ಆರ್ಚರಿ- ರೋಚಕ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಸ್​ಗೆ ದೀಪಿಕಾ ಕುಮಾರಿ

ಆರ್ಚರಿ- ರೋಚಕ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಸ್​ಗೆ ದೀಪಿಕಾ ಕುಮಾರಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ದೀಪಿಕಾ ಕುಮಾರಿ, ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಇಂದು ನಡೆದ ಆರ್ಚರ್​ ಮಹಿಳಾ ಸಿಂಗಲ್ಸ್​ನಲ್ಲಿ ದೀಪಿಕಾ, ರಷ್ಯಾ ಕ್ಸೆನಿಯಾ ಪೆರೋವಾರನ್ನ 6-5 ಅಂತರದಿಂದ ಮಣಿಸಿ ಎಂಟರ ಘಟ್ಟಕ್ಕೆ ಎಂಟ್ರಿಕೊಟ್ಟಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯ 5 ಸುತ್ತುಗಳಲ್ಲಿ ದೀಪಿಕಾ ಕುಮಾರಿ, ಎದುರಾಳಿ ವಿರುದ್ಧ 28-25, 26-27, 28-27, 26-26 ಹಾಗೂ 25-28 ಅಂಕ ಕಲೆಹಾಕಿ ಸಮಬಲ ಸಾಧಿಸಿದ್ರು. ಹೀಗಾಗಿ ಮತ್ತೊಂದು ಶೂಟ್ ಆಫ್ ರೌಂಡ್​​​ ಆಯೋಜಿಸಲಾಯಿತು. ಈ ಶೂಟ್ ಆಫ್ ಸುತ್ತಿನಲ್ಲಿ ಕ್ಸೆನಿಯಾ ಪೆರೋವಾಗಿಂತ ಹೆಚ್ಚು ಅಂಕ ಗಳಿಸಿದ ದೀಪಿಕಾ ಕುಮಾರಿ, ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

The post ಆರ್ಚರಿ- ರೋಚಕ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಸ್​ಗೆ ದೀಪಿಕಾ ಕುಮಾರಿ appeared first on News First Kannada.

Source: newsfirstlive.com

Source link