ಮೋದಿ, ಅಮಿತ್​​ ಶಾ, ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ; ಯಾಕೆ ಗೊತ್ತೇ?

ಮೋದಿ, ಅಮಿತ್​​ ಶಾ, ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ; ಯಾಕೆ ಗೊತ್ತೇ?

ನವದೆಹಲಿ: ಇತ್ತೀಚೆಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಸವರಾಜ್​​ ಬೊಮ್ಮಾಯಿ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ತನ್ನ ದೆಹಲಿ ಭೇಟಿ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಸವರಾಜ್​​ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದೇನೆ. 12 ಗಂಟೆಗೆ ಅಮಿತ್ ಶಾ ಭೇಟಿ ಮಾಡಲಿದ್ದೇನೆ ಎಂದರು.

ಇನ್ನು, 4 ಗಂಟೆಗೆ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತೇನೆ. ನನ್ನನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲಿದ್ದೇನೆ. ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲಿದ್ದೇನೆ ಎಂದು ತಿಳಿಸಿದರು.

ಕೇರಳ ಗಡಿ ಭಾಗದಲ್ಲಿ ಬಿಗಿಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಸಮಾಲೋಚನೆ ನಡೆಸುತ್ತೇನೆ. ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಗಡಿಯಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ಮುಹೂರ್ತ ಫಿಕ್ಸ್; ಸಚಿವಾಕಾಂಕ್ಷಿಗಳಿಂದ ಹೆಚ್ಚಿದ ಲಾಬಿ

ಸಿದ್ದರಾಮಯ್ಯ ಸರ್ಕಾರದ ವಿರುದ್ದ ಪುಸ್ತಕ ಬಿಡುಗಡೆ ವಿಚಾರದ ಮಾತಾಡಿದ ಬೊಮ್ಮಾಯಿ, ಅದು ಒಂದು ಸುಳ್ಳಿನ ಕಂತೆ ಇದೆ. ನಾನು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬರೆದ ಪುಸ್ತಕವನ್ನ ನಿನ್ನೆ ರಾತ್ರಿಯೆ ತರೆಸಿಕೊಂಡಿದ್ದೇನೆ. ಪೂರ್ತಿ ಅವರ ಪುಸ್ತಕ ನೋಡಿ ಮಾತಾಡುತ್ತೇನೆ ಎಂದರು.

The post ಮೋದಿ, ಅಮಿತ್​​ ಶಾ, ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ; ಯಾಕೆ ಗೊತ್ತೇ? appeared first on News First Kannada.

Source: newsfirstlive.com

Source link