ಲಂಕಾ ಪ್ರವಾಸದಲ್ಲಿರುವ ಚಹಲ್, ಕೆ.ಗೌತಮ್​ಗೆ ಕೊರೊನಾ ಸೋಂಕು ದೃಢ

ಲಂಕಾ ಪ್ರವಾಸದಲ್ಲಿರುವ ಚಹಲ್, ಕೆ.ಗೌತಮ್​ಗೆ ಕೊರೊನಾ ಸೋಂಕು ದೃಢ

ಕೃನಾಲ್​​ ಪಾಂಡ್ಯಗೆ ಕೊರೊನಾ ಪಾಸಿಟಿವ್​​ ಕಾಣಿಸಿಕೊಂಡ ಬೆನ್ನಲ್ಲೆ, ಟೀಮ್ ಇಂಡಿಯಾದಲ್ಲಿ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೃನಾಲ್​ ಪಾಂಡ್ಯರ ಪ್ರಾಥಮಿಕ ಸಂಪರ್ಕಿತರಾಗಿದ್ದ ಆಲ್​ರೌಂಡರ್​​ ಕೆ.ಗೌತಮ್​ ಮತ್ತು ಲೆಗ್​ ಸ್ಪಿನ್ನರ್​​ ಯುಜುವೇಂದ್ರ ಚಹಲ್​​​ಗೆ, ಕೊರೊನಾ ಪಾಸಿಟಿವ್​​ ವರದಿ ಬಂದಿದೆ. ನಿನ್ನೆ ನಡೆಸಿದ RT-PCR ಟೆಸ್ಟ್​ನಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಆಟಗಾರರ ಪೈಕಿ ಗೌತಮ್​ ಮತ್ತು ಚಹಲ್​ ಕೂಡ ಐಸೋಲೇಷನ್​ಗೆ ಒಳಗಾಗಿದ್ದರು. ಹಾಗಾಗಿ ಇಬ್ಬರೂ ಶ್ರೀಲಂಕಾ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಈ ಇಬ್ಬರ ಜೊತೆಗೆ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ದೀಪಕ್ ಚಹಾರ್ ಮತ್ತು ಇಶಾನ್ ಕಿಶನ್ ಕೂಡ ಐಸೋಲೇಷನ್​​ಗೆ ಒಳಗಾಗಿದ್ದರು.

The post ಲಂಕಾ ಪ್ರವಾಸದಲ್ಲಿರುವ ಚಹಲ್, ಕೆ.ಗೌತಮ್​ಗೆ ಕೊರೊನಾ ಸೋಂಕು ದೃಢ appeared first on News First Kannada.

Source: newsfirstlive.com

Source link