ಶ್ರೀಲಂಕಾ ಪ್ರವಾಸದಲ್ಲಿ ಯಂಗ್​ ಇಂಡಿಯಾಗೆ ಸಿಕ್ಕ ಪ್ಲಸ್​, ನೆಗೆಟಿವ್ ಅಂಶಗಳಾವುವು?

ಶ್ರೀಲಂಕಾ ಪ್ರವಾಸದಲ್ಲಿ ಯಂಗ್​ ಇಂಡಿಯಾಗೆ ಸಿಕ್ಕ ಪ್ಲಸ್​, ನೆಗೆಟಿವ್ ಅಂಶಗಳಾವುವು?

ಸೋಲು-ಗೆಲುವುಗಳ ಆಚೆಗೆ ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸ ಸುಖಾಂತ್ಯ ಕಂಡಿದೆ. ಅನುಭವಿಗಳ ಅಲಭ್ಯತೆಯಲ್ಲಿ ಯಂಗ್​ ಇಂಡಿಯಾ ಕೈಗೊಂಡ ಲಂಕಾ ಪ್ರವಾಸದ ಪಾಸಿಟಿವ್ ಅಂಶಗಳೇನು..? ನೆಗೆಟಿವ್​ ಅಂಶಗಳೇನು..? ಇಲ್ಲಿದೆ ನೋಡಿ ಡಿಟೇಲ್ಸ್​

ಅನುಭವಿಗಳ ಅಲಭ್ಯತೆಯಲ್ಲಿ ಲಂಕಾ ಪ್ರವಾಸ ಬೆಳೆಸಿದ್ದ ಟೀಮ್​ ಇಂಡಿಯಾ ಗೆಲುವಿನ ಸಿಹಿ, ಸೋಲಿನ ಕಹಿ ಎರಡನ್ನೂ ಉಂಡಿದೆ. ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಗೆದ್ದು ಬೀಗಿದ ಟೀಮ್​ ಇಂಡಿಯಾ, ಟಿ20 ಸರಣಿಯನ್ನ ಕೈ ಚೆಲ್ಲಿದೆ. ಹೀಗೆ ಇಡೀ ಪ್ರವಾಸವೂ ಭಾರತದ ಪಾಸಿಟಿವ್​ ಹಾಗೂ ನೆಗೆಟಿವ್​ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

blank

ಲಂಕಾ ನಾಡಿಗೆ ಕಾಲಿಟ್ಟ ಟೀಮ್​ ಇಂಡಿಯಾ ಬಿ ತಂಡ ಏಕದಿನ ಸರಣಿ ಗೆದ್ದು ಬೀಗಿತ್ತು. ಆದ್ರೆ, ಬಬಲ್​ ಒಳಗೂ ನುಸುಳಿದ ಕೊರೊನಾ ಸೋಂಕು ಟಿ20 ಸರಣಿ ಗೆಲುವಿನ ಕನಸಿಗೆ ಮುಳ್ಳಾಯ್ತು. ಆದ್ರೆ, ಟಿ20 ಸರಣಿ ಸೋಲಿನ ನಡುವೆಯೂ ಪ್ರವಾಸದಲ್ಲಿ ಅನಾನುಭವಿ ಆಟಗಾರರು ಮಾಡಿದ ಹೋರಾಟ ಭಾರತೀಯ ಕ್ರಿಕೆಟ್​ಗೆ ಸಿಕ್ಕ ಪಾಸಿಟಿವ್​ ಅಂಶವಾಯ್ತು. ಇದೆಲ್ಲದರ ಜೊತೆ ಪೃಥ್ವಿ ಶಾ, ಶಿಖರ್​​ ಧವನ್​ ಫಾರ್ಮ್​ ಕಂಡುಕೊಂಡಿದ್ದು, ದೀಪಕ್​ ಚಹರ್​​ ಕೆಳ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್​ ನಡೆಸಿದ್ದು, ಲೋ ಸ್ಕೋರ್​​ ಗೇಮ್​ಗಳಲ್ಲೂ ನೆಕ್​ ಟು ನೆಕ್​ ಫೈಟ್​ ನಡೆಸಿದ್ದು ಸರಣಿಯಲ್ಲಿ ಭಾರತದ ಪಾಲಿಗೆ ಪಾಸಿಟಿವ್​ ಅಂಶಗಳೇ.

blank

ಪಾಸಿಟಿವ್ ಅಂಶಗಳಿಗಿಂತ​ ತಿದ್ದಿಕೊಳ್ಳಲೇ ಬೇಕಾದ ಹಲವು ತಪ್ಪುಗಳು ಪ್ರವಾಸದಲ್ಲಿ ಕಂಡು ಬಂದವು. ಬೌಲಿಂಗ್​ ವಿಭಾಗ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಎಡವಿದ್ದು ಪಂದ್ಯದಿಂದ ಪಂದ್ಯಕ್ಕೆ ಸಾಬೀತಾದ್ರೆ, ಮಿಸ್​​ ಫೀಲ್ಡಿಂಗ್​ಗಳು ಪ್ರವಾಸದಲ್ಲಿ ಭಾರತಕ್ಕೆ ಹಿನ್ನಡೆಯಾಯ್ತು. ಬ್ಯಾಟ್ಸ್​​ಮನ್​ಗಳು ಒತ್ತಡಕ್ಕೆ ಒಳಗಾಗಿದ್ದು ಟಿ20 ಸರಣಿಯಲ್ಲಂತೂ ಸ್ಪಷ್ಟವಾಗಿ ಗೋಚರಿಸಿತು.

blank

ಇನ್ನುಳಿದಂತೆ ಮಿಡಲ್​ ಆರ್ಡರ್​​ ಬ್ಯಾಟ್ಸ್​ಮನ್​ಗಳ ಬೇಜವಾಬ್ದಾರಿಯುತ ಆಟವಾಡಿದ್ದು ಹಿನ್ನಡೆಯಾಯ್ತು. ಇನ್ನುಳಿದಂತೆ ಸಿಕ್ಕ ಅವಕಾಶವನ್ನ ನಿತೀಶ್​ ರಾಣಾ, ಹಾರ್ದಿಕ್ ಪಾಂಡ್ಯ​, ಸಂಜು ಸ್ಯಾಮ್ಸನ್​ ಕೈ ಚೆಲ್ಲಿದ್ರು. ಸಕಾರಿಯಾ ಕೂಡ ನಿರೀಕ್ಷೆಯನ್ನ ಹುಸಿಗೊಳಿಸಿದ್ರು. ಈ ನೆಗೆಟಿವ್​ ಅಂಶಗಳ ಮೇಲೆ ಮ್ಯಾನೇಜ್​ಮೆಂಟ್​​ ಹಾಗೂ ಕೋಚಿಂಗ್​ ಸ್ಟಾಫ್​​ ವರ್ಕೌಟ್​ ಮಾಡಬೇಕಿದೆ.

The post ಶ್ರೀಲಂಕಾ ಪ್ರವಾಸದಲ್ಲಿ ಯಂಗ್​ ಇಂಡಿಯಾಗೆ ಸಿಕ್ಕ ಪ್ಲಸ್​, ನೆಗೆಟಿವ್ ಅಂಶಗಳಾವುವು? appeared first on News First Kannada.

Source: newsfirstlive.com

Source link