ಬೆಂಗಳೂರು ಏರ್​ಪೋರ್ಟ್​ಲ್ಲಿ ಆತಂಕ ಸೃಷ್ಟಿಸಿದ ನಕಲಿ ಗನ್​ಗಳು

ಬೆಂಗಳೂರು ಏರ್​ಪೋರ್ಟ್​ಲ್ಲಿ ಆತಂಕ ಸೃಷ್ಟಿಸಿದ ನಕಲಿ ಗನ್​ಗಳು

ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡಮ್ಮಿ ಗನ್​ಗಳು ಕೆಲಹೊತ್ತು ಆತಂಕ ಸೃಷ್ಟಿ ಮಾಡಿದ ಘಟನೆ ನಿಲ್ದಾಣದ ಕಾರ್ಗೋ ಟರ್ಮಿನಲ್​ನಲ್ಲಿ ನಡೆದಿದೆ.

ವಿದೇಶದಿಂದ ಬಂದ ಪಾರ್ಸಲ್ ಕಂಡು ಕೆಲ ಕಾಲ ನಿಲ್ದಾಣದ ಸಿಬ್ಬಂದಿಗಳು ಗಾಬರಿಗೊಳಗಾಗಿದ್ದಾರೆ. ನಿನ್ನೆ ಇಸ್ತಾಂಬುಲ್​ನಿಂದ ಕಾರ್ಗೋ ಟರ್ಮಿನಲ್​ಗೆ ಪಾರ್ಸ್​ಲ್​ ಬಂದಿದ್ದು, ಅದನ್ನು ವರ್ಗಾವಣೆ ಮಾಡುವ ವೇಳೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಸಿಬ್ಬಂದಿಗಳು, ತಪಾಸಣೆ ನಡೆಸಿದಾಗ ಗನ್​ಗಳಿರುವುದು ಪತ್ತೆಯಾಗಿದೆ.

ತಕ್ಷಣ ಗಾಬರಿಗೊಂಡ ಸಿಬ್ಬಂದಿಗಳು ಗನ್​ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್​ಗಳು ಎಂಬುದು ಗೊತ್ತಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಗನ್​ಗಳನ್ನು ವಶಕ್ಕೆ ಪಡೆದುಕೊಂಡಿರುವ ಏರ್​ಪೋರ್ಟ್ ನ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

The post ಬೆಂಗಳೂರು ಏರ್​ಪೋರ್ಟ್​ಲ್ಲಿ ಆತಂಕ ಸೃಷ್ಟಿಸಿದ ನಕಲಿ ಗನ್​ಗಳು appeared first on News First Kannada.

Source: newsfirstlive.com

Source link