ತೆಲುಗಿಗೆ ಕಾಲಿಟ್ಟ ‘ರೌಡಿ ಬೇಬಿ’ ನಿಶಾ ರವಿಕೃಷ್ಣ

ತೆಲುಗಿಗೆ ಕಾಲಿಟ್ಟ ‘ರೌಡಿ ಬೇಬಿ’ ನಿಶಾ ರವಿಕೃಷ್ಣ

ಗಟ್ಟಿಮೇಳ ಜೀ ಕನ್ನಡದಲ್ಲಿ ಪ್ರಸಾವಾಗ್ತಾಯಿರುವ ವಿಭಿನ್ನ ಕಥಾಹಂದರದ ಧಾರವಾಹಿ.. ಮೊನ್ನೆ ಮೊನ್ನೆಯಷ್ಟೆ ಬರೊಬ್ಬರಿ 600 ಎಪಿಸೋಡ್​ಗಳನ್ನು ಬರ್ಜರಿಯಾಗಿ ಯಶಸ್ವಿಯಾಗಿ ಮುನ್ನುಗ್ತಾಯಿದೆ..

ಗಟ್ಟಿಮೇಳ ಅಂದಾಕ್ಷಣ ಮೊದಲು ತಲೆಗೆ ಬರುವಂತವರು ವೇದಾಂತ್​ ವಶಿಷ್ಟ ಹಾಗೂ ಅಮೂಲ್ಯಾ. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.. ಇವರ ಕೋಳಿ ಜಗಳ, ಪ್ರೀತಿ. ಕೇರಿಂಗ್​ ಎಲ್ಲವು ಜನಕ್ಕೆ ಅಚ್ಚುಮೆಚ್ಚು.. ಅದರಲ್ಲೂ ಅಮುಲ್ಯಾ ಅವರ ಪಾತ್ರವನ್ನು ಜನ ತುಂಬಾ ಮೆಂಚಿಕೊಂಡಿದ್ದಾರೆ..

blank

ಬಜಾರಿ ಅಮೂಲ್ಯಾ ಅಂದ್ರೆ ನಿಶಾ ರವಿಕೃಷ್ಣ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಹುಡುಗಿ.. ಅವಳ ಒರಟ ಮಾತು ಮೃದು ಮನಸ್ಸು ಫ್ಯಾಮಿಲಿ ಮೇಲಿರುವ ಪ್ರೀತಿ.. ಅದರಲ್ಲೂ ಯಾರಿಗೂ ಯಾವುದಕ್ಕೂ ಕೇರ್​ ಮಾಡದ ಆ್ಯಟಿಟ್ಯೂಡ್​ ಎಷ್ಟೋ ಹೆಣ್ಣು ಮಕ್ಕಳಿಗೆ ಇಷ್ಟವಾಗಿದೆ.. ಗಂಡು ಮಕ್ಕಳು ಮಾತ್ರವಲ್ಲ ನಮ್ಮ ಹೆಣ್ಮಕ್ಳು ಕೂಡಾ ಇಷ್ಟ ಪಟ್ಟಿದ್ದಾರೆ.

ಅಮುಲ್ಯಾ ಪಾತ್ರದ ಮೂಲಕ ಹವ ಕ್ರಿಯೇಟ್​ ಮಾಡಿರುವ ನಿಶಾ ಇದೀಗಾ ಸಖತ್​ ಫೇಮಸ್​. ಸದ್ಯ ನಿಶಾ ಗಟ್ಟಿಮೇಳದ ಹೊರತುಪಡಿಸಿ ಇನ್ನೊಂದು ಪ್ರಾಜೆಕ್ಟ್​ಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಇಷ್ಟು ದಿನ ಕನ್ನಡ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಿಶಾ ಇದೀಗಾ ತೆಲುಗಿನಲ್ಲಿ ಸದ್ದು ಮಾಡಲು ಹೊರಟಿದ್ದಾರೆ.

ಹೌದು ತೆಲುಗಿನಲ್ಲಿ ಮುತ್ಯಮಂತಮುದ್ದು ಎಂಬ ಹೊಸ ಪ್ರಾಜೆಕ್ಟ್​ನಲ್ಲಿ ಲೀಡ್​ ರೋಲ್​ ಮೂಲಕ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಸದ್ಯ ಈ ಧಾರಾವಾಹಿಯ ಪ್ರೋಮೋ ರಿಲೀಸ್​ ಆಗಿದ್ದು ಇದೊಂದು ಮಿಡಲ್​ ಕ್ಲಾಸ್​ ಫ್ಯಾಮಿಲಿ ಹಾಗೂ ರಿಚ್​ ಕುಟುಂಬ ಮಧ್ಯ ನಡೆಯುವ ಕಥೆಯಾಗಿದೆ ಎಂಬುವುದು ತಿಳಿಯತ್ತೆ.

blank

ಇನ್ನೂ ನಿಶಾ ತೆಲುಗಿಗೆ ಎಂಟ್ರಿಯಾಗ್ತಾಯಿರೊದು ಕನ್ನಡ ಜನಕ್ಕೆ ಎಷ್ಟು ಕುಕ್ಷಿ ನೀಡಿದಿಯೋ ಅಷ್ಟೆ ಖುಷಿ ತೆಲುಗ ಮಂದಿಯಲ್ಲಿದೆ. ನಿಶಾ ತಮ್ಮ ಇನ್​​ಸ್ಟಾಗ್ರಾಂ್​ ಪೇಜ್​ನಲ್ಲಿ ಪ್ರೋಮೋ ಶೇರ್​ ಮಾಡ್ತಾಯಿಂದಂತೆ ಕನ್ನಡ ಹಾಗೂ ತೆಲುಗು ಮಂದಿಯಾ ಕಮೆಂಟ್ಸ್​ ಹಾಗೂ ಲೈಕ್ಸ್​ಗಳ ಸುರಿ ಮಳೆಯೇ ಹರಿದು ಬಂದಿದೆ.

ಈಗಾಗಲೆ ಕನ್ನಡದ ಸಾಕಷ್ಟು ನಟ ನಟಿಯಾರು ತೆಲುಗು ಪ್ರಾಜೆಕ್ಟ್​ಗಳನ್ನು ಮಾಡ್ತಾಯಿದ್ದು. ಅಲ್ಲಿ ಕೂಡಾ ಸಖತ್​ ಹೆಸರು ಮಾಡಿದ್ದಾರೆ. ಇದೀಗಾ ಆ ಲೀಸ್ಟ್​ಗೆ ನಿಶಾ ಕೂಡಾ ಆ್ಯಡ್​ ಆಗಲಿದ್ದಾರೆ. ಒಟ್ಟಿನಲ್ಲಿ ನ್ಯೂ ಪ್ರಾಜೆಕ್ಟ್​ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗ್ತಾಯಿರು ನಿಶಾ ಅವರಿಗೆ ನಮ್ಮ ಕಡೆಯಿಂದ ಆಲ್​ ದ ಬೆಸ್ಟ್​.

The post ತೆಲುಗಿಗೆ ಕಾಲಿಟ್ಟ ‘ರೌಡಿ ಬೇಬಿ’ ನಿಶಾ ರವಿಕೃಷ್ಣ appeared first on News First Kannada.

Source: newsfirstlive.com

Source link