‘ನಮ್ಮ ಬಳಿ ಎಲ್ಲಾ ಇದ್ರೂ ಯಾಕಿಂಥ ಕೆಲ್ಸ ಮಾಡಿದ್ರಿ..?; ರಾಜ್​ ಕುಂದ್ರಾ ವಿರುದ್ಧ ಶಿಲ್ಪಾ ಶೆಟ್ಟಿ ಆಕ್ರೋಶ

‘ನಮ್ಮ ಬಳಿ ಎಲ್ಲಾ ಇದ್ರೂ ಯಾಕಿಂಥ ಕೆಲ್ಸ ಮಾಡಿದ್ರಿ..?; ರಾಜ್​ ಕುಂದ್ರಾ ವಿರುದ್ಧ ಶಿಲ್ಪಾ ಶೆಟ್ಟಿ ಆಕ್ರೋಶ

“ನಮ್ಮ ಬಳಿ ಎಲ್ಲವೂ ಇತ್ತು, ಸಮಾಜದಲ್ಲಿ ಉತ್ತಮ ಸ್ಥಾನವೂ ಹೊಂದಿದ್ದೆವು. ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿದ್ದೆವು. ಹೀಗಿದ್ದರೂ ಯಾಕೆ ಇಂತಹ ಕೆಟ್ಟ ಕೆಲಸ ಮಾಡಿದ್ರಿ” ಎಂದು ಅಶ್ಲೀಲ ಚಿತ್ರ ನಿರ್ಮಾಣ ಆರೋಪದಲ್ಲಿ ಜೈಲು ಸೇರಿದ ಉದ್ಯಮಿ ರಾಜ್​​ ಕುಂದ್ರಾಗೆ ಪತ್ನಿ ಶಿಲ್ಪಾ ಶೆಟ್ಟಿ ಫುಲ್​​ ತೆಗೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

blank

ಹೌದು, ಇತ್ತೀಚೆಗೆ ಪೊಲೀಸರ ವಿಚಾರಣೆ ವೇಳೆ ರಾಜ್​​ ಕುಂದ್ರಾ ಮುಂದೆಯೇ ಶಿಲ್ಪಾ ಶೆಟ್ಟಿ ಹೀಗೆ ಕಿರುಚಾಡಿದ್ದಾರೆ. ನಾವು ಎಲ್ಲರಿಗಿಂತಲೂ ಚೆನ್ನಾಗಿದ್ದೇವೆ. ನಮ್ಮ ಉದ್ಯಮವೂ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಆದರೀಗ, ನೀವು ಮಾಡಿದ ಕೆಲಸದಿಂದ ಕುಟುಂಬದ ಗೌರವ ಹಾಳಾಯ್ತು. ನಿಮ್ಮಿಂದ ಚೆನ್ನಾಗಿ ನಡೆಯುತ್ತಿದ್ದ ಎಲ್ಲಾ ಪ್ರಾಜೆಕ್ಟುಗಳು ರದ್ದಾಗಿವೆ ಎಂದು ಶಿಲ್ಪಾ ಶೆಟ್ಟಿ ರೇಗಾಡಿದ್ದಾರಂತೆ.

blank

ಇನ್ನು, ನೀಲಿ ಚಿತ್ರ ನಿರ್ಮಾಣ ಆರೋಪ ಪ್ರಕರಣ ಸಂಬಂಧ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ಎರಡು ವಾರದಿಂದ ಸಖತ್ ಸುದ್ದಿಯಾಗ್ತಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ರಾಜ್​ ಕುಂದ್ರಾ ಅವರನ್ನ ಸದ್ಯ ಮುಂಬೈ ಪೊಲೀಸರು ಬಂಧಿಸಿದ್ದಾರೆ.

The post ‘ನಮ್ಮ ಬಳಿ ಎಲ್ಲಾ ಇದ್ರೂ ಯಾಕಿಂಥ ಕೆಲ್ಸ ಮಾಡಿದ್ರಿ..?; ರಾಜ್​ ಕುಂದ್ರಾ ವಿರುದ್ಧ ಶಿಲ್ಪಾ ಶೆಟ್ಟಿ ಆಕ್ರೋಶ appeared first on News First Kannada.

Source: newsfirstlive.com

Source link