ಕೆರೆಗೆ ಉರುಳಿದ KSRTC ಬಸ್​​​- ತಪ್ಪಿದ ಭಾರೀ ದುರಂತ

ಕೆರೆಗೆ ಉರುಳಿದ KSRTC ಬಸ್​​​- ತಪ್ಪಿದ ಭಾರೀ ದುರಂತ

ಶಿವಮೊಗ್ಗ: ಎದುರಿಗೆ ಬಂದ ಬೈಕ್​ ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್ಸೊಂದು ಕೆರೆಗೆ ಉರುಳಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಕಾಸ್ಪಾಡಿ ಕ್ರಾಸ್ ನ ಬಳಿ ನಡೆದಿದೆ.

blank

ಇದನ್ನೂ ಓದಿ: ಸಂಪುಟ ರಚನೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ, ಸಲಹೆಯನ್ನು ನೀಡಲ್ಲ -ಬಿಎಸ್​ವೈ

ಸಾಗರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಬೈಕೊಂದು ಎದುರಾಗಿದೆ. ಈ ಸಂದರ್ಭದಲ್ಲಿ ಬಸ್​ ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಕೆರೆಗೆ ಉರುಳಿದೆ.

blank

ಪರಿಣಾಮ ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರನ್ನು ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬೈಕ್​ ಸವಾರರಾದ ದೀಪಕ ಮತ್ತು ಪ್ರಜ್ವಲ್​ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಕೆರೆಗೆ ಉರುಳಿದ KSRTC ಬಸ್​​​- ತಪ್ಪಿದ ಭಾರೀ ದುರಂತ appeared first on News First Kannada.

Source: newsfirstlive.com

Source link