಗಾಯಕ್​ವಾಡ್​ ಮತ್ತು ಸಂಜು ಜೋಡಿಗೆ ಒಂದೇ ಓವರ್​​ನಲ್ಲಿ ವನಿಂದು ಹಸರಂಗ, ಗೇಟ್​ಪಾಸ್​ ನೀಡಿದ್ರು. ಇವರಿಬ್ಬರ ಬೆನ್ನಲ್ಲೇ, ಸಿಕ್ಕ ಅವಕಾಶವನ್ನ ಮತ್ತೆ ಕೈ ಚೆಲ್ಲಿದ ನಿತೀಶ್​​ ರಾಣಾ ಕೂಡ ಪೆವಿಲಿಯನ್​ ಸೇರಿದ್ರು.

ಕೆಲ ಕಾಲ ಹೋರಾಟ ನಡೆಸಿದ ಉಪ ನಾಯಕ ಭುವನೇಶ್ವರ್​​ ಕುಮಾರ್​ ಆಟವೂ 16 ರನ್​ಗಳಿಗೆ ಅಂತ್ಯವಾಯ್ತು. ತಂಡದ ಮೊತ್ತವನ್ನ 50ರ ಗಡಿ ದಾಟಿಸಲು ನೆರವಾದ ಭುವಿ, ಶನಕ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾದ್ರೆ, ವರುಣ್​ ಚಕ್ರವರ್ತಿ ಹಸರಂಗಗೆ 4ನೇ ಬಲಿಯಾದ್ರು. ಇದಾದ ಬೆನ್ನಲ್ಲೆ ದಸುನ್​​ ಶನಕ ಬೌಲಿಂಗ್​ನಲ್ಲಿ ರಾಹುಲ್​ ಚಹರ್​ ಡಗೌಟ್​ ಸೇರಿದ್ರು.

ಕೊನೆಯವರೆಗೂ ಹೋರಾಟ ನಡೆಸಿದ ಕುಲ್ದೀಪ್​ ಯಾದವ್​ 23 ರನ್​ ಮತ್ತು ಸಕಾರಿಯಾ 5ರನ್​ ಗಳಿಸಿ ಅಜೇಯರಾಗಿ ಉಳಿದ್ರು. ಅಂತಿಮವಾಗಿ ಟೀಮ್​ ಇಂಡಿಯಾ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 81 ರನ್ ಗಳಿಸಲಷ್ಟೇ ಶಕ್ತವಾಯ್ತು. ಲಂಕಾ ಪರ ವನಿಂದು ಹಸರಂಗ ನಾಲ್ಕು ವಿಕೆಟ್​ ಕಬಳಿಸಿ ಮಿಂಚಿದ್ರೆ, ನಾಯಕ ಶನಕ 2 ವಿಕೆಟ್​ ಕಬಳಿಸಿದ್ರು.

2-1 ಅಂತರದಲ್ಲಿ ಸರಣಿ ಗೆದ್ದ ಆತಿಥೇಯ ತಂಡ..
ಏಕದಿನ ಸರಣಿ ಗೆದ್ದು ಟಿ20 ಸರಣಿ ಮೇಲೂ ಕಣ್ಣಿಟ್ಟಿದ್ದ ಭಾರತಕ್ಕೆ ಶ್ರೀಲಂಕಾ ತಿರುಗೇಟು ನೀಡಿದೆ. ಸುಲಭ ಗುರಿ ಬೆನ್ನತ್ತಿದ ಸಿಂಹಳೀಯರು ಟಿ20 ಸರಣಿಯನ್ನ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

ಟೀಮ್​ ಇಂಡಿಯಾ ನೀಡಿದ ಸಾಧಾರಣ ಗುರಿಯನ್ನ ಬೆನ್ನತ್ತಿದ ಶ್ರೀಲಂಕಾ ತಂಡ, ತಾಳ್ಮೆಯುತ ಇನ್ನಿಂಗ್ಸ್​ ಕಟ್ಟಿತು. ಗುರಿಯನ್ನ ಸುಲಭವಾಗಿ ಬೆನ್ನತ್ತಬೇಕಿದ್ದ ಸಿಂಹಳೀಯರು, ರನ್​ಗಳಿಸೋಕೆ ಪರದಾಡಿತು. ಆರಂಭದಲ್ಲೇ ಎರಡು ವಿಕೆಟ್​ ಕಳೆದುಕೊಂಡು ಲಂಕಾ ಕೂಡ ಆಘಾತಕ್ಕೆ ಒಳಗಾಯ್ತು. ಅವಿಷ್ಕಾ ಫರ್ನಾಂಡೋ ಮತ್ತು ಮಿನೋದ್ ಭಾನುಕ ಬೇಗನೇ ಔಟಾದ್ರು. ರಾಹುಲ್​​ ಚಹರ್ ನಡೆಸಿದ ಅದ್ಭುತ ಸ್ಪಿನ್​​ ಮೋಡಿಗೆ ಈ ಜೋಡಿ, ಬ್ಯಾಕ್​​​ ಟು ಬ್ಯಾಕ್​ ವಿಕೆಟ್​​ ಒಪ್ಪಿಸಿ ಪೆವಿಲಿಯನ್​ ಸೇರಿದ್ರು.

ಆದರೆ ಮೊದಲೆರಡು ವಿಕೆಟ್ ಕಳೆದುಕೊಂಡರೂ​ ಲಂಕಾ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇನ್ನು ರಕ್ಷಣಾತ್ಮಕ ಆಟವಾಡ್ತಿದ್ದ ಸದೀರಾ ಸಮರವಿಕ್ರಮ ಕೂಡ, ಚಹರ್​ ಬೌಲಿಂಗ್​​ನಲ್ಲಿ ಕ್ಲೀನ್​ ಬೋಲ್ಡ್​​​ ಆದ್ರು.

ಮೂರು ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ವೇಗವಾಗಿ ಧನಂಜಯ ಡಿ ಸಿಲ್ವಾ, ಸತತ ಬೌಂಡರಿಗಳನ್ನ ಸಿಡಿಸಿದ್ರು. ಬೌಲಿಂಗ್​ನಲ್ಲಿ ಮಿಂಚಿದ ವನಿಂದು ಹಸರಂಗ, ಧನಂಜಯಗೆ ಬ್ಯಾಟಿಂಗ್​ನಲ್ಲೂ ಸಾಥ್​​ ನೀಡಿದ್ರು.

ಧನಂಜಯ 23 ಮತ್ತು ಹಸರಂಗ 14 ರನ್​ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿ, ಅಜೇಯರಾಗಿ ಉಳಿದ್ರು. ಟೀಮ್​ ಇಂಡಿಯಾ ನೀಡಿದ್ದ 82 ರನ್​ಗಳ ಗುರಿಯನ್ನ 14.4 ಓವರ್​ಗಳನ್ನೇ ಮುಟ್ಟಿದ ಶ್ರೀಲಂಕಾ, ಆ ಮೂಲಕ 2-1 ಅಂತರದಲ್ಲಿ ಟಿ20 ಸರಣಿ ಗೆದ್ದು ಮಾನ ಉಳಿಸಿಕೊಳ್ತು.

The post 13 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಸರಣಿ ಸೋತ ಟೀ ಇಂಡಿಯಾ appeared first on News First Kannada.

Source: newsfirstlive.com

Source link