ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ

ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ, ಕೇವಲ ಐದು ದಿನಗಳಷ್ಟೆ ಬಾಕಿ ಉಳಿದಿದೆ. ಇದಕ್ಕಾಗಿ ಟೀಮ್​ ಇಂಡಿಯಾ, ಭರ್ಜರಿ ಸಿದ್ಧತೆ ನಡೆಸಿಕೊಳ್ತಿದೆ. ಡುರ್ಹ್ಯಾಮ್​ನಲ್ಲಿ ಅಭ್ಯಾಸ ನಡೆಸ್ತಿರುವ ಟೀಮ್ ಇಂಡಿಯಾ ವೇಗಿಗಳಾದ ಜಸ್​ಪ್ರಿತ್​ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್​ ಯಾದವ್​, ಮೊಹಮ್ಮದ್​​ ಶಮಿ ಮತ್ತು ಮೊಹಮ್ಮದ್​ ಸಿರಾಜ್,​ ನೆಟ್ಸ್​​​​ನಲ್ಲಿ ಕಾಣಿಸಿಕೊಂಡ್ರು. ಇವರ ಜೊತೆಗೆ ಸ್ಪಿನ್ನರ್​ಗಳಾದ ಅಕ್ಷರ್ ಪಟೇಲ್​, ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​ ಕೂಡ ಅಭ್ಯಾಸ ನಡೆಸಿದ್ರು.

ಇನ್ನು ಬ್ಯಾಟ್ಸ್​ಮನ್​ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಅಜಿಂಕ್ಯಾ ರಹಾನೆ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ ಕೂಡ ಕಠಿಣ ತಾಲೀಮು ನಡೆಸಿ, ಸರಣಿಗೂ ಮುನ್ನವೇ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಭಾರತ – ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ, ಆಗಸ್ಟ್ 4ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 14ಕ್ಕೆ ಅಂತ್ಯಗೊಳ್ಳಲಿದೆ. ಸರಣಿ ಪ್ರಾರಂಭಕ್ಕೂ ಮುನ್ನ ಇಂಗ್ಲೆಂಡ್​​ನ ಕೌಂಟಿ ಇಲೆವೆನ್​ ವಿರುದ್ಧ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಮ್​ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ, ಡ್ರಾ ಸಾಧಿಸಿತ್ತು.

The post ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ appeared first on News First Kannada.

Source: newsfirstlive.com

Source link