ಹಾಂಕಾಂಗ್‌ನಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ಸಿಗುತ್ತೆ ವಿಶೇಷ ಬಹುಮಾನ.. ಏನದು?

ಹಾಂಕಾಂಗ್‌ನಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ಸಿಗುತ್ತೆ ವಿಶೇಷ ಬಹುಮಾನ.. ಏನದು?

ಕೋವಿಡ್‌ ವ್ಯಾಕ್ಸಿನ್‌ ಬಂದಾಗ ಅಬ್ಬಾ ! ಬಚಾವ್‌ ಆಯ್ತು ವಿಶ್ವ ಅಂತ ಅದೆಷ್ಟೋ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ವ್ಯಾಕ್ಸಿನ್‌ ಸೆಂಟರ್‌ಗೆ ನುಗ್ಗಲು ತಾಮುಂದು ನಾಮುಂದು ಅನ್ನುತ್ತಿದ್ರು. ಆದ್ರೆ, ಆ ಸಂದರ್ಭದಲ್ಲಿ ವ್ಯಾಕ್ಸಿನ್‌ ಉತ್ಪಾದನೆ ಕಡಿಮೆ ಇತ್ತು. ತದ ನಂತರ ವ್ಯಾಕ್ಸಿನ್‌ ಉತ್ಪಾದನೆ ಹೆಚ್ಚುತ್ತಾ ಹೋಯಿತು. ಆದ್ರೆ, ಜನ ವ್ಯಾಕ್ಸಿನ್‌ ತೆಗೆದುಕೊಳ್ಳಲು ಹಿಂದೇಟು ಹಾಕಲು ಆರಂಭಿಸಿ ಬಿಟ್ರು. ಇದಕ್ಕೆಲ್ಲ ಕಾರಣವಾಗಿದ್ದು, ವ್ಯಾಕ್ಸಿನ್‌ ಬಗ್ಗೆ ಹಬ್ಬಿದ ಅಪಪ್ರಚಾರವಾಗಿತ್ತು. ಸಾಮಾನ್ಯವಾಗಿ ಎಲ್ಲಾ ದೇಶದಲ್ಲಿಯೂ ವ್ಯಾಕ್ಸಿನ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಜೋರಾಗಿಯೇ ನಡೆದಿತ್ತು. ಇದೇ ಕಾರಣಕ್ಕೆ ಜನರನ್ನು ವ್ಯಾಕ್ಸಿನ್‌ ಸೆಂಟರ್‌ಗೆ ಕರೆ ತರಲು ಹರಸಾಹಸ ಮಾಡ್ಬೇಕಾಯಿತು. ಆದ್ರೆ, ಹಾಂಕಾಂಗ್‌ ಒಂದು ಹೊಸ ಯೋಜನೆ ರೂಪಿಸಿದೆ. ಅದೇನಂದ್ರೆ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ಬಹುಮಾನ ನೀಡುವಂತಹದ್ದು.

blank

ಹೌದು, ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆಲ್ಲ, ಕಾರು, ಚಿನ್ನ, ಪ್ಲ್ಯಾಟ್‌, ನೀಡುತ್ತಾರೆ ಅಂತ ತಿಳಿದುಕೊಳ್ಳಬೇಡಿ. ವಿಷ್ಯ ಹಾಗಲ್ಲ. ವ್ಯಾಕ್ಸಿನ್‌ ಹಾಕಿಸಿಕೊಂಡವರ ಹೆಸರು ನೋಂದಣಿಯಾಗಿರುತ್ತದೆ. ಜುಲೈ ಇಂದ ಸೆಪ್ಟೆಂಬರ್‌ ವರೆಗೆ ಯಾರು ವ್ಯಾಕ್ಸಿನ್‌ ಹಾಕಿಸಿಕೊಳ್ಳುತ್ತಾರೋ ಅವರ ಹೆಸರು ಲಕ್ಕಿ ಡ್ರಾದಲ್ಲಿ ಸೇರ್ಪಡೆಯಾಗಿರುತ್ತದೆ. ಲಕ್ಕಿ ಡ್ರಾದಲ್ಲಿ ಯಾರು ಯಾರು ವಿಜೇತರಾಗುತ್ತಾರೋ ಅವರಿಗೆ ಬಹುಮಾನ ವಿತರಿಸಲಾಗುತ್ತದೆ. ಒಬ್ಬರಿಗೆ ಒಂದು ಬಹುಮಾನ ಮಾತ್ರ ದೊರೆಯಲಿದೆ. ಹಾಂಕಾಂಗ್‌ನಲ್ಲಿ ಇರುವುದು 80 ಲಕ್ಷ ಜನರು. ಕಳೆದ ಫೆಬ್ರವರಿಯಲ್ಲಿ ವ್ಯಾಕ್ಸಿನೇಷನ್‌ ಆರಂಭವಾಗಿದೆ. ಆರಂಭದಲ್ಲಿ ಉತ್ಸಾಹ ತೋರಿಸಿದವರು ನಂತರ ವ್ಯಾಕ್ಸಿನ್‌ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಅದಕ್ಕೆಲ್ಲ ಕಾರಣ ವ್ಯಾಕ್ಸಿನ್‌ ಬಗ್ಗೆ ಹಬ್ಬಿದ ಅಪಪ್ರಚಾರವಾಗಿರುತ್ತದೆ.

ಹಾಂಕಾಂಗ್‌ನಲ್ಲಿ ಇರುವುದು ಕೇವಲ 80 ಲಕ್ಷ ಜನಸಂಖ್ಯೆ. ಇಲ್ಲಿಯವರೆಗೆ 54 ಲಕ್ಷ ಜನ ಸಿಂಗಲ್‌ ಡೋಸ್‌, 23 ಲಕ್ಷ ಜನ ಡಬಲ್‌ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಮಾರ್ಚ್‌, ಏಪ್ರಿಲ್‌, ಜೂನ್‌ ತಿಂಗಳಿನಲ್ಲಿಯೇ ಹಾಂಕಾಂಗ್‌ನಲ್ಲಿ ಲಸಿಕೆ ಬೇಕಾದಷ್ಟು ಲಭ್ಯವಾಗಿತ್ತು. ಆದ್ರೆ, ಆ ಸಂದರ್ಭದಲ್ಲಿ ಜನ ವ್ಯಾಕ್ಸಿನ್‌ ತೆಗೆದುಕೊಳ್ಳಲು ಬರ್ತಾನೆ ಇರಲಿಲ್ಲ. ಆದ್ರೆ, ಭಾರೀ ಪ್ರಮಾಣದಲ್ಲಿ ಬಹುಮಾನ ಘೋಷಣೆಯಾದ ನಂತ್ರ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಆರಂಭಿಸಿದ್ದಾರೆ. ಮುಂದಿನ ಸೆಪ್ಟೆಂಬರ್‌ಗೂ ಮುನ್ನ ಸಂಪೂರ್ಣವಾಗಿ ವ್ಯಾಕ್ಸಿನೇಷನ್‌ ಮುಗಿಸಬೇಕು ಅನ್ನುವುದು ಹಾಂಕಾಂಗ್‌ನ ಗುರಿಯಾಗಿದೆ.

blank

ಹೌದು, ವ್ಯಾಕ್ಸಿನ್‌ ಪಡೆದವರಿಗೆ ಹಾಂಕಾಂಗ್‌ನಲ್ಲಿ ಆದಷ್ಟು ದೊಡ್ಡ ಮಟ್ಟದಲ್ಲಿ ಬಹುಮಾನ ಘೋಷಣೆ ಎಲ್ಲಿಯೂ ಆಗಿಲ್ಲ. ಆದ್ರೆ, ಭಾರತ ಸೇರಿದಂತೆ ಅಮೆರಿಕ, ರಷ್ಯಾ, ಬ್ರಿಟನ್‌ನಲ್ಲಿಯೂ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ಬಹುಮಾನ ನೀಡಲಾಗಿದೆ. ಆದ್ರೆ, ಅದು ಅಲ್ಲಿಯ ಸ್ಥಳಯ ಮಟ್ಟದಲ್ಲಿಯೇ ನಡೆದಿದೆ. ಅರುಣಾಚಲದಲ್ಲಿ ಇಬ್ಬರು ಮುಖಂಡರು ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ 20 ಕೆ.ಜಿ ಫ್ರೀಯಾಗಿ ಅಕ್ಕಿ ನೀಡುವುದಾಗಿ ಘೋಷಿಸಿದ್ರು. ಅದರಿಂದ ಗುಡ್ಡುಗಾಡು ಪ್ರದೇಶದ ಜನ ವ್ಯಾಕ್ಸಿನ್‌ ಸೆಂಟರ್‌ಗೆ ಬಂದು ಲಸಿಕೆ ಹಾಕಿಸಿಕೊಂಡಿದ್ರು. ತಪ್ಪು ಕಲ್ಪನೆಗೆ ಒಳಗಾಗೋ ಜನರನ್ನು ಅದರಿಂದ ಹೊರತರಲು ಬಹಳ ಸಮಯ ಬೇಕಾಗುತ್ತದೆ. ಎಷ್ಟೇ ಜಾಗೃತಿ ಮೂಡಿಸಿದ್ರೂ ಪ್ರಯೋಜನವಾಗುವುದಿಲ್ಲ. ಆದ್ರೆ, ಹಾಂಕಾಂಗ್‌ ಮಾಡಿದ ಪ್ರಯೋಗ ಭಾರೀ ಯಶಸ್ವಿಯಾಗಿದೆ.

The post ಹಾಂಕಾಂಗ್‌ನಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ಸಿಗುತ್ತೆ ವಿಶೇಷ ಬಹುಮಾನ.. ಏನದು? appeared first on News First Kannada.

Source: newsfirstlive.com

Source link