‘ನನ್ನ ಬಗ್ಗೆ ಶಿವಕುಮಾರ್ ಅಪಪ್ರಚಾರ ಮಾಡ್ತಿದ್ದಾರೆ’ -ಡಿಕೆಎಸ್​ ಟ್ವೀಟ್​ಗೆ ಬಿಜೆಪಿ ಸಂಸದ ಪಂಚ್​

‘ನನ್ನ ಬಗ್ಗೆ ಶಿವಕುಮಾರ್ ಅಪಪ್ರಚಾರ ಮಾಡ್ತಿದ್ದಾರೆ’ -ಡಿಕೆಎಸ್​ ಟ್ವೀಟ್​ಗೆ ಬಿಜೆಪಿ ಸಂಸದ ಪಂಚ್​

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಡವಟ್ಟು ಮಾಡಿಕೊಂಡಿದ್ದಾರೆ. ಸಂಸದ ಸಂಗಣ್ಣ ಕರಡಿ, ಶಾಸಕ ಬಸನಗೌಡ ದದ್ದಲ್, ಮಾಜಿ ‌ಮಂತ್ರಿಗಳಾದ ಮಲ್ಲಿಕಾರ್ಜುನ , ನಾಗಪ್ಪ ಭೇಟಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿ ಡಿಕೆಶಿ ಮುಜುಗರಕ್ಕೆ ಗುರಿಯಾಗಿದ್ದಾರೆ.

ಈ ಪೋಸ್ಟ್​​ನಲ್ಲಿ ಪಕ್ಷ ಸಂಘಟನೆ ಬಲಗೊಳಿಸಲು ಚರ್ಚೆ ಮಾಡಲಾಯ್ತು ಅಂತಾ ಡಿಕೆಶಿ ಬರೆದುಕೊಂಡಿದ್ರು. ಇನ್ನು ಈ ಪೋಸ್ಟ್​ಗೆ ಸಂಸದ ಕರಡಿ ಸಂಗಣ್ಣ ಪ್ರತಿಕ್ರಯಿಸಿದ್ದು, ನಾನು ದೆಹಲಿಯಲ್ಲಿ ಇದ್ದೇನೆ, ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಪೋಸ್ಟ್ ಹಾಕಿ ತಿರುಗೇಟು ಕೊಟ್ಟಿದ್ದಾರೆ. ಇನ್ನು ಈ ಪೋಟೋದಲ್ಲಿ ಸಂಗಣ್ಣ ಕರಡಿ ಇರದೆ ಹೋದ್ರು ಹೆಸರು ಹಾಕಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

The post ‘ನನ್ನ ಬಗ್ಗೆ ಶಿವಕುಮಾರ್ ಅಪಪ್ರಚಾರ ಮಾಡ್ತಿದ್ದಾರೆ’ -ಡಿಕೆಎಸ್​ ಟ್ವೀಟ್​ಗೆ ಬಿಜೆಪಿ ಸಂಸದ ಪಂಚ್​ appeared first on News First Kannada.

Source: newsfirstlive.com

Source link