ರೀ ಓಪನ್​ ಆಯ್ತು ಮಣಿ ಮರ್ಡರ್ ಕೇಸ್ -ರೌಡಿಶೀಟರ್​ ನಾಗ, ಮೋಹನ್​​​ನನ್ನು ಬಂಧಿಸಿದ ಸಿಸಿಬಿ

ರೀ ಓಪನ್​ ಆಯ್ತು ಮಣಿ ಮರ್ಡರ್ ಕೇಸ್ -ರೌಡಿಶೀಟರ್​ ನಾಗ, ಮೋಹನ್​​​ನನ್ನು ಬಂಧಿಸಿದ ಸಿಸಿಬಿ

ಬೆಂಗಳೂರು: ನಗರದ ನಟೋರಿಯಸ್ ರೌಡಿಶೀಟರ್​ಗಳಾದ ವಿಲ್ಸನ್​ ಗಾರ್ಡನ್​ ನಾಗ ಹಾಗೂ ಮೀಟರ್​ ಮೋಹನ್ ನನ್ನು ಸಿಸಿಬಿ ಟೀಂ ವಶಪಡಿಸಿಕೊಂಡಿದೆ.

ಮೊನ್ನೆಯಷ್ಟೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ರು ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ರು. ಅದರ ಬೆನ್ನಲ್ಲೇ ಸಿಸಿಬಿ ಈ ರೌಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಸಿಲಿಕಾನ್​ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಮದನ್​ ಮತ್ತು ಬಬ್ಲಿ ಕೊಲೆ ಪ್ರಕರಣಗಳಲ್ಲಿ ಈ ಇಬ್ಬರು ರೌಡಿಶೀಟರ್​ಗಳ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ವರ್ಷ ಹಳೆಯದಾದ ಸುಬ್ರಹ್ಮಣಿ ಅಲಿಯಾಸ್ ಜಿಮ್ ಮಣಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಲ್ಸನ್‌ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ ಸೇರಿ ಇದುವರೆಗೆ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.

blank

ಕಳೆದ ವರ್ಷ ಜೂನ್ ನಲ್ಲಿ ಸುಬ್ರಹ್ಮಣಿ ಅಲಿಯಾಸ್ ಜಿಮ್ ಮಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಎಫ್​ಐಆರ್​​ ನಲ್ಲಿ ಈ ಇಬ್ಬರ ಹೆಸರು ಇತ್ತು, ಆದರೆ ಅಂದಿನ ತನಿಖಾಧಿಕಾರಿ ಈ ಇಬ್ಬರನ್ನು ಅರೆಸ್ಟ್​ ಮಾಡದೇ ಹಾಗೇ ಬಿಟ್ಟಿದ್ದರು. ಈ ಕುರಿತು ಮಾಹಿತಿ ಪಡೆದ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ​ಕೇಸ್​ ರೀ ಓಪನ್​ ಮಾಡಿ ತನಿಖೆಗೆ ಆದೇಶಿಸಿದ್ದು ಅನ್ನಪೂರ್ಣೇಶ್ವರಿ ನಗರದ ಪೊಲೀಸ್​ ಲೋಹಿತ್ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

ಆಯುಕ್ತರ ಆದೇಶದಂತೆ ಕೇಸ್​ ರೀ ಓಪನ್​ ಮಾಡಿ ತನಿಖೆ ಆರಂಭಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಮಣಿ ಕೊಲೆಯಲ್ಲಿ ಈ ಇಬ್ಬರು ರೌಡಿಶೀಟರ್​ಗಳ ಕೈವಾಡವಿರುವದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ‘ಸೈಲೆಂಟ್ ಸುನಿ-ವಿಲ್ಸನ್ ಗಾರ್ಡನ್ ನಾಗ’ನ ಕಾಳಗಕ್ಕೆ ಬಲಿಯಾದ್ರಾ ‘ಬಬ್ಲಿ ಮತ್ತು ಮದನ್’​..?

The post ರೀ ಓಪನ್​ ಆಯ್ತು ಮಣಿ ಮರ್ಡರ್ ಕೇಸ್ -ರೌಡಿಶೀಟರ್​ ನಾಗ, ಮೋಹನ್​​​ನನ್ನು ಬಂಧಿಸಿದ ಸಿಸಿಬಿ appeared first on News First Kannada.

Source: newsfirstlive.com

Source link