100 ಸಿನಿಮಾ ನಿರ್ದೇಶನದ ಬಳಿಕ ಕ್ಯಾಮೆರಾ ಮುಂದೆ ಬಂದ ನಿರ್ದೇಶಕ; ಇವ್ರ ನಟನೆಗೆ ರಾಜಮೌಳಿನೇ ಫಿದಾ

100 ಸಿನಿಮಾ ನಿರ್ದೇಶನದ ಬಳಿಕ ಕ್ಯಾಮೆರಾ ಮುಂದೆ ಬಂದ ನಿರ್ದೇಶಕ; ಇವ್ರ ನಟನೆಗೆ ರಾಜಮೌಳಿನೇ ಫಿದಾ

ಟಾಲಿವುಡ್​​ ನಿರ್ದೇಶಕ, 100ಕ್ಕೂ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್ ಕಟ್​​ ಹೇಳಿರುವ ಕೆ. ರಾಘವೇಂದ್ರ ಅವರು ಹಲವು ವರ್ಷಗಳ ಬಳಿಕ ಮತ್ತೊಮ್ಮೆ ಕ್ಯಾಮೆರಾ ಎದುರು ನಟನೆ ಮಾಡಿದ್ದಾರೆ. ಈ ಹಿಂದೆ ನಟ ಶ್ರೀಕಾಂತ್​​ ಹೀರೋ ಆಗಿ ನಟಿಸಿದ್ದ ‘ಪೆಳ್ಳಿ ಸಂದಡಿ’ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಸಿನಿಮಾದ ಕಥೆ, ಸಂಗೀತ ಹಾಗೂ ಎಮೋಷನ್ಸ್​​​ ಸೀನ್​ಗಳು ಪ್ರೇಕ್ಷಕರನ್ನು ಸೆಳೆದಿತ್ತು.

ಸದ್ಯ ಪೆಳ್ಳಿ ಸಂದಡಿ ಸಿನಿಮಾ ಸಿಕ್ವೇಲ್​​ ಸಿನಿಮಾ ಸಿದ್ಧವಾಗುತ್ತಿದ್ದು, ನಟ ಶ್ರೀಕಾಂತ್ ಅವರ ಪುತ್ರ ರೋಷನ್​ ಸಿನಿಮಾದ ಹೀರೋ ಆಗಿ ನಟಿಸಿದ್ದಾರೆ. ಚಿತ್ರದಕ್ಕೆ ‘ಪೆಳ್ಳಿ ಸಂದD’ ಎಂಬ ಶೀರ್ಷಿಕೆ ಫೈನಲ್​ ಆಗಿದೆ. ಈ ನಡುವೆ ಚಿತ್ರ ತಂಡ ವಿಶೇಷ ಮಾಹಿತಿಯನ್ನು ನೀಡಿದ್ದು, ನಿರ್ದೇಶಕ ಕೆ.ರಾಘವೇಂದ್ರ ರಾವ್​ ಅವರು ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ ಎಂಬುದನ್ನು ರಿವೀಲ್ ಮಾಡಿದೆ.

ರಾಘವೇಂದ್ರ ರಾವ್ ಅವರು ಸಿನಿಮಾದಲ್ಲಿ ವಶಿಷ್ಠ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಅವರ ಪಾತ್ರಕ್ಕೆ ಸಂಬಂಧಿಸಿದ ಪ್ರೋಮೊವನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ. ಈ ವಿಡಿಯೋ ಲಿಂಕ್​​ಅನ್ನು ಹಂಚಿಕೊಂಡಿರುವ ನಿರ್ದೇಶಕ ಎಸ್​​ಎಸ್​ ರಾಜಮೌಳಿ, ರಾಘವೇಂದ್ರ ರಾವ್ ಅವರಿಗೆ ಶುಭ ಕೋರಿದ್ದಾರೆ.

The post 100 ಸಿನಿಮಾ ನಿರ್ದೇಶನದ ಬಳಿಕ ಕ್ಯಾಮೆರಾ ಮುಂದೆ ಬಂದ ನಿರ್ದೇಶಕ; ಇವ್ರ ನಟನೆಗೆ ರಾಜಮೌಳಿನೇ ಫಿದಾ appeared first on News First Kannada.

Source: newsfirstlive.com

Source link