ಕೃಷ್ಣಾ ಪ್ರವಾಹಕ್ಕೆ ರೈತರು ತತ್ತರ- ಲಕ್ಷಾಂತರ ರೂ. ಬೆಳೆ ಹಾನಿ

ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹದ ಹೊಡೆತವು ಹೆಚ್ಚಾಗುತ್ತಿದೆ. ಹೀಗಾಗಿ ರಾಯಚೂರಿನ ರೈತರು ಕಂಗಾಲಾಗಿದ್ದಾರೆ.

ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನದಿ ಪಾತ್ರದ ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿದೆ. ಇದನ್ನೂ ಓದಿ:  ಇದು Unexpected ಎಂದು ಭಾವುಕರಾದ ಶಮಂತ್

ನಾರಾಯಣಪುರ ಜಲಾಶಯದಿಂದ 4.20 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ರಾಯಚೂರು ತಾಲೂಕಿನ ಕಾಡ್ಲೂರು, ಗುರ್ಜಾಪುರದಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ. ಪಂಪ್ ಸೆಟ್ ಉಳಿಸಿಕೊಳ್ಳಲು ರೈತರ ಹರಸಾಹಸ ಪಡುತ್ತಿದ್ದಾರೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ರಾಯಚೂರು, ಯಾದಗಿರಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

blank

The post ಕೃಷ್ಣಾ ಪ್ರವಾಹಕ್ಕೆ ರೈತರು ತತ್ತರ- ಲಕ್ಷಾಂತರ ರೂ. ಬೆಳೆ ಹಾನಿ appeared first on Public TV.

Source: publictv.in

Source link