ಏರ್​ ಇಂಡಿಯಾದ 115 ಆಸ್ತಿಗಳ ಮಾರಾಟ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

ಏರ್​ ಇಂಡಿಯಾದ 115 ಆಸ್ತಿಗಳ ಮಾರಾಟ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

1. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ

blank

ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ದೆಹಲಿಗೆ ತೆರಳಿದ್ದಾರೆ. ಬೆಳಗ್ಗೆ 6:10ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿರುವ ಸಿಎಂ 8:55ಕ್ಕೆ ದೆಹಲಿ ತಲುಪಲಿದ್ದಾರೆ. ಇವತ್ತು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಲಿದ್ದಾರೆ. ಇನ್ನು ಎರಡು ದಿನಗಳ ಪ್ರವಾಸದಲ್ಲಿ ಹಲವು ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.

2. ಡಿಸಿಎಂ ಪಟ್ಟಕ್ಕಾಗಿ ಅಶೋಕ್ ದೆಹಲಿ ದಂಡಯಾತ್ರೆ

blank

ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಆರಂಭವಾಗ್ತಿದ್ದಂತೆ ಡಿಸಿಎಂ ಪಟ್ಟಕ್ಕಾಗಿ ಆರ್ ಅಶೋಕ್ ಬಿಗಿ ಪಟ್ಟು ಹಿಡಿದಿದ್ದಾರೆ. ಮೊನ್ನೆಯಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಅಶೋಕ್‌ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಡಿಸಿಎಂ ಪಟ್ಟಕ್ಕಾಗಿ ಲಾಬಿ ನಡೆಸಿದ್ದಾರೆ. ಇಂದು ಸಿಎಂ ಬೊಮ್ಮಾಯಿ ಕೂಡ ದೆಹಲಿಗೆ ತೆರಳಿದ್ದು, ಪಕ್ಷದ ವರಿಷ್ಟರ ಮೇಲೆ ಒತ್ತಡ ಹಾಕಲು ಅದೂ ಕೂಡ ಸಹಕಾರಿಯಾಗಲಿದೆ. ಜೊತೆಗೆ ಹಿಂದಿನ ಅನುಭವ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಅನ್ನೋ ಅಸ್ತ್ರಗಳನ್ನು ಮುಂದಿಟ್ಟು ಡಿಸಿಎಂ ಹುದ್ದೆ ಪಡೆಯಲು ಕಸರತ್ತು ನಡೆಸ್ತಿದ್ದಾರೆ.

3. ಮೃತ ಅಭಿಮಾನಿ ಮನೆಗೆ ಇಂದು ಬಿಎಸ್‌ವೈ ಭೇಟಿ

blank
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ತಮ್ಮ ಅಭಿಮಾನಿ ರವಿ ಮನೆಗೆ, ಇಂದು ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಗುಂಡ್ಲುಪೇಟೆಗೆ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11 ಗಂಟೆಗೆ ಯಡಿಯೂರಪ್ಪ ತೆರಳಲಿದ್ದು, ಬೊಮ್ಮಲಾಪುರ ಗ್ರಾಮದ ರವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಇನ್ನು ಯಡಿಯೂರಪ್ಪ ಭೇಟಿ ಹಿನ್ನಲೆ ಬೈಕ್​ ಱಲಿ ನಡೆಸೋಕೆ ಕಾರ್ಯಕರ್ತರು ತಯಾರಿ ನಡೆಸಿದ್ರು. ಸದ್ಯ ಭೇಟಿಯ ವೇಳೆ ಯಾವುದೇ ಱಲಿ, ಮೆರವಣಿಗೆ ನಡೆಸಬೇಡಿ ಅಂತ ಕಾರ್ಯಕರ್ತರಿಗೆ ಬಿಎಸ್​ವೈ ಮನವಿ ಮಾಡಿದ್ದಾರೆ.

4. ತುಂಬಿ ಹರಿವ ನೀರಲ್ಲಿ ಕಾರು ಚಾಲಕನ ದುಸ್ಸಾಹಸ

blank
ನಾರಾಯಣಪುರ ಜಲಾಶಯದಿಂದ 4 ಲಕ್ಷ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ರಾಯಚೂರಿನಲ್ಲಿ ಪ್ರವಾಹ ಪರಸ್ಥಿತಿ ಉಂಟಾಗಿದೆ. ದೇವದುರ್ಗದ ಕೊಪ್ಪರ ಹಳ್ಳದ ಸೇತುವೆ ಮುಳುಗಡೆಯಾಗಿದ್ದು, ಕೊಪ್ಪರ-ಗೂಗಲ್ ರಸ್ತೆ ಸಂಪೂರ್ಣ ಬಂದ್ ಆಗಿದೆ‌. ಈ ನಡುವೆ ಮುಳುಗಡೆಯಾದ ಸೇತುವೆಯಲ್ಲೇ ವ್ಯಕ್ತಿಯೊಬ್ಬ ಕಾರು ಚಲಾಯಿಸಿ ದುಸ್ಸಾಹಸ ಮಾಡಿದ್ದಾನೆ. ಹಳ್ಳಗಳು ತುಂಬಿರುವುದರಿಂದ ಸೇತುವೆಗಳು ಮುಳುಗಡೆಯಾಗಿವೆ. ಈ ವೇಳೆ ರಸ್ತೆ ಬಂದ್ ಆಗಿದ್ದರು ಕಾರು ಚಾಲಕ ಹುಚ್ಚು ಸಾಹಸಕ್ಕೆ ಕೈ ಹಾಕಿ ಹೇಗೋ ಕೊನೆಗೂ ದಡ ಸೇರಿದ್ದಾನೆ.

5. ಪ್ರವಾಹದಿಂದ ಬೀದಿಗೆ ಬಿದ್ದ ಮೀನುಗಾರರ ಬದುಕು

blank
ಯಾದಗಿರಿಯಲ್ಲಿ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ, ಮೀನುಗಾರರ ಗುಡಿಸಲುಗಳು ಸಂಪೂರ್ಣ ಮುಳುಗಡೆಯಾಗಿವೆ. ವಡಗೇರಾ ತಾಲೂಕಿನ ಕದರಾಪುರ ಗ್ರಾಮದ ಸುಮಾರು 38ಕ್ಕೂ ಅಧಿಕ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದ್ದು ಮೀನುಗಾರರು ಕಂಗಾಲಾಗಿದ್ದಾರೆ. ಇನ್ನು ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4 ಲಕ್ಷದ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕದರಾಪುರ, ಬೆಂಡೆಗಂಬಳಿ, ಗೋನಾಲ, ಶಿವಪುರ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

6. ವರುಣನ ಆಗಮನಕ್ಕೆ ದೇವರ ಮೊರೆಹೋದ ಜನ

blank
ರಾಜ್ಯಾದ್ಯಂತ ವರುಣ ಅಬ್ಬರಿಸಿ ಆರ್ಭಟಿಸಿದ್ರೆ, ಇತ್ತ ಕೊಪ್ಪಳದ ಜನರು ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇದರಿಂದ ಬರಗಾಲ ಎದುರಾಗುವ ಭೀತಿ ಉಂಟಾಗಿದೆ. ಇನ್ನು ಜನರು ವರುಣನ ಆಗಮನಕ್ಕಾಗಿ ದೇವರ ಮೊರೆಹೋಗಿದ್ದು, ಗಾಳೆಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಕನಕಗಿರಿಯಲ್ಲಿ ಇಂತಹದೊಂದು ಆಚರಣೆಗೆ ಮಾಡಿದ್ದು, ಜನರಿಂದ ಕಾಣಿಕೆ ಸಂಗ್ರಹಿಸಿ ದೇವಿಯ ಮೂರ್ತಿಯನ್ನ ಒಂದು ಗಡಿಯಿಂದ ಮತ್ತೊಂದು ಗಡಿಗೆ ತಲುಪಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

7. ಇಂದು ಕೇರಳಕ್ಕೆ ಕೇಂದ್ರದ ನಿಯೋಗ ಭೇಟಿ
ಕೊರೊನಾ ಪರಿಸ್ಥಿತಿಯನ್ನು ಪರಿಶೀಲಿಸಲು ಆರು ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆ ಎನ್​ಸಿಡಿಸಿ ನಿರ್ದೇಶಕ ಡಾ.ಎಸ್. ಕೆ ಸಿಂಗ್ ನೇತೃತ್ವದ ತಂಡವು ಇಂದು ಕೇರಳ ರಾಜ್ಯಕ್ಕೆ ಆಗಮಿಸುತ್ತಿದೆ, ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಇನ್ನು ಕಳೆದ ಮೂರು ದಿನಗಳಿಂದ ಕೇರಳ ರಾಜ್ಯದಲ್ಲಿ 22,000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ.

8. ಏರ್​ ಇಂಡಿಯಾದ 115 ಆಸ್ತಿಗಳ ಮಾರಾಟ

blank
ಸಾಲವನ್ನು ಸರಿದೂಗಿಸಲು ಏರ್ ಇಂಡಿಯಾ 2015 ರಿಂದ 115 ಆಸ್ತಿಗಳನ್ನು 738 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ ಅಂತಾ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ. 2018ರಲ್ಲಿ ಏರ್ ಇಂಡಿಯಾ ಸ್ಪೆಸಿಫಿಕ್ ಆಲ್ಟರ್ನೇಟಿವ್ ಮೆಕ್ಯಾನಿಸಂ ಪ್ರಕಾರ, ಬಂಡವಾಳ ಹೂಡಿಕೆಗೆ ಒಳಪಡುವ ಏರ್ ಇಂಡಿಯಾ ತನ್ನ ಸ್ಥಿರ ಆಸ್ತಿಯನ್ನು ಸಾಲಕ್ಕೆ ಸರಿದೂಗಿಸಲು ಬಳಸಿಕೊಳ್ಳಲಾಗುತ್ತದೆ ಎಂದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರವು ಪ್ರಸ್ತುತ ಏರ್ ಇಂಡಿಯಾವನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದೆ.

9. ವಿದ್ಯಾರ್ಥಿಗಳ ವಿದೇಶಿ ಪ್ರಯಾಣ ನಿರ್ಬಂಧ ಸಡಿಲಿಕೆ
ಅಮೆರಿಕ, ಇಂಗ್ಲೆಂಡ್‌, ಕೆನಡಾ, ಐರ್ಲೆಂಡ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಭಾರತೀಯ ವಿದ್ಯಾರ್ಥಿಗಳಿಗೆ ಕೊರೊನಾ ಹಿನ್ನೆಲೆ ಹೇರಿದ್ದ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿವೆ. ನೆದರ್‌ಲೆಂಡ್‌, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ಜಾರ್ಜಿಯಾ ದೇಶಗಳು ಸಹ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲು ಪ್ರಯಾಣ ನಿರ್ಬಂಧಗಳು ಸಡಿಲಿಕೆ ಮಾಡಿದ್ದು, ಕೋವಿಡ್‌–19 ಪರಿಸ್ಥಿತಿ ಸುಧಾರಿಸುತ್ತಲೇ ಮತ್ತಷ್ಟು ದೇಶಗಳು ನಮ್ಮ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವ ನಿರೀಕ್ಷೆಗಳಿವೆ ಅಂತ ಈ ಬಗ್ಗೆ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ.

10. ದೇಶದ 6 ವರ್ಷದೊಳಗಿನ 9 ಲಕ್ಷ ಮಕ್ಕಳಿಗೆ ಅಪೌಷ್ಠಿಕತೆ

blank
ಸಾಂದರ್ಭಿಕ ಚಿತ್ರ

ದೇಶದಲ್ಲಿ 6 ವರ್ಷದೊಳಗಿನ 9 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅಂತಾ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. ಈ ಪೈಕಿ ಸುಮಾರು 4 ಲಕ್ಷ ಮಕ್ಕಳು ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಅಪೌಷ್ಠಿಕತೆ ನಿರ್ಮೂಲನೆಗೆ 2017-18 ರಿಂದ 2020-21ರವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯವು 5,312.79 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅದರಲ್ಲಿ 2,985.56 ಕೋಟಿ ರೂಪಾಯಿಯನ್ನ ಮಾರ್ಚ್ 31, 2021ವರೆಗೆ ಬಳಸಿಕೊಳ್ಳಲಾಗಿದೆ ಅಂತಾ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.

The post ಏರ್​ ಇಂಡಿಯಾದ 115 ಆಸ್ತಿಗಳ ಮಾರಾಟ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link