ಸೋಷಿಯಲ್​​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಧೋನಿ ನ್ಯೂ ಲುಕ್​

ಸೋಷಿಯಲ್​​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಧೋನಿ ನ್ಯೂ ಲುಕ್​

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಹೊಸ ಹೇರ್​ಸ್ಟೈಲ್, ಸದ್ಯ ಟ್ರೆಂಡಿಂಗ್​​ ಸೃಷ್ಟಿಯಾಗ್ತಿದೆ. ಮಾಹಿಯ ನ್ಯೂ ಲುಕ್​ಗೆ ಕ್ರಿಕೆಟ್ ಫ್ಯಾನ್ಸ್​​ ಫಿದಾ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಹಬ್ಬದಂತೆ ಸೆಲೆಬ್ರೇಟ್​ ಮಾಡ್ತಿದ್ದಾರೆ. ಕ್ಯಾಪ್ಟನ್ ಕೂಲ್​ ಚಿತ್ರಗಳನ್ನ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟರ್​​ ಆಲಿಮ್ ಹಕೀಮ್, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಜಾಲತಾಣದಲ್ಲಿ ಈ ಪೋಟೋಗಳು ಧೂಳೆಬ್ಬಿಸುತ್ತಿವೆ.

ಫೇಮಸ್​​ ಹೇರ್​​ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ವರುಣ್ ಧವನ್, ಅರ್ಜುನ್ ಕಪೂರ್, ಅಜಯ್ ದೇವಗನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ಬಾಲಿವುಡ್ ಸೆಲಿಬ್ರಿಟಿಗಳಿಗೆ ನ್ಯೂ ಲುಕ್​​​ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇದಕ್ಕೂ ಮುನ್ನ ಯಜುವೇಂದ್ರ ಚಹಲ್​​ಗೂ ಕೇಶ ವಿನ್ಯಾಸ ಮಾಡಿದ್ದರು.

The post ಸೋಷಿಯಲ್​​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಧೋನಿ ನ್ಯೂ ಲುಕ್​ appeared first on News First Kannada.

Source: newsfirstlive.com

Source link