ಮಿಜೊರಾಂಗೆ ತೆರಳದಂತೆ ಅಸ್ಸಾಂ ಜನರಿಗೆ ಸೂಚನೆ

ಮಿಜೊರಾಂಗೆ ತೆರಳದಂತೆ ಅಸ್ಸಾಂ ಜನರಿಗೆ ಸೂಚನೆ

ಅಸ್ಸಾಂ ಮತ್ತು ಮಿಜೊರಾಂ ನಡುವಿನ ಗಡಿವಿವಾದದ ಬೆನ್ನಲ್ಲೆ, ಅಸ್ಸಾಂ ಸರ್ಕಾರ ತನ್ನ ರಾಜ್ಯದ ಜನತೆಗೆ ಮಹತ್ವದ ಸೂಚನೆಯೊಂದನ್ನ ನೀಡಿದೆ. ಗಡಿವಿವಾದದಿಂದ ಘರ್ಷಣೆ ಉಂಟಾದ ನಂತರ ರಾಜ್ಯದ ಜನರು ಮಿಜೋರಾಂಗೆ ತೆರಳದಂತೆ ಸೂಚನೆ ನೀಡಿದೆ.

ಇತ್ತೀಚೆಗಷ್ಟೆ ನಡೆದ ಗಡಿ ಸಂಘರ್ಷದಲ್ಲಿ ಐವರು ಪೊಲೀಸರು ಮೃತಪಟ್ಟಿದ್ರು, ಅಲ್ಲದೇ ನೂರಾರು ಜನರು ಗಾಯಗೊಂಡಿದ್ರು. ಈ ಘಟನೆ ನಂತರ ಗೃಹಸಚಿವ ಅಮಿತ್​ ಶಾ ಜೊತೆ ಮಹತ್ವದ ಚರ್ಚೆ ನಡೆಸಿದ ಬಳಿಕ ಅಸ್ಸಾಂ ಸರ್ಕಾರ ಈ ಆದೇಶ ಹೊರಡಿಸಿದೆ. ಇನ್ನು ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡಲು ಸರ್ಕಾರ ಈ ಸೂಚನೆ ಹೊರಡಿಸಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

The post ಮಿಜೊರಾಂಗೆ ತೆರಳದಂತೆ ಅಸ್ಸಾಂ ಜನರಿಗೆ ಸೂಚನೆ appeared first on News First Kannada.

Source: newsfirstlive.com

Source link