ಹಿಮಾಚಲ ಪ್ರದೇಶದಲ್ಲಿ ಮಳೆಯ ರುದ್ರ ನರ್ತನ; ಅರ್ಧ ಬೆಟ್ಟವೇ ಕುಸಿದುಬಿದ್ದ ವಿಡಿಯೋ ವೈರಲ್

ಹಿಮಾಚಲ ಪ್ರದೇಶದಲ್ಲಿ ಮಳೆಯ ರುದ್ರ ನರ್ತನ; ಅರ್ಧ ಬೆಟ್ಟವೇ ಕುಸಿದುಬಿದ್ದ ವಿಡಿಯೋ ವೈರಲ್

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬೆಟ್ಟವೊಂದರ ಅರ್ಧ ಭಾಗವೇ ಕುಸಿದು ಬೀಳುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಭೀತಿ ಹುಟ್ಟಿಸುವಂತಿದೆ.

ಬೆಟ್ಟ ಪ್ರದೇಶದ ಜೊತೆಗೆ ಆ ಪ್ರದೇಶದಲ್ಲಿ ಹಾದುಹೋಗಿದ್ದ ಸುಮಾರು 100 ಮೀ ಉದ್ದದ ರಸ್ತೆಯೂ ಸಹ ಭೂಕುಸಿತದಿಂದ ಸಂಪೂರ್ಣ ನಾಶವಾಗಿದೆ. ಈ ರಸ್ತೆ ಪವೊಂಟಾ ಸಾಹಿಬ್ ಮತ್ತು ಶಿಲ್ಲೈ ಹಟ್ಕೋರಿ ಮಧ್ಯೆಯ ಹೆದ್ದಾರಿಯಾಗಿದ್ದು ಸದ್ಯ ಸಂಪರ್ಕ ಕಡಿತಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ರಣಮಳೆಗೆ ಕೇವಲ ಭೂಕುಸಿತ ಮಾತ್ರವಲ್ಲದೇ ಅಲ್ಲಲ್ಲಿ ಪ್ರವಾಹ ಪರಿಸ್ಥಿತಿಯೂ ಎದುರಾಗಿದೆ.

ನಿನ್ನೆ ಸಂಭವಿಸಿದ ಭೂಕುಸಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು 9 ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ. ಅಲ್ಲದೇ 175 ಟೂರಿಸ್ಟ್​ಗಳು ನಿರಾಶ್ರಿತರಾಗಿದ್ದಾರೆ ಎನ್ನಲಾಗಿದೆ.

The post ಹಿಮಾಚಲ ಪ್ರದೇಶದಲ್ಲಿ ಮಳೆಯ ರುದ್ರ ನರ್ತನ; ಅರ್ಧ ಬೆಟ್ಟವೇ ಕುಸಿದುಬಿದ್ದ ವಿಡಿಯೋ ವೈರಲ್ appeared first on News First Kannada.

Source: newsfirstlive.com

Source link