ನನ್ನ ಗಾಡಿಗ್ಯಾಕೇ ಮೊದಲು ಡೀಸೆಲ್​​​ ಹಾಕಕಿಲ್ಲ; ಹೀಗೆಂದು ಪೆಟ್ರೋಲ್​​​​​​ ಬಂಕ್​ ಸಿಬ್ಬಂದಿ ಮೇಲೆ ಹಲ್ಲೆ

ನನ್ನ ಗಾಡಿಗ್ಯಾಕೇ ಮೊದಲು ಡೀಸೆಲ್​​​ ಹಾಕಕಿಲ್ಲ; ಹೀಗೆಂದು ಪೆಟ್ರೋಲ್​​​​​​ ಬಂಕ್​ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರು: ಮೊದಲು ತನ್ನ ಗಾಡಿಗೆ ಡೀಸೆಲ್​ ಹಾಕಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೋರ್ವ ಪೆಟ್ರೋಲ್​ ಬಂಕ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ಹೊರಭಾಗದ ಪೇಟ್ರೋಲ್​ ಬಂಕ್​ನ ಸಿಬ್ಬಂದಿ ಮೇಲೆ ಹಂಚಿಪುರದ ಡೈರಿ ರಾಮಚಂದ್ರಪ್ಪನ ಮಗ ಗುಣ ಎಂಬಾತ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗುಣ ಮತ್ತು ಆತನ ಸ್ನೇಹಿತ ಬಿಎಂಟಿಸಿಯ ಡ್ರೈವರ್​​​​ ಮೂರ್ತಿ ಎಂಬುವವರು ಪ್ರತ್ಯೇಕ ಎರಡು ಫಾರ್ಚೂನರ್​ ಕಾರಿನಲ್ಲಿ ಡೀಸೆಲ್​ ಹಾಕಿಸಲು ಎಸ್​ಎಲ್​ಆರ್​ ಪೆಟ್ರೋಲ್​ ಬಂಕ್​ಗೆ  ಬಂದಿದ್ದಾರೆ.

ಈ ವೇಳೆ ಬಂಕ್​ ಸಿಬ್ಬಂದಿ ಬೇರೆಯವರಿಗೆ ಡೀಸೆಲ್​ ಹಾಕುತ್ತಿದ್ದನಂತೆ ಇದನ್ನು ನೋಡಿ ಬಂಕ್​ ಸಿಬ್ಬಂದಿ ಮೇಲೆ ಅವ್ಯಾಚ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾನೆ ಎನ್ನಲಾಗಿದೆ.  ಇದನ್ನು ಪ್ರಶ್ನಿಸಿದ ಬಂಕ್​ ಸಿಬ್ಬಂದಿ ವೆಂಕಟೇಶ್ ಮೇಲೆ ಗುಣ ಮತ್ತು ಆತನ ಸ್ನೇಹಿತ ಮೂರ್ತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಬಂಕ್​ನಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದ್ದು , ಸಿಸಿಟಿವಿ ಸಮೇತ ನೆಲಮಂಗಲ ಪೊಲೀಸ್​ ಠಾಣೆಗೆ ಬಂಕ್​ ಸಿಬ್ಬಂದಿಗಳು ದೂರು ನೀಡಿದ್ದಾರೆ.

The post ನನ್ನ ಗಾಡಿಗ್ಯಾಕೇ ಮೊದಲು ಡೀಸೆಲ್​​​ ಹಾಕಕಿಲ್ಲ; ಹೀಗೆಂದು ಪೆಟ್ರೋಲ್​​​​​​ ಬಂಕ್​ ಸಿಬ್ಬಂದಿ ಮೇಲೆ ಹಲ್ಲೆ appeared first on News First Kannada.

Source: newsfirstlive.com

Source link