‘ಬೆಂಚ್‌ ಕಾಯಲೋ, ಪ್ರವಾಸಕ್ಕಾಗೋ ಆಟಗಾರರನ್ನ ಆಯ್ಕೆ ಮಾಡಲ್ಲ’ -ಟೀಕಾಕಾರರಿಗೆ ದ್ರಾವಿಡ್​ ಟಾಂಗ್

‘ಬೆಂಚ್‌ ಕಾಯಲೋ, ಪ್ರವಾಸಕ್ಕಾಗೋ ಆಟಗಾರರನ್ನ ಆಯ್ಕೆ ಮಾಡಲ್ಲ’ -ಟೀಕಾಕಾರರಿಗೆ ದ್ರಾವಿಡ್​ ಟಾಂಗ್

ಶ್ರೀಲಂಕಾ ವಿರುದ್ಧದ ಚುಟುಕು ಸರಣಿಯೇನೂ ಮುಕ್ತಾಯವಾಯ್ತು. ಫಲಿತಾಂಶ ಏನೇ ಆದರೂ ಕೋಚ್ ದ್ರಾವಿಡ್ ಮಾರ್ಗದರ್ಶನಕ್ಕೆ ಕ್ರಿಕೆಟ್ ಫ್ಯಾನ್ಸ್,​ ಫುಲ್ ಮಾರ್ಕ್ಸ್​​ ಕೊಟ್ಟಿದ್ದಾಯ್ತು. ಆದ್ರೆ ಈ ಸರಣಿಯಲ್ಲಿ ಆಟಗಾರರ ಡೆಬ್ಯೂ, ಟೀಕಾಕಾರರಿಗೆ ಆಹಾರವಾಗಿತ್ತು. ಸರಣಿ ಮುಕ್ತಾಯದ ಬೆನ್ನಲ್ಲೇ ದ್ರಾವಿಡ್, ಟೀಕಾಕಾರರಿಗೆ ​ಟಾಂಗ್ ಕೊಟ್ಟು, ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

blank

ಕೊರೊನಾ ಕರಿಛಾಯೆಯ ನಡುವೆಯೂ ಶ್ರೀಲಂಕಾ ಪ್ರವಾಸ ಅಂತ್ಯ ಕಂಡಿದೆ. ಡೆಬ್ಯೂ ಕನಸಿನೊಂದಿಗೆ ಲಂಕಾಗೆ ಹಾರಿದ್ದ ಯುವ ಆಟಗಾರರ ಕನಸು ನನಸಾಗಿದೆ. ಇತ್ತ ಏಕದಿನ ಸರಣಿ ಗೆದ್ದು, ಟಿ20 ಸರಣಿಯಲ್ಲಿ ಸೋಲುಂಡ ಟೀಮ್ ಇಂಡಿಯಾ, ತವರಿಗೂ ಮರಳುತ್ತಿದೆ. ಈ ಪ್ರವಾಸಕ್ಕೆ ಟೀಮ್ ಇಂಡಿಯಾ ಕೋಚ್ ಆಗಿ ತೆರಳಿದ್ದ ರಾಹುಲ್​ ದ್ರಾವಿಡ್, ಸರಣಿ ಅಂತ್ಯ ಕಂಡ ಬೆನ್ನಲ್ಲೇ ಕೆಲ ವಿಚಾರಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಲಂಕಾ ಸರಣಿ ಆರಂಭಕ್ಕೂ ಮುನ್ನ ಎಷ್ಟು ಮಂದಿಗೆ ಅವಕಾಶ ಸಿಗುತ್ತೋ ಗೊತ್ತಿಲ್ಲ ಎಂದಿದ್ದ ದ್ರಾವಿಡ್, ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಬರೋಬ್ಬರಿ 6 ಬದಲಾವಣೆಗಳನ್ನ ಮಾಡಿದ್ರು. ದ್ರಾವಿಡ್​ ಹೀಗೆ ಯುವ ಆಟಗಾರರಿಗೆ ಅವಕಾಶ ನೀಡಿದ್ದನ್ನ ಕೆಲ ಮಾಜಿ ಕ್ರಿಕೆಟಿಗರು ಬಾಯಿಗೆ ಬಂದಂತೆ ಟೀಕಿಸಿದ್ದರು. ದಿಗ್ಗಜ ಸುನಿಲ್ ಗವಾಸ್ಕರ್​ ಒಂದೆಜ್ಜೆ ಮುಂದೆ ಹೋಗಿ, ಆಯ್ಕೆ ಮಾಡಿರೋ ತಂಡದಲ್ಲಿ ಸಮರ್ಥ ಆಟಗಾರ ಇದ್ದಾನಾ ಅಂತಾನೇ ಪ್ರಶ್ನಿಸಿದ್ದರು. ಆಗ ಈ ಬಗ್ಗೆ ಮೌನವೇ ಉತ್ತರ ಎಂದಿದ್ದ ದ್ರಾವಿಡ್, ಪ್ರವಾಸ ಅಂತ್ಯವಾದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

blank

‘20 ಮಂದಿಯ ತಂಡದಲ್ಲಿ ನೀವು ಟೀಮ್ ಇಂಡಿಯಾಗೆ ಸೆಲೆಕ್ಟ್​ ಆಗಿದ್ದೀರಿ ಎಂದರೆ, ನಿಮಗೆ ಹನ್ನೊಂದರ ಬಳಗದಲ್ಲಿ ಆಡುವ ಸಾಮರ್ಥ್ಯವಿದೆ ಎಂದರ್ಥ. ಸೆಲೆಕ್ಟರ್ಸ್ ಆಟಗಾರರನ್ನ ಬೆಂಚ್‌ ಕಾಯಲೋ ಅಥವಾ ಪ್ರವಾಸಕ್ಕಾಗೋ ಆಯ್ಕೆ ಮಾಡಲ್ಲ. ನಾವು ನೋಡುತ್ತಿರುವ 20 ಮಂದಿ ಆಟಗಾರರಲ್ಲಿ, ಪ್ರತಿಯೊಬ್ಬ ಆಟಗಾರನೂ ಉತ್ತಮ ಪ್ರದರ್ಶನದ ಆಧಾರದಿಂದಲೇ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಲು ಕಷ್ಟ ಪಟ್ಟಿದ್ದಾರೆ. ಭಾರತದಲ್ಲಿ ಹೆಚ್ಚು ಮಂದಿ ಕ್ರಿಕೆಟ್ ಆಡುತ್ತಾರೆ, ಉತ್ತಮ ಪ್ರದರ್ಶನ ನೀಡುತ್ತಿರುತ್ತಾರೆ. ಹೀಗಾಗಿ ತಂಡಕ್ಕೆ ಆಯ್ಕೆ ಆಗೋದು ಸುಲಭವಲ್ಲ. ಪ್ರತಿ ಸಲ ಎಲ್ಲರಿಗೂ ಚಾನ್ಸ್ ಸಿಗೋದು ಅಪರೂಪ. ಆದ್ರೆ, ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿರುವುದು ಒಳ್ಳೆಯದು ಕೂಡ.. ಪರಿಸ್ಥಿತಿಯ ಕಾರಣ ಅನಿವಾರ್ಯವಾಗಿತ್ತು’
-ರಾಹುಲ್​​ ದ್ರಾವಿಡ್​, ಕೋಚ್​

blank

ದ್ರಾವಿಡ್​ ಏನೋ ಹೈ ರಿಸ್ಕ್​ ತೆಗೆದುಕೊಂಡು ಆಟಗಾರರಿಗೆ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ ನೀಡಿದ್ರು. ಆದ್ರೆ, ದ್ರಾವಿಡ್​​ ಇರಿಸಿದ ಭರವಸೆಯನ್ನ ಆಟಗಾರರು ಹುಸಿಗೊಳಿಸಿದ್ರು. ಇದೇ ಟೀಕೆಗೆ ಗುರಿಯಾದ ವಿಚಾರ ಕೂಡ ಹೌದು. ಈ ಬಗ್ಗೆಯೂ ಮಾತನಾಡಿದ ದಿ ವಾಲ್ ಡೆಬ್ಯು ಮಾಡಿ ವೈಫಲ್ಯ ಅನುಭವಿಸಿದ ಯುವ ಆಟಗಾರರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.

‘ನೀವು 15-20 ಮಂದಿಯ ತಂಡದಲ್ಲಿ ಆಯ್ಕೆಯಾಗಿದ್ದರೆ, ಯಾವುದೇ ಸಮಯದಲ್ಲಿ ಆಡುವ ಹನ್ನೊಂದರಲ್ಲಿ ಆಡಬೇಕಾಗುತ್ತೆ ಎಂಬುವುದು ನಿಮ್ಮ ತಲೆಯಲ್ಲಿ ಇರಬೇಕಾಗುತ್ತೆ. ಯಾಕಂದ್ರೆ ಕೆಲ ಇಂಜುರಿ, ಫಾರ್ಮ್ ಸಮಸ್ಯೆಯಿಂದಾಗಿ ಯಾವುದೇ ಕ್ಷಣದಲ್ಲಿ ಕ್ಯಾಪ್ ಪಡೆಯಬಹುದು. ಅಂಥಹ ಅವಕಾಶ ಸಿಕ್ಕಾಗ ಪ್ರದರ್ಶನ ನೀಡುವುದು ನಿಮ್ಮ ಕರ್ತವ್ಯ. ಪ್ರತಿಯೊಬ್ಬರೂ ಅದಕ್ಕೆ ಅರ್ಹರು ಎಂದು ನಾನು ನಂಬುತ್ತೇನೆ‘
-ರಾಹುಲ್​​ ದ್ರಾವಿಡ್​, ಕೋಚ್​

ಏಕದಿನ ಸರಣಿಯಲ್ಲಿ ಡೆಬ್ಯು: ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೃಷ್ಣಪ್ಪ ಗೌತಮ್, ನಿತೀಶ್ ರಾಣಾ, ರಾಹುಲ್ ಚಹರ್, ಸಂಜು ಸ್ಯಾಮ್ಸನ್​, ಚೇತನ್ ಸಕಾರಿಯಾ.

ಟಿ20 ಸರಣಿಯಲ್ಲಿ ಡೆಬ್ಯು: ಪೃಥ್ವಿ ಶಾ, ವರುಣ್ ಚಕ್ರವರ್ತಿ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ಚೇತನ್ ಸಕಾರಿಯಾ.

ದ್ರಾವಿಡ್​ರ ಈ ಹೇಳಿಕೆಗೆ ಕಾರಣವೂ ಇದೆ. ಯಾಕಂದ್ರೆ ಈ ಸರಣಿಯಲ್ಲಿ ಡೆಬ್ಯೂ ಮಾಡಿದ್ದು ಬರೋಬ್ಬರಿ 11 ಮಂದಿ ಆಟಗಾರರು. ಈ ಪೈಕಿ ಮೂರ್ನಾಲ್ಕು ಮಂದಿ ಬಿಟ್ಟರೆ, ಉಳಿದೆಲ್ಲಾರ ಪ್ರದರ್ಶನ ಅಷ್ಟಕ್ಕಷ್ಟೇ ಆಗಿತ್ತು. ಆಟಗಾರರು ಅವಕಾಶ ಸದ್ಬಳಕೆ ಮಾಡಿಕೊಳ್ಳಲಿಲ್ಲ ಅನ್ನೋದೆ, ದ್ರಾವಿಡ್​​ ಬೇಸರಕ್ಕೆ ಕಾರಣವಾದ ವಿಚಾರ.

blank

The post ‘ಬೆಂಚ್‌ ಕಾಯಲೋ, ಪ್ರವಾಸಕ್ಕಾಗೋ ಆಟಗಾರರನ್ನ ಆಯ್ಕೆ ಮಾಡಲ್ಲ’ -ಟೀಕಾಕಾರರಿಗೆ ದ್ರಾವಿಡ್​ ಟಾಂಗ್ appeared first on News First Kannada.

Source: newsfirstlive.com

Source link