ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೈಫೈ ಬೈಕ್ಸ್​ ಕದೀತಿದ್ದ ಖತರ್ನಾಕ್​​ ಕಳ್ಳ ಅಂದರ್​​​…

ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೈಫೈ ಬೈಕ್ಸ್​ ಕದೀತಿದ್ದ ಖತರ್ನಾಕ್​​ ಕಳ್ಳ ಅಂದರ್​​​…

ಬೆಂಗಳೂರು: ತಾನು ಮಾಡೋದು ಅನಾಚಾರ, ಇನ್ನೊಬ್ಬರಿಗೆ ಹೇಳೋದು ಉಪಚಾರ ಅನ್ನೋ ಗಾದೆ ಮಾತೊಂದಿದೆ. ಹೀಗೆ ತನ್ನ ಯೂಟ್ಯೂಬ್​​ ಚಾನೆಲ್​​ ಮೂಲಕ ಇಬ್ಬೊಬ್ಬರಿಗೆ ಉಪಚಾರ ಮಾಡ್ತಿದ್ದ ಖತರ್ನಾಕ್​ ಕಳ್ಳನೋರ್ವ ಮಾಡುತ್ತಿದ್ದದ್ದು ಮಾತ್ರ ಅನಾಚಾರ.

ಹೌದು, ಯೂಟ್ಯೂಬ್​ ಚಾನೆಲ್​ನಲ್ಲಿ ಜನರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಿದ್ದ ಚಾಲಾಕಿ ನಟನೊಬ್ಬ ಈಗ ಬೈಕ್​ ಕಳ್ಳತನ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿದೆ.

ಈಗಿನ ಕಲರ್​ಫುಲ್​​ ದುನಿಯಾನೇ ಹಾಗೇ. ಇಲ್ಲಿ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅನ್ನೋದೇ ಗೊತ್ತಾಗಲ್ಲ. ಇಷ್ಟು ದಿನ ಜನರಿಗೆ ಉಪದೇಶ ಮಾಡುತ್ತಾ, ಸ್ಪೂರ್ತಿದಾಯಕ ಮಾತುಗಳು ಆಡುತ್ತಾ ಇದ್ದ ಕಿಡಿಗೇಡಿಯೋರ್ವ ಹೈಟೆಕ್​​ ಬೈಕ್​​ ಕದೀತಿದ್ದ ಎಂಬುದೇ ಇದಕ್ಕೆ ಸಾಕ್ಷಿ.

blank

ಇದನ್ನೂ ಓದಿ: ರೀ ಓಪನ್​ ಆಯ್ತು ಮಣಿ ಮರ್ಡರ್ ಕೇಸ್ -ರೌಡಿಶೀಟರ್​ ನಾಗ, ಮೋಹನ್​​​ನನ್ನು ಬಂಧಿಸಿದ ಸಿಸಿಬಿ

ವಿಕಾಸ್ ಎಂಬಾತ​ ಪೊಲೀಸರಿಂದ ಬಂಧನಕ್ಕೀಡಾದ ಖತರ್ನಾಕ್​​ ಕಳ್ಳ. ಈತ ಮೂಲತ ನಟ ಎಂದು ಹೇಳಿಕೊಳ್ಳುತ್ತಿದ್ದ. ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿದ್ದ. ಹೊರ ರಾಜ್ಯದಿಂದ ವಿಮಾನದಲ್ಲಿ ಬಂದು ಬೈಕ್​​ ಎಗರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ತನ್ನ ಸ್ನೇಹಿತರಿಗೆ ನನ್ನ ಜೊತೆ ಬನ್ನಿ ಒಳ್ಳೆ ದುಡ್ಡು ಮಾಡಬಹುದು ಎಂದು ನಂಬಿಸುತ್ತಿದ್ದ. ಹೀಗೆ ಹೇಳಿ ಸ್ನೇಹಿತರನ್ನು ಈ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎಂಬ ಆರೋಪವೂ ಈತನ ಮೇಲಿದೆ.

blank

ಹೈಫೈ ಬೈಕ್​​ ಕಳ್ಳತನ ಮಾಡುತ್ತಿದ್ದ ಈತ ನಕಲಿ ದಾಖಲೆ ಸೃಷ್ಟಿಸಿ ರಾಜಸ್ಥಾನಕ್ಕೆ ಹೋಗಿ ಓಎಲ್​​ಎಕ್ಸ್​ನಲ್ಲಿ ಮಾರಾಟ ಮಾಡುತ್ತಿದ್ದನಂತೆ. ಇದರಿಂದ ಬಂದ ಹಣದಿಂದ ಯೂಟ್ಯೂಬ್​ ಚಾನೆಲ್​​ ನಡೆಸುತ್ತಿದ್ದನಂತೆ. ಈಗ ಈತನನ್ನು ಬಂಧಿಸಿರುವ ಪೊಲೀಸರು ಆ್ಯಕ್ಟಿಂಗ್​​ ಹುಚ್ಚಿನಿಂದ ದುಡ್ಡು ಮಾಡಬೇಕೆಂದು ದಂಧೆಯಲ್ಲಿ ತೊಡಗಿದ್ದ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

The post ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೈಫೈ ಬೈಕ್ಸ್​ ಕದೀತಿದ್ದ ಖತರ್ನಾಕ್​​ ಕಳ್ಳ ಅಂದರ್​​​… appeared first on News First Kannada.

Source: newsfirstlive.com

Source link