ಬಾಕ್ಸಿಂಗ್- ಸೆಮೀಸ್​ಗೆ ಎಂಟ್ರಿ ಕೊಟ್ಟ ಲವ್ಲಿನಾ ಬೊರ್ಗೊಹೈನ್- ಭಾರತಕ್ಕೆ ಪದಕ ಫಿಕ್ಸ್​

ಬಾಕ್ಸಿಂಗ್- ಸೆಮೀಸ್​ಗೆ ಎಂಟ್ರಿ ಕೊಟ್ಟ ಲವ್ಲಿನಾ ಬೊರ್ಗೊಹೈನ್- ಭಾರತಕ್ಕೆ ಪದಕ ಫಿಕ್ಸ್​

ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬಾಕ್ಸರ್​ ಲವ್ಲಿನಾ ಬೊರ್ಗೊಹೈನ್ ಗೆದ್ದು ಬೀಗಿದ್ದಾರೆ. ಆ ಮೂಲಕ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟು, ಪದಕ ಖಚಿತಪಡಿಸಿಕೊಂಡಿದ್ದಾರೆ. ಮಹಿಳಾ ವಿಭಾಗದ 64-69 ಕೆಜಿ ವಿಭಾಗದ ಕ್ವಾರ್ಟರ್​ ಫೈನಲ್​​ನಲ್ಲಿ ಚೀನಾ ತೈಪೆಯ ನಿಯೆನ್ ಚಿನ್ ಚೆನ್ ವಿರುದ್ಧದ ಪ್ರಾಬಲ್ಯ ಮೆರೆದ ಲವ್ಲಿನಾ, 4-1ರ ಅಂತರದ ಗೆಲುವು ದಾಖಲಿಸಿದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

The post ಬಾಕ್ಸಿಂಗ್- ಸೆಮೀಸ್​ಗೆ ಎಂಟ್ರಿ ಕೊಟ್ಟ ಲವ್ಲಿನಾ ಬೊರ್ಗೊಹೈನ್- ಭಾರತಕ್ಕೆ ಪದಕ ಫಿಕ್ಸ್​ appeared first on News First Kannada.

Source: newsfirstlive.com

Source link