ನನ್ನ ಡಿಸಿಎಂ ಮಾಡಿದ್ರು ಸರಿ, ಸಚಿವ ಸ್ಥಾನ ಕೊಟ್ರು ಓಕೆ; ಕೆ.ಎಸ್​ ಈಶ್ವರಪ್ಪ ಹೀಗಂದಿದ್ಯಾಕೇ?

ನನ್ನ ಡಿಸಿಎಂ ಮಾಡಿದ್ರು ಸರಿ, ಸಚಿವ ಸ್ಥಾನ ಕೊಟ್ರು ಓಕೆ; ಕೆ.ಎಸ್​ ಈಶ್ವರಪ್ಪ ಹೀಗಂದಿದ್ಯಾಕೇ?

ಮೈಸೂರು: ನನಗೆ ಡಿಸಿಎಂ ಪೋಸ್ಟ್​ ನೀಡಿದ್ರು ಸರಿ, ಸಚಿವ ಸ್ಥಾನ ಕೊಟ್ಟು ಕೆಲಸ ಮಾಡು ಅಂದ್ರು ಓಕೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ನ್ಯೂಸ್​​ ಫಸ್ಟ್​ ಜತೆ ಮಾತಾಡಿದ ಕೆ.ಎಸ್​​ ಈಶ್ವರಪ್ಪ, ನನ್ನನ್ನ ಡಿಸಿಎಂ ಮಾಡಿದ್ರು ಕೆಲಸ ಮಾಡ್ತೀನಿ. ಸಚಿವರನ್ನಾಗಿ ಮಾಡಿದ್ರು ಸರಿ, ಇಲ್ಲ ಶಾಸಕರಾಗಿಯೇ ಮುಂದುವರಿಯಿರಿ ಅಂದ್ರು ಓಕೆ ಎಂದು ತಿಳಿಸಿದ್ದಾರೆ.

ಜಗದೀಶ್​​ ಶೆಟ್ಟರ್​​ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಹೈಕಮಾಂಡ್​ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ಹಿರಿಯರನ್ನು ಕೈ ಬಿಡಬೇಕು ಎಂಬ ಚರ್ಚೆ ಪಕ್ಷದಲ್ಲಿ ಎಲ್ಲೂ ನಡೆದಿಲ್ಲ. ರಾಜ್ಯದ ಸಿಎಂ ಆಗಿ ಬಸವರಾಜ್​​ ಬೊಮ್ಮಾಯಿರನ್ನು ಎಲ್ಲರೂ ಸೇರಿ ಆಯ್ಕೆ ಮಾಡಿದ್ದೇವೆ. ಇದರಲ್ಲಿ ಯಡಿಯೂರಪ್ಪ ಕೂಡ ಒಬ್ಬರು ಎಂದರು.

ಇದನ್ನೂ ಓದಿ: ಮೋದಿ, ಅಮಿತ್​​ ಶಾ, ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ; ಯಾಕೆ ಗೊತ್ತೇ?

ಪಕ್ಷಕ್ಕಾಗಿ ಹಲವು ವರ್ಷ ದುಡಿದಿದ್ದೇನೆ. ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದರು. ಹೈಕಮಾಂಡ್​​ ಬಸವರಾಜ್​​ ಬೊಮ್ಮಾಯಿರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ಈಗ ಡಿಸಿಎಂ ಪೋಸ್ಟ್​ ನೀಡಲಿ ಎಂದು ಸ್ವಾಮೀಜಿಗಳು ಮತ್ತು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಡಿಸಿಎಂ ಹುದ್ದೆ ನೀಡಲಿ

ಹಿರಿತನ ಪರಿಗಣಿಸಿ ಡಿಸಿಎಂ ಹುದ್ದೆ ನೀಡುವ ನಿರೀಕ್ಷೆ ಇದೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ರು. ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೂ, ಅಧಿಕಾರ ನಡೆಸಲು ಅವಕಾಶ ನೀಡಿದ್ದಾರೆ. ಹಾಗಾಗಿ ಕೆಲವು ಗೊಂದಲಗಳು ಇದ್ದದ್ದು ನಿಜ. ಈಗ ಹೈಕಮಾಂಡ್​​ ಎಲ್ಲವನ್ನೂ ಬಗೆಹರಿಸಿದೆ ಎಂದು ಸಮರ್ಥಿಸಿಕೊಂಡರು.

The post ನನ್ನ ಡಿಸಿಎಂ ಮಾಡಿದ್ರು ಸರಿ, ಸಚಿವ ಸ್ಥಾನ ಕೊಟ್ರು ಓಕೆ; ಕೆ.ಎಸ್​ ಈಶ್ವರಪ್ಪ ಹೀಗಂದಿದ್ಯಾಕೇ? appeared first on News First Kannada.

Source: newsfirstlive.com

Source link