ಕರಾಚಿಯಲ್ಲಿ ಚಾಕೋಲೇಟ್ ಬಿರಿಯಾನಿ – ರುಚಿ ಹೇಗಿತ್ತು ಗೊತ್ತಾ?

ಸಾಮಾನ್ಯವಾಗಿ ಬಿರಿಯಾನಿ ಎಂದರೆ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಆದರೆ ಯಾರಾದರೂ ಚಾಕೋಲೇಟ್ ಬಿರಿಯಾನಿ ಬಗ್ಗೆ ಕೇಳಿದ್ದೀರಾ? ಹೌದು ಕರಾಚಿಯಲ್ಲಿ ಚಾಕೋಲೇಟ್ ಬಿರಿಯಾನಿಯನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಚಾಕೋಲೇಟ್ ಬಿರಿಯಾನಿಯನ್ನು ತಯಾರಿಸಿರುವ ವೀಡಿಯೋವನ್ನು ಪಾಕಿಸ್ತಾನ ಯೂಟ್ಯೂಬ್ ಚಾನೆಲ್‍ವೊಂದು ಶೇರ್ ಮಾಡಿಕೊಂಡಿದೆ. ಇದೀಗ ಈ ಡಿಫರೆಂಟ್ ಫುಡ್‍ನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಕರಾಚಿಯಲ್ಲಿ ಚಾಕೋಲೇಟ್ ಬಿರಿಯಾನಿ ಮಾರಾಟ ಮಾಡುವ ಅಂಗಡಿಗೆ ಭೇಟಿ ನೀಡುತ್ತಾರೆ. ನಂತರ ಒಂದು ಪ್ಲೇಟ್‍ನಲ್ಲಿ ಬಿರಿಯಾನಿಯನ್ನು ಆರ್ಡರ್ ಮಾಡುತ್ತಾರೆ. ಬಳಿಕ ಸಪ್ಲೇಯರ್ ಒಂದು ಪ್ಲೇಟ್‍ನಲ್ಲಿ ಬಿರಿಯಾನಿ ಇಟ್ಟು ಅದರ ಮೇಲೆ ಒಂದು ಗ್ಲಾಸ್ ಚಾಕೋಲೇಟ್ ಸಾಸ್‍ನನ್ನು ಸುರಿಯುತ್ತಾರೆ.

ನಂತರ ವ್ಯಕ್ತಿ ಬಿರಿಯಾನಿಯನ್ನು ಚಾಕೋಲೇಟ್ ಜೊತೆಗೆ ಬೆರೆಸಿ ಆನಂದದಿಂದ ಸವಿದು, ಕ್ಯಾ ಬಾತ್ ಹೈ, ವಾವ್, ಬಹಳ ರುಚಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 22,000 ವೀವ್ಸ್ ಹಾಗೂ ಹಲವಾರು ಕಾಮೆಂಟ್‌ಗಳು ಹರಿದು ಬರುತ್ತಿದೆ. ಇದನ್ನೂ ಓದಿ: ಮಳೆಗಾಲದ ಸ್ಪೆಷಲ್ ಹಲಸಿನ ಹಣ್ಣಿನ ಹಲ್ವ

The post ಕರಾಚಿಯಲ್ಲಿ ಚಾಕೋಲೇಟ್ ಬಿರಿಯಾನಿ – ರುಚಿ ಹೇಗಿತ್ತು ಗೊತ್ತಾ? appeared first on Public TV.

Source: publictv.in

Source link