ಬ್ಯಾಡ್ಮಿಂಟನ್; ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು.. ಮೆಡಲ್​​ಗೆ ಒಂದು ಹೆಜ್ಜೆಯಷ್ಟೇ ಬಾಕಿ

ಬ್ಯಾಡ್ಮಿಂಟನ್; ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು.. ಮೆಡಲ್​​ಗೆ ಒಂದು ಹೆಜ್ಜೆಯಷ್ಟೇ ಬಾಕಿ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತೀಯ ಷಟ್ಲರ್​ ಪಿ.ವಿ.ಸಿಂಧು, ಕ್ವಾರ್ಟರ್​ ಫೈನಲ್​​ನಲ್ಲಿ ಗೆಲುವು ದಾಖಲಿಸಿದ್ದಾರೆ. ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಎರಡು ನೇರ ಸೆಟ್​​ಗಳಲ್ಲೇ ಬಗ್ಗು ಬಡಿದಿದ್ದಾರೆ. 21-13, 22-20ರ ಅಂತರದಲ್ಲಿ ಪ್ರತಿಸ್ಫರ್ಧಿ ವಿರುದ್ಧ ಅಮೋಘ ಗೆಲುವು ಸಾಧಿಸಿದ ಸಿಂಧು, ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ.

The post ಬ್ಯಾಡ್ಮಿಂಟನ್; ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು.. ಮೆಡಲ್​​ಗೆ ಒಂದು ಹೆಜ್ಜೆಯಷ್ಟೇ ಬಾಕಿ appeared first on News First Kannada.

Source: newsfirstlive.com

Source link