ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ

ಬಿಗ್‍ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಫಿಸಿಕಲಿ ಸ್ಟ್ರಾಂಗ್ ಆಗಿದ್ದರೆ, ಇನ್ನೂ ಕೆಲವರು ಮೆಂಟಲಿ ಸ್ಟ್ರಾಂಗ್ ಆಗಿದ್ದಾರೆ. ಅದರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರು. ಯಾವುದೇ ಟಾಸ್ಕ್ ನೀಡಿದರೂ ನಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಎಲ್ಲ ಸ್ಪರ್ಧಿಗಳಿಗೂ ಪ್ರತಿಸ್ಪರ್ಧಿಯಾಗಿ ಟಫ್ ಕಾಂಪಿಟೇಷನ್ ಕೊಡುವ ವೈಷ್ಣವಿ ಗೌಡ ಬಿಗ್‍ಬಾಸ್ ನೀಡಿದ್ದ ಸೀಕ್ರೆಟ್ ಟಾಸ್ಕ್‌ನನ್ನು ಸುಲಭವಾಗಿ ನಿಭಾಯಿಸಿ ಗೆದ್ದಿದ್ದಾರೆ.

ಬಿಗ್‍ಬಾಸ್ ಕರೆ ಮಾಡಿ ವೈಷ್ಣವಿಗೆ ನೀವು ಮನೆಯಲ್ಲಿರುವ 7 ಸದಸ್ಯರ ಒಂದೊಂದು ವಸ್ತುವನ್ನು ಯಾರಿಗೂ ಗೊತ್ತಾಗದಂತೆ ಸ್ಟೋರ್ ರೂಮ್‍ಗೆ ತಂದು ಇಡಬೇಕು. ಇವತ್ತು ರಾತ್ರಿ ಲೈಟ್ಸ್ ಆಫ್ ಆಗುವ ಮುನ್ನ ಈ ಕೆಲಸವನ್ನು ಪೂರ್ಣಗೊಳಿಸಿದರೆ, ನಿಮಗೆ ಐಸ್ ಕ್ರೀಮ್ ಕಳುಹಿಸಿಕೊಡುತ್ತೇನೆ ಎನ್ನುತ್ತಾರೆ. ಒಂದು ವೇಳೆ ಈ ಟಾಸ್ಕ್ ಪೂರ್ಣಗೊಳಿಸದೇ ಇದ್ದರೆ ನಿಮ್ಮ ವಸ್ತುವನ್ನು ಬಿಗ್ ಬಾಸ್‍ಗೆ ನೀಡಬೇಕು ಎಂದು ಹೇಳುತ್ತಾರೆ.

ಟಾಸ್ಕ್ ಸಿಕ್ಕಿದ ಹಿನ್ನೆಲೆಯಲ್ಲಿ ವೈಷ್ಣವಿ, ಮೇಕಪ್ ರೂಮ್‍ನಲ್ಲಿದ್ದ ಮನೆಯ ಸ್ಪರ್ಧಿಗಳ ಒಂದೊಂದು ವಸ್ತುವನ್ನು ಹುಡುಕಾಡಿ-ತಡಕಾಡಿ ಬಹಳ ಚಲಾಕಿತನದಿಂದ ಪ್ಲಾಸ್ಟಿಕ್ ಕವರ್‌ನಲ್ಲಿ ಬಟ್ಟೆಗಳನ್ನು ತುಂಬಿಕೊಂಡು, ಯಾರಿಗೂ ತಿಳಿಯದಂತೆ ಸ್ಟೋರ್ ರೂಮ್‍ಗೆ ತೆಗೆದುಕೊಂಡು ಹೋಗಿ ಇಡುತ್ತಾರೆ.

blank

ಅದರಂತೆ ಟಾಸ್ಕ್‌ನನ್ನು ವಿನ್ ಆದ ವೈಷ್ಣವಿಗೆ ಬಿಗ್‍ಬಾಸ್ ಅಭಿನಂದನೆ ಕೋರುತ್ತಾ ಐಸ್ ಕ್ರೀಮ್ ಕಳುಹಿಸಿಕೊಡುತ್ತಾರೆ. ಆಗ ವೈಷ್ಣವಿ ನನ್ನನ್ನು ಎಲ್ಲರೂ ಕ್ಷಮಿಸಿ, ಬಿಗ್‍ಬಾಸ್ ಸೀಕ್ರೆಟ್ ಟಾಸ್ಕ್‌ವೊಂದನ್ನು ನೀಡಿದ್ದರು. ಹಾಗಾಗಿ ನಿಮ್ಮೆಲ್ಲರಿಂದಲೂ ಒಂದೊಂದು ವಸ್ತುಗಳನ್ನು ಕದ್ದಿದ್ದೀನಿ ಎಂದಾಗ ಎಲ್ಲರೂ ಶಾಕ್ ಆಗುತ್ತಾ, ಏನು ಕದ್ದಿದ್ದೀರಾ ಎಂದು ಕೇಳುತ್ತಾರೆ.

blank

ಆಗ ವೈಷ್ಣವಿ, ಬ್ರೋ ಗೌಡರವರ ಗ್ರೀನ್ ಕಲರ್ ಟಿ ಶರ್ಟ್, ಅರವಿಂದ್‍ರವರ ಬ್ರಶ್, ಪ್ರಶಾಂತ್‍ರವರದ್ದು ಗ್ರೇ ಮತ್ತು ಯೆಲ್ಲೋ ಟಿ ಶರ್ಟ್, ದಿವ್ಯಾ ಉರುಡುಗ ಅವರ ಒಂದು ಟ್ರ್ಯಾಕ್ ಪ್ಯಾಂಟ್, ಮಂಜುರವರ ಬಿಳಿ ಬಣ್ಣದ ಟಿ ಶರ್ಟ್, ಶುಭಾರವರ ಕ್ಯಾಪ್, ಡಿಎಸ್‍ದು ಏರ್ ಬ್ಯಾಂಡ್ ಕದ್ದಿದ್ದೇನೆ. ಆದರೆ ಅರವಿಂದ್ ಡ್ರಸ್‍ಗಳನ್ನು ಬಹಳ ನೀಟಾಗಿ ಇಟ್ಟಿದ್ದಾರೆ. ಒಂದು ಬಟ್ಟೆ ಎತ್ತಿಕೊಂಡರೂ ಅದು ಬಹಳ ಬೇಗ ಗೊತ್ತಾಗಿ ಬಿಡುತ್ತದೆ. ಬಾತ್‍ರೂನಲ್ಲಿ ಒಂದು ಟಿ ಶರ್ಟ್ ಮತ್ತು ಶಾಟ್ಸ್ ಇತ್ತು. ಅದನ್ನೂ ಎತ್ತಿದರೆ ಬೇಗ ಗೊತ್ತಾಗಿ ಬಿಡುತ್ತದೆ. ಹಾಗಾಗಿ ಅರವಿಂದ್ ಬಟ್ಟೆಯನ್ನು ಮಾತ್ರ ಕದಿಯಲು ಆಗಲಿಲ್ಲ ಬದಲಿಗೆ ಅವರ ಬ್ರಶ್ ಮಾತ್ರ ಕದ್ದೆ ಎನ್ನುತ್ತಾರೆ. ಇದನ್ನೂ ಓದಿ:ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

The post ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ appeared first on Public TV.

Source: publictv.in

Source link