ಕ್ವಾರ್ಟರ್​ ಫೈನಲ್ಸ್​ ಸೋತ ದೀಪಿಕಾ ಕುಮಾರಿ- ಆರ್ಚರಿಯಲ್ಲಿ ಭಾರತಕ್ಕೆ ಪದಕ ಮಿಸ್

ಕ್ವಾರ್ಟರ್​ ಫೈನಲ್ಸ್​ ಸೋತ ದೀಪಿಕಾ ಕುಮಾರಿ- ಆರ್ಚರಿಯಲ್ಲಿ ಭಾರತಕ್ಕೆ ಪದಕ ಮಿಸ್

ಆರ್ಚರಿಯಲ್ಲಿ ಭಾರತದ ಪದಕ ಗೆಲ್ಲುವ ಆಸೆ ಭಗ್ನಗೊಂಡಿದೆ. ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ದೀಪಿಕಾ ಕುಮಾರಿ, ಕ್ವಾರ್ಟರ್​​ ಫೈನಲ್ಸ್​​ನಲ್ಲಿ ಮುಗ್ಗರಿಸಿ ಒಲಿಂಪಿಕ್ಸ್​ನಿಂದ ನಿರ್ಗಮಿಸಿದ್ದಾರೆ. ಚೊಚ್ಚಲ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ದೀಪಿಕಾ ಹೋರಾಟ ಕ್ವಾರ್ಟರ್‌ ಫೈನಲ್‌ನಲ್ಲಿ ಅಂತ್ಯವಾಗಿದೆ. ಕ್ವಾರ್ಟರ್​​ ಪೈನಲ್ಸ್​​​ನಲ್ಲಿ ಪ್ರಬಲ ದಕ್ಷಿಣ ಕೊರಿಯಾದ ಆನ್‌ ಸಾನ್‌ ವಿರುದ್ಧ ನಿರಾಸ ಪ್ರದರ್ಶನ ನೀಡಿದ ದೀಪಿಕಾ ಕುಮಾರಿ, 6-0 ಅಂತರದಲ್ಲಿ ಸೋಲು ಕಂಡರು. ಇದರೊಂದಿಗೆ ದಕ್ಷಿಣ ಕೊರಿಯಾ ಆಟಗಾರ್ತಿ ಆನ್ ಸಾನ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.. ಪದಕ ಗೆಲ್ಲುವ ಭರವಸೆ ಹುಟ್ಟಿಸಿದ್ದ ದೀಪಿಕಾ ಕುಮಾರಿ ಕ್ವಾರ್ಟರ್​ ಫೈನಲ್​ನಿಂದ ನಿರ್ಗಮಿಸಿ ನಿರಾಸೆ ಮೂಡಿಸಿದರು.

The post ಕ್ವಾರ್ಟರ್​ ಫೈನಲ್ಸ್​ ಸೋತ ದೀಪಿಕಾ ಕುಮಾರಿ- ಆರ್ಚರಿಯಲ್ಲಿ ಭಾರತಕ್ಕೆ ಪದಕ ಮಿಸ್ appeared first on News First Kannada.

Source: newsfirstlive.com

Source link