Bigg Boss.. ದಿವ್ಯಾ ಸುರೇಶ್​ರನ್ನ ಯಾಕಿಷ್ಟು ಅವೈಡ್​ ಮಾಡ್ತಿದ್ದಾರೆ ಮಂಜು?

Bigg Boss.. ದಿವ್ಯಾ ಸುರೇಶ್​ರನ್ನ ಯಾಕಿಷ್ಟು ಅವೈಡ್​ ಮಾಡ್ತಿದ್ದಾರೆ ಮಂಜು?

ಬಿಗ್​ ಬಾಸ್​ ಮನೆಯಲ್ಲಿ ಸದ್ದು ಗದ್ದಲವಿಲ್ಲ, ಆಟದ ಟೆನ್ಷನ್​ ಇಲ್ಲ. ಆಟ ಆಡು ಮಜಾ ಮಾಡು ಎನ್ನುವ ರೀತಿಯಲ್ಲಿ ಬಿಗ್​ ಮನೆ ಪ್ರಶಾಂತವಾಗಿ ಹೊಸ ಟೆಲೆಂಟ್​ಗಳನ್ನು ಹೊರ ಹಾಕಲು ಸಾಕ್ಷಿಯಾಗುತ್ತಿದೆ. ಜೊತೆಗೆ ಅಲ್ಲಲ್ಲಿ ವೈಮನಸ್ಸಿನ ಗಾಳಿ ಕೂಡ ಸುಳಿಯುತ್ತಿದ್ದು, ಮಂಜು, ದಿವ್ಯಾ ಸುರೇಶ್​ ನಡುವೆ ಜಗಳವಾಗಿದೆ.

ಶಮಂತ್​, ಪ್ರಶಾಂತ್​ ಮಡಿಕೆ ಬ್ಯಾಲೆನ್ಸ್​ ಮಾಡುವ ಟಾಸ್ಕ್​ ಆಡುತ್ತಿದ್ದ ವೇಳೆ ದಿವ್ಯಾ, ಮಂಜುಗೆ ಕಿರಿಕ್​ ಆಗಿದೆ. ತಮಾಷೆಗೆ ಶುರುವಾದ ಮಾತು, ಸಿರೀಯಸ್​ ಆಗಿ ಇಬ್ಬರು ಮಾತು ಬಿಡುವ ಲೆವಲ್​ಗೆ ಹೊಯ್ತು.​ ಹೌದು, ಸುಮಾರು ಮೂರುವರೆ ಗಂಟೆಗೂ ಹೆಚ್ಚು ಕಾಲ ಮಡಿಕೆ ಆಟ ಮುಂದುವರೆದಿತ್ತು. ಊಟದ ಟೈಮ್​ ಆಗಿದ್ದರಿಂದ ಎಲ್ರೂ ಶಮಂತ್​, ಪ್ರಶಾಂತ್​ಗೆ ವೇಟ್​ ಮಾಡುತ್ತಿರುತ್ತಾರೆ. ಆಗ ದಿವ್ಯಾ ಎಸ್, ಮಂಜು​ ಹಸಿವಾಗಿದಿಯಾ..? ಅಂತಾ ಕೇಳಿದ್ದೆ ತಡ ಅದೇನ್​ ಆಯ್ತೋ ಗೊತ್ತಿಲ್ಲ ಮಂಜು ಕೆರಳಿದ.

blank

ನಿಂಗೆ ಬೇಕಾದ್ರೇ ಹೋಗಿ ತಿನ್ನು, ಇಲ್ಲ ಸುಮ್ನೆ ಕೂತ್ಕೋ. ನನ್ನನ್ನ ಯಾಕೆ ಕೇಳ್ತೀಯಾ..? ಅಂತಾ ಕೋಪದಲ್ಲಿಯೇ ಉತ್ತರ ನೀಡ್ತಾರೆ. ಇದಕ್ಕೆ ದಿವ್ಯಾ ಸುರೇಶ್​ ಸಿಟ್ಟಿನಿಂದ ನಾನ್​ ಊಟ ಮಾಡ್ತೀನಿ ಅಂತಾ ಎದ್ದು ಹೋಗುತ್ತಾರೆ.

ಏನೂ ಇಲ್ಲದೆನೇ ಇನ್ನೇನೋ ಇದೆ ಅನ್ನೋ ತರಹ ಮಂಜು, ದಿವ್ಯಾ ಸುರೇಶ್​ ವರ್ತಿಸುತ್ತಿರುತ್ತಾರೆ ಅನ್ನೋದು ಫ್ಯಾನ್ಸ್​ಗಳ ಗುಸುಗುಸು. ಒಂದು ಲೆಕ್ಕದಲ್ಲಿ ನೋಡೋದಾದ್ರೆ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮಂಜು, ದಿವ್ಯಾರನ್ನ ಬೇಕಂತಲೇ ಅವೈಡ್​ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಇದು ನಮ್ಮ ಮಾತಲ್ಲ, ಸ್ವತಃ ದಿವ್ಯಾ ಸಾಕಷ್ಟು ಬಾರಿ ಈ ಬಗ್ಗೆ ಬೇಸರ ವ್ಯಕ್ತಪಡೆಸಿದ್ದಾರೆ.

blank

ಇನ್ನೂ ಜಗಳದ ಬಗ್ಗೆ ಬೇಜಾರಾಗಿದ್ದ ದಿವ್ಯಾ, ವೈಷ್ಣವಿ ಮುಂದೆ ಮಂಜು ನಿನ್ನೆಯಿಂದ ಮಾತಾಡ್ತಿಲ್ಲ. ಸಲಿಗೆಯಿಂದ ಇರೋದು ಓಕೆ. ಆದ್ರೇ ನಿನ್ನೆ ಯಾಕೆ ರೇಗಿದ ಅಂತಾನೇ ಅರ್ಥ ಆಗ್ತಿಲ್ಲ. ಕೆಲವು ಸಾರಿ ಕೆಲ ಮಾತುಗಳನ್ನು ತಗೋಬಹುದು. ಆದರೆ ಯಾವಾಗಲು ಅಲ್ಲ. ಈ ರೀತಿ ಮಾಡೋದ್ರಿಂದ ನಂಗೆ ಅದೇ ತಲೆಯಲ್ಲಿ ತಿರುಗುತ್ತಿರುತ್ತದೆ. ಇದ್ರಿಂದ ಆಟಕ್ಕೆ ಎಫೆಕ್ಟ್​ ಆಗುತ್ತೆ ಅಂತಾ ಬೇಸರ ಹೊರ ಹಾಕ್ತಾರೆ.

ಇದಾದ್ಮೇಲೆ ಇಬ್ರು ಪ್ರಾಬ್ಲಂನ್ನ ಸಾಲ್ವ್​ ಮಾಡ್ಕೋತಾರೆ. ಆದ್ರೇ ಫಿನಾಲೆಗೆ ಇನ್ನೂ ಕೇವಲ 11 ದಿನ ಉಳಿದಿದೆ. ಈ ಸಮಯದಲ್ಲಿ ಮಾತುಗಳು ಒಂಚುರು ಆ ಕಡೆ ಈ ಕಡೆ ಆದ್ರೋ ಪೆಟ್ಟು ಬೀಳುವುದು ಟ್ರೋಫಿ ಗೆಲ್ಲುವ ಕನಸಿಗೆ. ಒಟ್ಟಿನಲ್ಲಿ ಇಷ್ಟುದಿನ ಕೂಗಾಟ ಹಾರಾಟಗಳಿಗೆ ಸಾಕ್ಷಿಯಾಗಿದ್ದ ಮನೆ, ಈಗ ದಿನಗಳನ್ನಾ ಲೆಕ್ಕಾ ಹಾಕುತ್ತಿದೆ.

The post Bigg Boss.. ದಿವ್ಯಾ ಸುರೇಶ್​ರನ್ನ ಯಾಕಿಷ್ಟು ಅವೈಡ್​ ಮಾಡ್ತಿದ್ದಾರೆ ಮಂಜು? appeared first on News First Kannada.

Source: newsfirstlive.com

Source link