ನೀವು I-Phone, I-Pad ಬಳಕೆದಾರರಾ? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ನಿಮಗೆ ಬಿಗ್ ಶಾಕ್..!

ನೀವು I-Phone, I-Pad ಬಳಕೆದಾರರಾ? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ನಿಮಗೆ ಬಿಗ್ ಶಾಕ್..!

ಸ್ಮಾರ್ಟ್​​ ಫೋನ್​ಗಳಲ್ಲಿ ಯಾವ ಸಂಸ್ಥೆಯ ಫೋನ್​ಗಳು ಸೇಫ್? ಮತ್ತು ಹ್ಯಾಕ್​ ಮಾಡಲು ಸಾಧ್ಯವಾಗದೇ ಇರುವಂಥದ್ದು? ಅನ್ನೋ ಪ್ರಶ್ನೆ ಕೇಳಿದ್ರೆ ಎಂಥವರು ಥಟ್ ಅಂತ ಹೇಳುವ ಉತ್ತರ I-Phone.. I-Phone.. I-Phone ಅಂತಾ.. ಅದೇ ರೀತಿ ಟ್ಯಾಬ್​​​ಗಳಲ್ಲಿ ಯಾವುದು ಸೇಪ್? ಅಂತಾ ಕೇಳಿದ್ರೆ ಆಗಲೂ ಥಟ್ ಅಂತ ಬರೋ ಉತ್ತರ I-PAD ಅನ್ನೋದು.. ಆದ್ರೆ.. ನಿಮ್ಮ ಈ ನಂಬಿಕೆ ಹುಸಿಯಾಗುವಂಥ ಬೆಳವಣಿಗೆ ಕಳೆದ ನಾಲ್ಕು ತಿಂಗಳಿಂದ ನಡೀತಿದೆ.. ನಿಮ್ಮ ಐ-ಪ್ಯಾಡ್​, ಐ-ಫೋನ್ ಅಷ್ಟೇ ಅಲ್ಲ ಐ-ಪೋಡ್​​ ಟಚ್​ ಸಹ ಹ್ಯಾಕ್​ ಆಗಿರಬಹುದು.. ನಿಮ್ಮ ಮಾಹಿತಿ ಸೋರಿಕೆಯಾಗಿರಬಹುದು.. ನಿಮಗೇ ಗೊತ್ತಾಗದಂತೆ ನಿಮ್ಮ ಫೋನಿನಲ್ಲಿ ಕಳೆದ ನಾಲ್ಕು ತಿಂಗಳಿಂದ ಕಳ್ಳನೊಬ್ಬ ಕುಳಿತಿದ್ದ ಅಂದ್ರೆ ನೀವು ನಂಬಲೇ ಬೇಕು.. ಇದೇ ಕಾರಣದಿಂದಾಗಿ ನಿಮ್ಮ ಫೋನ್​​​ನಲ್ಲಿದ್ದ ಬಗ್​​​ಗಳಿಂದಾಗಿ ನಿಮ್ಮ ಫೋನೇ ಹ್ಯಾಕರ್​​ಗಳ ಬೆರಳ ತುದಿಗೆ ಹೋಗಿರೋ ಸಾಧ್ಯತೆ. ಇದೇ ಕಾರಣದಿಂದಾಗಿ.. ಈ ಅನಾಹುತ ತಡೆಗಟ್ಟಲು ಈಗ ಕೇಂದ್ರ ಸರ್ಕಾರವೇ ಮುಂದೆ ಬಂದಿದ್ದು.. ಅತ್ಯಂತ ಮಹತ್ವದ ಸಂದೇಶವನ್ನು ನಿನ್ನೆ ದೇಶ ವಾಸಿಗಳಿಗೆ, ಅದ್ರಲ್ಲೂ ಆ್ಯಪಲ್ ಬಳಕೆದಾರರಿಗೆ ನೀಡಿದೆ. ನೀವು ಮತ್ತು ನಿಮ್ಮ ಗೌಪ್ಯತೆ ಸೇಫ್ ಆಗಿರಬೇಕು ಅಂದ್ರೆ ಹೀಗೆ ಮಾಡಲೇಬೇಕು ಅಂತಾ ಹೇಳಿದೆ.

ಅಷ್ಟಕ್ಕೂ ಆಗಿದ್ದು ಏನು?

ಇದು ಖಂಡಿತವಾಗಿಯೂ ಐ ಫೋನ್, ಐ ಪ್ಯಾಡ್ ಬಳಕೆದಾರರಿಗೆ ಬಿಗ್​ ಶಾಕೇ ಸರಿ..ನಿಮ್ಮ ಐ ಫೋನ್, ಐ ಪ್ಯಾಡ್​​ ಬಗ್ಗೆ ಸ್ಫೋಟಕ ಮಾಹಿತಿ ಕನಿಷ್ಠ ಕಳೆದ ನಾಲ್ಕು ತಿಂಗಳಿಂದ ಸೋರಿಕೆಯಾಗಿರಬಹುದು ಅನ್ನೋ ಮಾಹಿತಿ ಲಭ್ಯವಾಗಿದೆ. ಜೊತೆಗೆ ನಿಮ್ಮ ಫೋನ್​​ ಅಥವಾ ಗ್ಯಾಜೆಟ್​ಗಳ ಮೆಮರಿ ಮೇಲೆ ಇದು ದಾಳಿ ಮಾಡಿರೋದ್ರಿಂದ ನೀವು ಸೇವ್ ಮಾಡಿಟ್ಟುಕೊಂಡಿರೋ ಮಾಹಿತಗಳೂ ಸೋರಿಕೆ ಯಾಗಿರುವ ಸಾಧ್ಯತೆ ಇಲ್ಲದೇ ಇಲ್ಲ. ಇದರ ಅರಿವು ಆ್ಯಪಲ್​ ಸಂಸ್ಥೆಗೂ ಬಂದಿದ್ದು.. ಅವರೂ ಕೂಡ ಇದಕ್ಕೆ ತಿರು ಮಂತ್ರ ಹಾಕಲು ಹೊಸ ಅಪ್ಡೇಟ್ ಬಿಟ್ಟಿದ್ದಾರೆ. ನಿಮ್ಮ ಕಳೆದ ಅಪ್ಡೇಟ್​​​ ವೇಳೆ ಕೆಲ ಬ್ಲೈಂಡ್​ ಸ್ಪಾಟ್​ಗಳು ಇದ್ದವು ಎನ್ನಲಾಗಿದ್ದು, ಅದನ್ನೇ ಹ್ಯಾಕರ್ಸ್ ಬಳಸಿರುವ ಸಾಧ್ಯತೆ ಇದೆ. ಇದು ಬಳಕೆದಾರರ ಗೌಪ್ಯತೆ ಮತ್ತು ಸೇಫ್ಟಿ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಅತ್ಯಂತ ಮಹತ್ವದ ಎಚ್ಚರಿಕೆಯನ್ನು ಆ್ಯಪಲ್ ಬಳಕೆದಾರರಿಗೆ ನೀಡಿದೆ.

ಯಾವೆಲ್ಲಕ್ಕೂ ಆಗಿತ್ತು ಎಫೆಕ್ಟ್?

​ಪೆಗಸಸ್ ಗೂಢಾಚಾರಿ ಸಾಫ್ಟ್​ವೇರ್ ವಿವಾದ ಭುಗಿಲೆದ್ದ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಹೌದು.. ಅತ್ಯಂತ ಸೇಫ್​ ಎನ್ನಲಾಗಿದ್ದ ನಿಮ್ಮ 6 S ಮತ್ತು ನಂತರದ ಎಲ್ಲ ಐ-ಫೋನ್ ಮಾಡೆಲ್, ಐ-ಪ್ಯಾಡ್ ಪ್ರೋದ ಎಲ್ಲ ಮಾಡೆಲ್, ಐ-ಪ್ಯಾಡ್ ಏರ್-2, ಐ-ಪ್ಯಾಡ್ 5th Gen ಮತ್ತು ನಂತರದ ಎಲ್ಲ ಮಾಡೆಲ್, ಐ-ಪ್ಯಾಡ್ ಮಿನಿ-4 ಮತ್ತು ನಂತರದ ಎಲ್ಲ ಮಾಡೆಲ್​ಗಳು, 7th Gen i-Pod ಟಚ್​​ಎಲ್ಲಕ್ಕೂ ಬಗ್​ ಎಫೆಕ್ಟ್​​ ಆಗಿದ್ದು ತಕ್ಷಣವೇ ನೀವು ಹೀಗೆ ಮಾಡಲೇ ಬೇಕು ಅಂತಾ ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ (CERT IN) ಮಾಹಿತಿ ನೀಡಿದೆ.

ಹಾಗಿದ್ದರೆ ನೀವು ಮಾಡಬೇಕಿರೋದಾದ್ರೂ ಏನು?

ಈಗ ಐಫೋನ್​​​ ಮತ್ತು ಇತರೆ ಆ್ಯಪಲ್​ ಗೆಜೆಟ್​​ ಬಳಕೆದಾರರು ಅತ್ಯಂತ ಮಹತ್ವದ ಹೆಜ್ಜೆ ಇಡಬೇಕಿದೆ. ತಡ ಮಾಡದೇ.. ಈ ಸುದ್ದಿ ಓದುತ್ತಿದ್ದಂತೆಯೇ ಎಲ್ಲರೂ ತಮ್ಮ-ತಮ್ಮ ಐ-ಫೋನ್, ಐ-ಪ್ಯಾಡ್, ಐ-ಪೋಡ್ ಟಚ್​ ಗಳನ್ನು ಹೊಸದಾಗಿ ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿರೋ ಸಾಫ್ಟ್​ವೇರ್ ಅಪ್ಡೇಟ್​ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಲೇಬೇಕಿದೆ. ಹೀಗಂತ ನಾವು ಹೇಳ್ತಿಲ್ಲ.. ಬದಲಿಗೆ ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಅವರೇ ಮಾಹಿತಿ ನೀಡಿದ್ದಾರೆ. ಸದ್ಯ ಆ್ಯಪಲ್​ IOS 17.7.1 ಅಪ್ಡೇಟ್​ ಬಿಡುಗಡೆ ಮಾಡಿದ್ದು, ತಕ್ಷಣವೇ ಎಲ್ಲರೂ ಇದನ್ನು ಅಳವಡಿಸಿಕೊಳ್ಳಬೇಕು. ಯಾವ ಗ್ರಾಹಕರು ಈ ಅಪ್ಡೇಟ್​ ಡೌನ್​ ಲೋಡ್​ ಮಾಡಿ ಇನ್​ಸ್ಟಾಲ್ ಮಾಡಿಕೊಂಡಿಲ್ಲವೋ ಅಂಥವರ ಫೋನ್​ಗಳು ಖಂಡಿತ ಕಳ್ಳಕಾಕರ ಬೀದಿಯಲ್ಲಿ ಚಿನ್ನದ ಪೆಟ್ಟಿಗೆ ಹೊತ್ತು ನಿಂತ ವ್ಯಕ್ತಿಯಂತಾಗುವುದರಲ್ಲಿ ಸಂಶಯವೇ ಇಲ್ಲ.

ವಿಶೇಷ ಬರಹ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ನೀವು I-Phone, I-Pad ಬಳಕೆದಾರರಾ? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ನಿಮಗೆ ಬಿಗ್ ಶಾಕ್..! appeared first on News First Kannada.

Source: newsfirstlive.com

Source link