ನಾನು ಮಾತನಾಡ್ತಿಲ್ಲ.. ಅವರ ಪಿಎ ಮಾತಾಡ್ತಿರೋದು..- ‘ಮೊಟ್ಟೆ ಡೀಲ್​’ ಬಗ್ಗೆ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ

ನಾನು ಮಾತನಾಡ್ತಿಲ್ಲ.. ಅವರ ಪಿಎ ಮಾತಾಡ್ತಿರೋದು..- ‘ಮೊಟ್ಟೆ ಡೀಲ್​’ ಬಗ್ಗೆ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ

ಬೆಂಗಳೂರು: ಮೊಟ್ಟೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಣ್ಣ ಮುನವಳ್ಳಿಗೆ ನ್ಯೂಸ್​ ಫಸ್ಟ್​ ಕಾಲ್​ಮಾಡಿ ಪ್ರಕರಣದ ವಿಚಾರವಾಗಿ ಹೇಳಿಕೆ ನೀಡುವಂತೆ ಕೇಳಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಘಟನೆ ನಡೆಯಿತು. ತಾವೇ ಫೋನ್​ನಲ್ಲಿ ಮಾತನಾಡಿದರೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಪರಣ್ಣ ಮುನವಳ್ಳಿ.. ಮಾತಾಡ್ತಿರೋದು ನಾನಲ್ಲ.. ಅವರ ಪಿ ಎ ಮಾತಾಡ್ತಿರೋದು ಎಂದು ಹೇಳಿದ್ದಾರೆ.

ನ್ಯೂಸ್​ಫಸ್ಟ್​ ಜೊತೆಗಿನ ಪರಣ್ಣ ಮುನ್ನವಳ್ಳಿ ಜೊತೆಗಿನ ಸಂಭಾಷಣೆ ಹೀಗಿತ್ತು..

ನ್ಯೂಸ್​ಫಸ್ಟ್​: ಸರ್ ಪರಣ್ಣ ಮುನವಳ್ಳಿ ಹೌದಲ್ರೀ..?
ಪರಣ್ಣ ಮುನವಳ್ಳಿ: ಯಾರ್ ಮಾತಾಡೋದು ತಾವು..?
ನ್ಯೂಸ್​ಫಸ್ಟ್​: ಜಿಲ್ಲಾ ರಿಪೋರ್ಟರ್ ಸರ್ ಮಾತಾಡೋದು..
ಪರಣ್ಣ ಮುನವಳ್ಳಿ: ಅಲ್ಲಿ ಹೊರಗಡೆ ಇದ್ದಾರೆ.. ಮೀಟಿಂಗ್​ನಲ್ಲಿ ಇದ್ದಾರೆ.. ಆಮೇಲೆ ಹಚ್ಚುತ್ತೇನೆ..
ನ್ಯೂಸ್​ಫಸ್ಟ್​: ಸರ್., ಪ್ರಕರಣದ ಬಗ್ಗೆ ಒಂಚೂರು ಹೇಳಿ ಸರ್.. ಸ್ಟಿಂಗ್ ಮಾಡಿದ್ರಲ್ಲಿ ನೀವು ಇದ್ದೀರಿ.. ಪ್ರಕರಣದಲ್ಲಿ ಅದೀರಿ ಅನ್ನೋದನ್ನ ಒಂಚೂರು ಪ್ರತಿಕ್ರಿಯೆ ನೀಡಿ..
ಪರಣ್ಣ ಮುನವಳ್ಳಿ: ಹೋಗಿ ಕಳಿಸ್ತೀನಿ ಕಾಯಿರಿ..
ನ್ಯೂಸ್​ಫಸ್ಟ್: ಅಲ್ಲ ಸರ್ ನೀವೇ ಮಾಡ್ತಿದ್ದೀರಿ ಅಂತ ಗೊತ್ತು.. ನೀವೇ ರಿಯಾಕ್ಷನ್ ಕೊಡಿ
ಪರಣ್ಣ ಮುನವಳ್ಳಿ: ಇಲ್ಲ ರೀ..ನಾನು ಮಾತನಾಡುತ್ತಿಲ್ಲ.. ಅವರ ಪಿಎ ರೀ ನಾನು..
ನ್ಯೂಸ್​ಫಸ್ಟ್: ಸ್ಟಿಂಗ್​ ಅಲ್ಲಿ ನೀವು ಇರೋದ್ರ ಬಗ್ಗೆ ಸ್ವಲ್ಪ ಹೇಳಿ..
ಪರಣ್ಣ ಮುನವಳ್ಳಿ: ಇಲ್ಲ ರೀ ನಾನು ಅಲ್ಲ.. ನಾನು ಪಿಎ ರೀ.. ಬರ್ತಾರೆ ಕಾಯಿರಿ..
ನ್ಯೂಸ್​ಫಸ್ಟ್: ಅಲ್ಲ ಸರ್ ನೀವೇ.. ನಮಗೆ ನಿಮ್ಮ ಧ್ವನಿ ಗೊತ್ತಿದೆ..

The post ನಾನು ಮಾತನಾಡ್ತಿಲ್ಲ.. ಅವರ ಪಿಎ ಮಾತಾಡ್ತಿರೋದು..- ‘ಮೊಟ್ಟೆ ಡೀಲ್​’ ಬಗ್ಗೆ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ appeared first on News First Kannada.

Source: newsfirstlive.com

Source link